ಉದಾಹರಣೆಗೆ, ಬೌಂಡರಿ ಲೈನ್ನಲ್ಲಿ ಫೀಲ್ಡರ್ ಕ್ಯಾಚ್ ಹಿಡಿದಿದ್ದಾರೆ ಎಂದಿಟ್ಟುಕೊಳ್ಳಿ. ಈ ವೇಳೆ ಫೀಲ್ಡರ್ನ ಕಾಲು ಬೌಂಡರಿ ಲೈನ್ಗೆ ತಾಗಿದೆಯಾ ಇಲ್ಲವಾ ಎಂದು ತಿಳಿದುಕೊಳ್ಳಲು, ತಕ್ಷಣವೇ ಕಾಲಿನ ಭಾಗದ ವಿಡಿಯೋವನ್ನು ಸ್ಪ್ಲಿಟ್ ಸ್ಕ್ರೀನ್ನಲ್ಲಿ ಪರಿಶೀಲಿಸಬಹುದು. ಅಲ್ಲದೆ ಪಾದದ ಯಾವ ಭಾಗ ಬೌಂಡರಿ ಲೈನ್ಗೆ ತಾಗಿದೆ ಎಂಬುದರ ತುಣುಕಿನ ಭಾಗದೊಂದಿಗೆ ಸ್ಪಷ್ಟ ತೀರ್ಪು ನೀಡಲು ಸಾಧ್ಯವಾಗಲಿದೆ.