- Kannada News Photo gallery Cricket photos IPL 2024: RCB Better To play With 11 Batters: Kris Srikkanth
IPL 2024: RCB 11 ಬ್ಯಾಟರ್ಗಳೊಂದಿಗೆ ಕಣಕ್ಕಿಳಿಯಲಿ..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಆರ್ಸಿಬಿ ಇದುವರೆಗೆ 7 ಪಂದ್ಯಗಳನ್ನಾಡಿದೆ. ಈ ಏಳು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮಾತ್ರ ಗೆದ್ದಿದೆ. ಇನ್ನುಳಿದಂತೆ ಸಿಎಸ್ಕೆ, ಲಕ್ನೋ ಸೂಪರ್ ಜೈಂಟ್ಸ್, ಕೆಕೆಆರ್, ರಾಜಸ್ಥಾನ್ ರಾಯಲ್ಸ್, ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಸೋಲನುಭವಿಸಿದೆ.
Updated on: Apr 18, 2024 | 9:55 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂದಿನ ಪಂದ್ಯಗಳಲ್ಲಿ 11 ಬ್ಯಾಟರ್ಗಳೊಂದಿಗೆ ಕಣಕ್ಕಿಳಿಯುವುದು ಉತ್ತಮ ಎಂದಿದ್ದಾರೆ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್. ಆರ್ಸಿಬಿ ತಂಡದ ಸದ್ಯದ ಪರಿಸ್ಥಿತಿ ನೋಡಿದರೆ ಪ್ಲೇಯಿಂಗ್ ಇಲೆವೆನ್ನಲ್ಲಿ ಹನ್ನೊಂದು ಬ್ಯಾಟ್ಸ್ಮನ್ ಆಡುವುದು ಒಳ್ಳೆದು ಶ್ರೀಕಾಂತ್ ವ್ಯಂಗ್ಯವಾಡಿದ್ದಾರೆ.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸಿಬಿ ಬೌಲರ್ಗಳು 287 ರನ್ಗಳನ್ನು ಬಿಟ್ಟು ಕೊಟ್ಟಿದ್ದಾರೆ. ಈ ಬೌಲರ್ಗಳಿಗಿಂತ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುವುದು ಉತ್ತಮ. ಅವರ ಜೊತೆಗೆ ಕ್ಯಾಮರೋನ್ ಗ್ರೀನ್ 4 ಓವರ್ ಎಸೆಯುತ್ತಾರೆ. ಹಾಗೆಯೇ ಫಾಫ್ ಡುಪ್ಲೆಸಿಸ್ 2 ಓವರ್ ಬೌಲ್ ಮಾಡಲಿ. ಹೀಗೆ ಯಾರಿಗೆಲ್ಲಾ ಬೌಲಿಂಗ್ ಬರುತ್ತೆ ಅವರೆಲ್ಲಾ ಓವರ್ ಎಸೆಯಲಿ.

ಏಕೆಂದರೆ ಆರ್ಸಿಬಿ ತಂಡದಲ್ಲಿರುವ ಬೌಲರ್ಗಳು ಹೆಚ್ಚಿನ ರನ್ ನೀಡುತ್ತಿದ್ದಾರೆ. ಅವರನ್ನು ಬೌಲರ್ಗಳಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಣಕ್ಕಿಳಿಸಿ ಯಾವುದೇ ಪ್ರಯೋಜನವಿಲ್ಲ. ಅದಕ್ಕಿಂತ ಉತ್ತಮ 11 ಬ್ಯಾಟ್ಸ್ಮನ್ಗಳು ಕಣಕ್ಕಿಳಿದು ಬೌಲಿಂಗ್ ಮಾಡುವುದು. ಅವರು ನೀಡಿದ ರನ್ಗಳನ್ನು ಅವರೇ ಚೇಸ್ ಮಾಡಬಹುದು. ಈ ಮೂಲಕ ಆರ್ಸಿಬಿ ಸಂಪೂರ್ಣ ಬ್ಯಾಟ್ಸ್ಮನ್ಗಳೊಂದಿಗೆ ಕಣಕ್ಕಿಳಿದು ಪಂದ್ಯ ಗೆಲ್ಲಬಹುದು ಎಂದು ಕ್ರಿಸ್ ಶ್ರೀಕಾಂತ್ ಹೇಳಿದ್ದಾರೆ.

ಆರ್ಸಿಬಿ ರೀಸ್ ಟೋಪ್ಲಿ, ಲಾಕಿ ಫರ್ಗುಸನ್ ಅವರಂತಹ ಬೌಲರ್ಗಳನ್ನು ಖರೀದಿಸಿದ್ದಾರೆ. ಅದರಲ್ಲೂ ಫರ್ಗುಸನ್ ಯಾವತ್ತೂ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಇದೀಗ ಇವರನ್ನೆಲ್ಲಾ ಪ್ಲೇಯಿಂಗ್ ಇಲೆವೆನ್ನಲ್ಲಿ ಕಣಕ್ಕಿಳಿಸಲಾಗುತ್ತಿದೆ. ನನ್ನ ಪ್ರಕಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ 11 ಬ್ಯಾಟರ್ಗಳನ್ನು ಕಣಕ್ಕಿಳಿಸಿ ಪಂದ್ಯ ಗೆಲ್ಲಲು ಪ್ರಯತ್ನಿಸುವುದು ಉತ್ತಮ ಎಂದು ಶ್ರೀಕಾಂತ್ ಸಲಹೆ ನೀಡಿದ್ದಾರೆ.

ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 21 ರಂದು ನಡೆಯಲಿರುವ ಈ ಪಂದ್ಯಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನವು ಆತಿಥ್ಯವಹಿಸಲಿದೆ. ಇದಕ್ಕೂ ಮುನ್ನ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ದ್ವಿತೀಯಾರ್ಧದಲ್ಲಿ ಆರ್ಸಿಬಿ ಸೋಲಿನ ಸೇಡು ತೀರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
