IPL 2024: ಒಂದು ರನ್ಗೆ 21 ಲಕ್ಷ ರೂ: ಇದು ಮ್ಯಾಕ್ಸ್ವೆಲ್ ಆಟ..!
IPL 2024 RCB vs RR: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡ ಸೋಲನುಭವಿಸಿದೆ. ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 4 ವಿಕೆಟ್ಗಳ ಜಯ ಸಾಧಿಸಿ, ಕ್ವಾಲಿಫೈಯರ್-2 ಹಂತಕ್ಕೇರಿದರೆ, ಆರ್ಸಿಬಿ ಐಪಿಎಲ್ನಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಆರ್ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅವರ ಪ್ರದರ್ಶನದ ಬಗ್ಗೆ ಚರ್ಚೆಗಳು ಶುರುವಾಗಿದೆ.
Updated on: May 23, 2024 | 1:58 PM

IPL 2024: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಟಗಾರನೆಂದರೆ ಅದು ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell). ಟೂರ್ನಿಯ ಆರಂಭದಿಂದ ಶುರುವಾದ ಈ ವೈಫಲ್ಯವು ಅಂತಿಮ ಪಂದ್ಯದವರೆಗೂ ಮುಂದುವರೆದದ್ದು ಮಾತ್ರ ವಿಪರ್ಯಾಸ.

ಅದರಲ್ಲೂ ನಿರ್ಣಾಯಕ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಗೋಲ್ಡನ್ ಡಕ್ಗೆ ಔಟಾಗಿದ್ದರು. ಇದಾದ ಬಳಿಕ 5ನೇ ಓವರ್ನಲ್ಲಿ ಸುಲಭ ಕ್ಯಾಚ್ವೊಂದನ್ನು ಕೈಚೆಲ್ಲಿದ್ದರು. ಒಂದು ವೇಳೆ ಟಾಮ್ ಕೊಹ್ಲರ್ ಅವರ ಈ ಕ್ಯಾಚ್ ಹಿಡಿದಿದ್ದರೆ ರಾಜಸ್ಥಾನ್ ರಾಯಲ್ಸ್ ತಂಡವು ಆರಂಭದಲ್ಲೇ ಒತ್ತಡಕ್ಕೊಳಗಾಗುತ್ತಿತ್ತು. ಆದರೆ ಅತ್ತ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದ ಮ್ಯಾಕ್ಸ್ವೆಲ್ ಫೀಲ್ಡಿಂಗ್ನಲ್ಲೂ ಆರ್ಸಿಬಿ ಪಾಲಿಗೆ ದುಬಾರಿಯಾದರು.

ಅಷ್ಟೇ ಅಲ್ಲದೆ ಈ ಬಾರಿಯ ಐಪಿಎಲ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಕೊಡುಗೆ ಕೇವಲ 52 ರನ್ಗಳು. ಅಂದರೆ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ದಾರೆ. ಅದರಲ್ಲೂ ಒಂದೇ ಸೀಸನ್ನಲ್ಲಿ 5 ಬಾರಿ ಸೊನ್ನೆಗೆ ಔಟಾಗಿದ್ದಾರೆ ಎಂದರೆ ನಂಬಲೇಬೇಕು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಗ್ಲೆನ್ ಮ್ಯಾಕ್ಸ್ವೆಲ್ಗಾಗಿ ಆರ್ಸಿಬಿ ನೀಡುತ್ತಿರುವ ಸಂಭಾವನೆ. ಅಂದರೆ ಈ ಸೀಸನ್ಗಾಗಿ ಮ್ಯಾಕ್ಸ್ವೆಲ್ ಪಡೆದಿರುವುದು ಬರೋಬ್ಬರಿ 11 ಕೋಟಿ ರೂ. ಅಂದರೆ ಕೇವಲ 52 ರನ್ ಕಲೆಹಾಕಿರುವ ಮ್ಯಾಕ್ಸ್ವೆಲ್ ಪ್ರತಿ ರನ್ಗೆ ಮೊತ್ತ 21 ಲಕ್ಷ ರೂ. ಪಡೆದಿದ್ದಾರೆ.

ಇನ್ನು ಬೌಲಿಂಗ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ 10 ಪಂದ್ಯಗಳಿಂದ ಕೇವಲ 6 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ. ಅಂದರೆ ಆಲ್ರೌಂಡರ್ ಆಗಿ ಮ್ಯಾಕ್ಸ್ವೆಲ್ ಸಂಪೂರ್ಣ ವಿಫಲರಾಗಿದ್ದಾರೆ. ಅದರಲ್ಲೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೈ ಕೊಡುವ ಮೂಲಕ ಆರ್ಸಿಬಿ ತಂಡದ ಸೋಲಿಗೆ ಗ್ಲೆನ್ ಮ್ಯಾಕ್ಸ್ವೆಲ್ ಪ್ರಮುಖ ಕಾರಣಕರ್ತರಾಗಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




