- Kannada News Photo gallery Cricket photos IPL 2024: RCB Match Ticket Price: Ipl 2024 rcb match tickets
IPL 2024: RCB ಪಂದ್ಯದ ಟಿಕೆಟ್ ಬೆಲೆ 50 ಸಾವಿರ ರೂ..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) ಮೊದಲಾರ್ಧದ 7 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿರುವುದು ಕೇವಲ 1 ಮ್ಯಾಚ್ನಲ್ಲಿ ಮಾತ್ರ. ಇದೀಗ ದ್ವಿತೀಯಾರ್ಧದ ಏಳು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ತಂಡವು ಪ್ಲೇಆಫ್ ಹಂತಕ್ಕೇರಬೇಕಾದ ಅನಿವಾರ್ಯತೆ ಎದುರಾಗಿದೆ.
Updated on: Apr 18, 2024 | 11:57 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ಮೊದಲಾರ್ಧದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್ಸಿಬಿ ದ್ವಿತೀಯಾರ್ಧದಲ್ಲಿ 7 ಪಂದ್ಯಗಳನ್ನಾಡಬೇಕಿದೆ. ಈ ಏಳು ಪಂದ್ಯಗಳಲ್ಲಿ 3 ಮ್ಯಾಚ್ಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಗಳ ಟಿಕೆಟ್ ಬೆಲೆ ಇದೀಗ ಬಹಿರಂಗವಾಗಿದೆ.

ಆರ್ಸಿಬಿ ತಂಡದ ತವರಿನ ಪಂದ್ಯಗಳ ಟಿಕೆಟ್ 2,300 ರೂ. ನಿಂದ ಶುರುವಾಗಲಿದೆ. ಹಾಗೆಯೇ ಪಿ2 ಸ್ಟ್ಯಾಂಡ್ ಟಿಕೆಟ್ 42,350 ರೂ.ಗೆ ಮಾರಾಟವಾಗಲಿದೆ. ಈ ಬೆಲೆಯು 50 ಸಾವಿರ ರೂ.ಗಳನ್ನು ದಾಟಲಿದೆ ಎಂದು ವರದಿಯಾಗಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ , RCB ಹೋಮ್ ಗೇಮ್‌ಗಾಗಿ ಅತ್ಯುತ್ತಮ ಸೀಟ್‌ಗಾಗಿ ಕೊನೆಯ ನಿಮಿಷದ ಬುಕಿಂಗ್ ಮಾಡುತ್ತಿದ್ದರೆ 52,938 ರೂ. ಪಾವತಿಸಬೇಕಾಗುತ್ತದೆ. ಹೀಗಾಗಿ ಆರ್ಸಿಬಿ ತಂಡದ ಮುಂದಿನ ಪಂದ್ಯಗಳ ಟಿಕೆಟ್ ದರಗಳು ಗಗನಕ್ಕೇರುವುದನ್ನು ನಿರೀಕ್ಷಿಸಬಹುದು.

ಇದಕ್ಕೂ ಮುನ್ನ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಪೆವಿಲಿಯನ್ ಟೆರೇಸ್‌ನ ಸ್ವಲ್ಪ ಕೆಳಗಿರುವ ಖತಾರ್ ಏರ್‌ವೇಸ್ ಪಿ2 ಸ್ಟ್ಯಾಂಡ್ನ ಟಿಕೆಟ್ ಬೆಲೆಗಳು 55,055 ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿತ್ತು. ಹೀಗಾಗಿ ಕೊನೆಯ ಮೂರು ಪಂದ್ಯಗಳ ವಿಐಪಿ ಟಿಕೆಟ್ ದರಗಳು ಮತ್ತಷ್ಟು ದುಬಾರಿಯಾಗಲಿದೆ.

ಹಾಗೆಯೇ ಎ ಸ್ಟ್ಯಾಂಡ್ (2300 ರೂ.) ಅನ್ನು ಹೊರತುಪಡಿಸಿ, ಆರ್ಸಿಬಿ ತಂಡದ ಉಳಿದ ಸ್ಟ್ಯಾಂಡ್ಗಳ ಟಿಕೆಟ್ ದರಗಳು 3300 ರೂ, 4840 ರೂ, 6050 ರೂ, 9075 ರೂ, 10890 ರೂ, 24200 ರೂ. ರೇಂಜ್ನಲ್ಲಿದೆ. ಇದು ಆರಂಭಿಕ ಬೆಲೆಯಷ್ಟೇ. ಅಂದರೆ ಈ ಟಿಕೆಟ್ ದರಗಳು ಮತ್ತಷ್ಟು ದುಬಾರಿಯಾದರೂ ಅಚ್ಚರಿಪಡಬೇಕಿಲ್ಲ.

ಅಂದಹಾಗೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್‌ನ ಹೋಮ್ ಗೇಮ್‌ಗಳ ಟಿಕೆಟ್ ದರ 499 ರೂ.ನಿಂದ ಶುರುವಾಗುತ್ತದೆ. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳ ತವರು ಮೈದಾನದ ಪಂದ್ಯಗಳ ಟಿಕೆಟ್ ದರವನ್ನು ಕ್ರಮವಾಗಿ 1700 ಮತ್ತು 2000 ರೂ. ಎಂದು ನಿಗದಿ ಮಾಡಲಾಗಿದೆ. ಅಲ್ಲದೆ ಈ ಫ್ರಾಂಚೈಸಿಗಳು 20 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ಟಿಕೆಟ್ ಅನ್ನು ಮಾರಾಟ ಮಾಡುತ್ತಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದರೆ ಆರ್ಸಿಬಿ ಫ್ರಾಂಚೈಸಿಯ ಟಿಕೆಟ್ ದರಗಳು ಉಳಿದೆಲ್ಲಾ ತಂಡಗಳಿಗಿಂತ ಹೆಚ್ಚಿರುವುದು ಸ್ಪಷ್ಟ.
