Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: RCB vs DC ಮ್ಯಾಚ್ ಫಿಕ್ಸ್: ನೆಟ್ಟಿಗರ ಗಂಭೀರ ಆರೋಪ..!

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಟ್ಟು 4 ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ. ಒಂದು ವೇಳೆ ಈ ಕ್ಯಾಚ್​ಗಳನ್ನು ಹಿಡಿದಿದ್ದರೆ ಆರ್​ಸಿಬಿ ತಂಡವನ್ನು ಕೇವಲ 150 ರನ್​ಗಳ ಒಳಗೆ ನಿಯಂತ್ರಿಸಬಹುದಿತ್ತು ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ. ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಕಳಪೆ ಫೀಲ್ಡಿಂಗ್ ಮುಳುವಾಗಿದೆ. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರ ಈ ಕಳಪೆಯಾಟದ ಬಗ್ಗೆ ಗಂಭೀರ ಆರೋಪಗಳು ಕೂಡ ಕೇಳಿ ಬರಲಾರಂಭಿಸಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: May 13, 2024 | 10:52 AM

IPL 2024: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್​ನ 62ನೇ ಪಂದ್ಯದಲ್ಲಿ ಆರ್​ಸಿಬಿ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಂಗಾಮಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು.

1 / 7
ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆದರೆ ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡರ್​ಗಳು ಬರೋಬ್ಬರಿ 4 ಕ್ಯಾಚ್​ಗಳನ್ನು ಕೈಚೆಲ್ಲಿದ್ದರು ಎಂಬುದೇ ಆಶ್ಚರ್ಯ.

2 / 7
9ನೇ ಓವರ್​ನ 2ನೇ ಎಸೆತದಲ್ಲಿ ವಿಲ್ ಜಾಕ್ಸ್ ನೀಡಿದ ಕ್ಯಾಚ್​ ಅನ್ನು ಅಕ್ಷರ್ ಪಟೇಲ್ ಕೈಚೆಲ್ಲಿದ್ದರು. ಇದೇ ಓವರ್​ನ 5ನೇ ಎಸೆತದಲ್ಲಿ ರಜತ್ ಪಾಟಿದಾರ್ ಅವರ ಕ್ಯಾಚ್​ ಅನ್ನು ಶಾಯ್ ಹೋಪ್ ಕೈಬಿಟ್ಟಿದ್ದರು.

3 / 7
ಇನ್ನು 10ನೇ ಓವರ್​ನ 4ನೇ ಎಸೆತದಲ್ಲಿ ಜಾಕ್ಸ್ ಬಾರಿಸಿದ ಚೆಂಡನ್ನು ಹಿಡಿಯುವಲ್ಲಿ ಟ್ರಿಸ್ಟಾನ್ ಸ್ಟಬ್ಸ್ ವಿಫಲರಾಗಿದ್ದರು. ಹಾಗೆಯೇ 10ನೇ ಓವರ್​ನ ಮೊದಲ ಎಸೆತದಲ್ಲಿ ರಜತ್ ಪಾಟಿದಾರ್ ನೀಡಿದ ಸುಲಭ ಕ್ಯಾಚ್ ಅನ್ನು ಅಕ್ಷರ್ ಪಟೇಲ್ ಕೈಚೆಲ್ಲಿದ್ದರು.

4 / 7
ಅಂದರೆ ಕೇವಲ 2 ಓವರ್​ಗಳ ಅಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡರ್​ಗಳು 4 ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ. ಇದೇ ಕಾರಣದಿಂದ ಇದೀಗ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ಫಿಕ್ಸ್ ಆಗಿತ್ತಾ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

5 / 7
ಇದೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸ್ಪೋಟಕ ದಾಂಡಿಗ ಟ್ರಿಸ್ಟಾನ್ ಸ್ಟಬ್ಸ್ ರನೌಟ್ ಆದ ರೀತಿ ಕೂಡ ಈ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಏಕೆಂದರೆ ಸ್ಟ್ರೈಕ್​ನಲ್ಲಿದ್ದ ಅಕ್ಷರ್ ಪಟೇಲ್ ರನ್ ಕರೆ ನೀಡದಿದ್ದರೂ ಸ್ಟಬ್ಸ್ ಪಿಚ್​ನ ಮಧ್ಯ ಭಾಗದವರೆಗೂ ಓಡಿದ್ದು ಯಾಕೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

6 / 7
ಒಂದೆಡೆ 4 ಕ್ಯಾಚ್​ಗಳ ಡ್ರಾಪ್, ಮತ್ತೊಂದೆಡೆ ಸುಲಭ ರನೌಟ್​ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಅದರಲ್ಲೂ ಅತ್ಯುತ್ತಮ ಫೀಲ್ಡರ್ ಎನಿಸಿಕೊಂಡಿರುವ ಅಕ್ಷರ್ ಪಟೇಲ್​ 2 ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿರುವುದು ಅಚ್ಚರಿ. ಹೀಗಾಗಿಯೇ RCB - DC ನಡುವಣ ಪಂದ್ಯ ಫಿಕ್ಸ್ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ.

7 / 7
Follow us
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ

ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ

ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!

ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ

ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್

ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ

ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ

ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್

ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು

VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!