AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024 Prize Money: ಚಾಂಪಿಯನ್ ತಂಡಕ್ಕೆ ಎಷ್ಟು ಕೋಟಿ? ಆರ್​ಸಿಬಿಗೆ ಸಿಕ್ಕ ಹಣವೇಷ್ಟು? ಇಲ್ಲಿದೆ ಬಹುಮಾನದ ಪೂರ್ಣ ವಿವರ

IPL 2024 Prize Money: ಈ ಆವೃತ್ತಿಗಾಗಿ ಬಿಸಿಸಿಐ ಒಟ್ಟು 46.5 ಕೋಟಿ ರೂಪಾಯಿಗಳನ್ನು ಬಹುಮಾನ ಮೊತ್ತವಾಗಿ ನಿಗದಿಪಡಿಸಿದೆ. ಇದರಲ್ಲಿ ಚಾಂಪಿಯನ್ ಪಟ್ಟಕ್ಕೇರುವ ತಂಡವು 20 ಕೋಟಿ ರೂ. ಬಹುಮಾನ ಪಡೆದರೆ, ರನ್ನರ್ ಅಪ್ ತಂಡಕ್ಕೆ 13 ಕೋಟಿ ಸಿಗಲಿದೆ. ಹಾಗೆಯೇ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಕ್ರಮವಾಗಿ 7 ಕೋಟಿ ಮತ್ತು 6.5 ಕೋಟಿ ಬಹುಮಾನ ಪಡೆಯುತ್ತವೆ.

ಪೃಥ್ವಿಶಂಕರ
|

Updated on: May 26, 2024 | 3:20 PM

Share
ಐಪಿಎಲ್ 17ನೇ ಸೀಸನ್​ನ ಫೈನಲ್ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಇಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಈ ಮಿಲಯನ್ ಡಾಲರ್ ಟೂರ್ನಿಯ ಕಿರೀಟ ತೊಡುವ ತಂಡದ ಮೇಲೆ ಹಣದ ಮಳೆಯೇ ಹರಿಯಲಿದೆ. ಸೋತ ತಂಡಕ್ಕೂ ಜೇಬು ತುಂಬಲಿದೆ. ಹಾಗಿದ್ದರೆ, ಯಾವ ತಂಡಕ್ಕೆ ಎಷ್ಟು ಸಿಗಲಿದೆ ಎಂಬುದನ್ನು ನೋಡುವುದಾದರೆ..

1 / 7
ಈ ಆವೃತ್ತಿಗಾಗಿ ಬಿಸಿಸಿಐ ಒಟ್ಟು 46.5 ಕೋಟಿ ರೂಪಾಯಿಗಳನ್ನು ಬಹುಮಾನ ಮೊತ್ತವಾಗಿ ನಿಗದಿಪಡಿಸಿದೆ. ಇದರಲ್ಲಿ ಚಾಂಪಿಯನ್ ಪಟ್ಟಕ್ಕೇರುವ ತಂಡವು 20 ಕೋಟಿ ರೂ. ಬಹುಮಾನ ಪಡೆದರೆ, ರನ್ನರ್ ಅಪ್ ತಂಡಕ್ಕೆ 13 ಕೋಟಿ ಸಿಗಲಿದೆ. ಹಾಗೆಯೇ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಕ್ರಮವಾಗಿ 7 ಕೋಟಿ ಮತ್ತು 6.5 ಕೋಟಿ ಬಹುಮಾನ ಪಡೆಯುತ್ತವೆ.

2 / 7
ಅಂದರೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆಯೋ ಆ ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತದೆ. ಐಪಿಎಲ್‌ ಹೊರತುಪಡಿಸಿದರೆ ಪ್ರಪಂಚದಾದ್ಯಂತ ನಡೆಯುವ ಯಾವುದೇ ಟಿ20 ಲೀಗ್​ಗಳಲ್ಲೂ ಈ ಪ್ರಮಾಣದ ಬಹುಮಾನ ನೀಡಲಾಗುವುದಿಲ್ಲ ಎಂಬುದು ಇಲ್ಲಿ ವಿಶೇಷ.

3 / 7
ಉಳಿದಂತೆ ಮೂರು ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ 7 ಕೋಟಿ ರೂ. ಬಹುಮಾನ ಪಡೆದರೆ, ನಾಲ್ಕನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6.5 ಕೋಟಿ ರೂ. ಬಹುಮಾನ ಪಡೆಯಲ್ಲಿದೆ.

4 / 7
ಇನ್ನು ವೈಯಕ್ತಿಕ ಸಾಧನೆಗೆ ಸಂಬಂಧಪಟ್ಟ ಬಹುಮಾನಗಳ ಬಗ್ಗೆ ಹೇಳುವುದಾದರೆ.. ಲೀಗ್​ನಲ್ಲಿ ಅಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆಲ್ಲುವ ಆಟಗಾರನಿಗೆ 15 ಲಕ್ಷ ರೂ. ಬಹುಮಾನ ಸಿಗಲಿದೆ. ಪ್ರಸ್ತುತ 14 ಪಂದ್ಯಗಳಲ್ಲಿ 741 ರನ್ ಬಾರಿಸಿರುವ ವಿರಾಟ್ ಕೊಹ್ಲಿಗೆ ಈ ಬಹುಮಾನ ಸಿಗಲಿದೆ.

5 / 7
ಹಾಗೆಯೇ ಲೀಗ್​ನಲ್ಲಿ ಅಧಿಕ ವಿಕೆಟ್ ಪಡೆದ ವೇಗಿಗೂ 15 ಲಕ್ಷ ರೂ. ಬಹುಮಾನ ಸಿಗಲಿದ್ದು, ಇದೀಗ ಈ ಪಟ್ಟಿಯಲ್ಲಿ 24 ವಿಕೆಟ್ ಉರುಳಿಸಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡದ ವೇಗಿ ಹರ್ಷಲ್ ಪಟೇಲ್ ಈ ಬಹುಮಾನ ಸ್ವೀಕರಿಸಲಿದ್ದಾರೆ.

6 / 7
ಉಳಿದಂತೆ ವರ್ಷದ ಉದಯೋನ್ಮುಖ ಆಟಗಾರನಿಗೆ 20 ಲಕ್ಷ ರೂ. ಬಹುಮಾನ ಸಿಕ್ಕರೆ, ಅತ್ಯಂತ ಮೌಲ್ಯಯುತ ಆಟಗಾರನಿಗೆ 12 ಲಕ್ಷ ರೂ. ನೀಡಲಾಗುತ್ತದೆ. ಈ ಎರಡು ಪ್ರಶಸ್ತಿಗಳಿಗೆ ಯಾರು ಭಾಜನರಾಗಲಿದ್ದಾರೆ ಎಂಬುದು ಫೈನಲ್ ಪಂದ್ಯದ ಬಳಿಕ ತಿಳಿಯಲಿದೆ.

7 / 7