IPL 2024: ಕೈ ಕೊಟ್ಟ ಬೌಲರ್​ಗಳು: ಸಂಕಷ್ಟಕ್ಕೆ ಸಿಲುಕಿದ CSK ತಂಡ..!

Edited By:

Updated on: May 02, 2024 | 11:02 AM

IPL 2024: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (ಐಪಿಎಲ್ 2024) ಸಿಎಸ್​ಕೆ ತಂಡವು ಈವರೆಗೆ 10 ಪಂದ್ಯಗಳನ್ನಾಡಿದೆ. ಈ ಹತ್ತು ಪಂದ್ಯಗಳಲ್ಲಿ 5 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಒಟ್ಟು 10 ಅಂಕಗಳೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ 4ನೇ ಸ್ಥಾನದಲ್ಲಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಎಸ್​ಆರ್​ಹೆಚ್​ ತಂಡಗಳು ಕೂಡ 10 ಅಂಕಗಳನ್ನು ಹೊಂದಿದ್ದು, ಈ ಮೂಲಕ ಪ್ಲೇಫ್ ರೇಸ್​ನಲ್ಲಿದೆ. ಹೀಗಾಗಿ ಸಿಎಸ್​ಕೆ ತಂಡವು ಮುಂದಿನ 4 ಪಂದ್ಯಗಳಲ್ಲಿ ಗೆದ್ದರೆ ಮಾತ್ರ ನೇರವಾಗಿ ಪ್ಲೇಆಫ್ ಹಂತಕ್ಕೇರಲಿದೆ.

1 / 8
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್​ 17ರ ಲೀಗ್ ಪಂದ್ಯಗಳು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಎಲ್ಲಾ ತಂಡಗಳು 10 ಪಂದ್ಯಗಳನ್ನಾಡಿದ್ದು, ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಈ ಪಂದ್ಯಗಳ ಮೂಲಕ ಪ್ಲೇಆಫ್ ಹಂತಕ್ಕೇರುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್​ 17ರ ಲೀಗ್ ಪಂದ್ಯಗಳು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಎಲ್ಲಾ ತಂಡಗಳು 10 ಪಂದ್ಯಗಳನ್ನಾಡಿದ್ದು, ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಈ ಪಂದ್ಯಗಳ ಮೂಲಕ ಪ್ಲೇಆಫ್ ಹಂತಕ್ಕೇರುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ.

2 / 8

ಆದರೆ ಈ ನಿರ್ಣಾಯಕ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಸಂಕಷ್ಟಕ್ಕೆ ಸಿಲುಕಿದೆ. ಅದು ಕೂಡ ಬೌಲರ್​ಗಳಿಂದ ಎಂಬುದು ವಿಶೇಷ. ಅಂದರೆ ಸಿಎಸ್​ಕೆ ತಂಡದ ಮುಂದಿನ ಪಂದ್ಯಗಳಿಗೆ ಕೆಲ ಆಟಗಾರರು ಅಲಭ್ಯರಾಗುವುದು ಖಚಿತ. ಇವರಲ್ಲಿ ಪ್ರಮುಖ ವೇಗಿಳಾದ ಮುಸ್ತಫಿಜುರ್ ರೆಹಮಾನ್ ಹಾಗೂ ಮಥೀಶ ಪತಿರಾಣ ಕೂಡ ಸೇರಿದ್ದಾರೆ.

3 / 8

ಝಿಂಬಾಬ್ವೆ ವಿರುದ್ಧದ ಟಿ20 ಸರಣಿಗಾಗಿ ಮುಸ್ತಫಿಜುರ್ ರೆಹಮಾನ್ ತವರಿಗೆ ಮರಳಿದ್ದಾರೆ. ಮೇ 3 ರಿಂದ ಶುರುವಾಗಲಿರುವ ಬಾಂಗ್ಲಾದೇಶ್-ಝಿಂಬಾಬ್ವೆ ಒಟ್ಟು 5 ಟಿ20 ಪಂದ್ಯಗಳನ್ನಾಡಲಿದೆ. ಈ ಸರಣಿಯಲ್ಲಿ ಕಣಕ್ಕಿಳಿಯುವ ಕಾರಣ ಮುಸ್ತಫಿಜುರ್ ರೆಹಮಾನ್ ಸಿಎಸ್​ಕೆ ತಂಡದ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

4 / 8

ಮತ್ತೊಂದೆಡೆ ಮಥೀಶ ಪತಿರಾಣ ಹಾಗೂ ಮಹೀಶ್ ತೀಕ್ಷಣ ಶ್ರೀಲಂಕಾಗೆ ಹಿಂತಿರುಗಿದ್ದಾರೆ. ಸಿಎಸ್​ಕೆ ತಂಡದ ಇಬ್ಬರು ಆಟಗಾರರು ಮುಂಬರುವ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ವೀಸಾ ಸಂಬಂಧಿಸಿದ ಕೆಲಸಗಳಿಗಾಗಿ ಲಂಕಾ ಆಟಗಾರರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ಕೊಲಂಬೊಗೆ ತೆರಳಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ಕೂಡ ಮುಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ.

5 / 8

ಹಾಗೆಯೇ ಕಳೆದ ಪಂದ್ಯದ ವೇಳೆ ದೀಪಕ್ ಚಹರ್ ಗಾಯಗೊಂಡಿದ್ದು, ಹೀಗಾಗಿ ಅವರು ಮೈದಾನದಿಂದ ಹೊರನಡೆದಿದ್ದರು. ಇದಾದ ಬಳಿಕ ಅವರು ಮತ್ತೆ ಮೈದಾನಕ್ಕೆ ಹಿಂತಿರುಗಲಿಲ್ಲ. ಅಂದರೆ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿರುವ ದೀಪಕ್ ಚಹರ್ ಕೂಡ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ.

6 / 8

ಇನ್ನು ಮತ್ತೋರ್ವ ವೇಗಿ ತುಷಾರ್ ದೇಶಪಾಂಡೆ ಜ್ವರದಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಅವರು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಒಂದು ವೇಳೆ ಸಂಪೂರ್ಣವಾಗಿ ಗುಣಮುಖರಾಗದಿದ್ದರೆ, ತುಷಾರ್ ಕೂಡ ಮುಂದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ.

7 / 8

ಅಂದರೆ ಮೇ 5 ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐವರು ಬೌಲರ್​ಗಳು ಹೊರಗುಳಿಯುವ ಸಾಧ್ಯತೆಯಿದೆ. ಇದು ಸಿಎಸ್​ಕೆ ತಂಡದ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ.

8 / 8

ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಮುಂದಿನ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ನೇರವಾಗಿ ಪ್ಲೇಆಫ್​​ಗೆ ಪ್ರವೇಶಿಸಲಿದೆ. ಒಂದು ವೇಳೆ ನಿರ್ಣಾಯಕ ಪಂದ್ಯಗಳ ವೇಳೆ ಈ ಆಟಗಾರರು ಹೊರಗುಳಿದರೆ ಸಿಎಸ್​ಕೆ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ.

Loading...
Unable to load recommendations.
Follow Us