- Kannada News Photo gallery Cricket photos IPL 2024: RCB-CSK Fan Parents bring their babies to Stadium
IPL 2024: ಪುಟ್ಟ ಪುಟಾಣಿಯೊಂದಿಗೆ ಪಂದ್ಯ ವೀಕ್ಷಿಸಿದ RCB-CSK ಫ್ಯಾನ್ಸ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಶುರುವಾಗಿದೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶುಭಾರಂಭ ಮಾಡಿದೆ. ಇನ್ನು ಮೊದಲ ಪಂದ್ಯದಲ್ಲೇ ಸೋತಿರುವ ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
Updated on: Mar 23, 2024 | 8:30 AM

ಐಪಿಎಲ್ನ ಮೊದಲ ಪಂದ್ಯ... ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ... ಹೈವೋಲ್ಟೇಜ್ ಮ್ಯಾಚ್... ಐಪಿಎಲ್ನ ಆರಂಭದಲ್ಲೇ CSK vs RCB ಕಣಕ್ಕಿಳಿದರೆ ಯಾರು ತಾನೆ ಮಿಸ್ ಮಾಡ್ತಾರೆ... ಇದಕ್ಕೆ ಸಾಕ್ಷಿಯೇ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ಈ ಅಭಿಮಾನಿಗಳು.

ಇವರು ಅಂತಿಂಥ ಅಭಿಮಾನಿಗಳಲ್ಲ, ಒಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಲ್ ಫ್ಯಾನ್ ಆದರೆ, ಮತ್ತೊಬ್ಬರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೂಪರ್ ಅಭಿಮಾನಿ. ಹೀಗಾಗಿಯೇ ಆರ್ಸಿಬಿ-ಸಿಎಸ್ಕೆ ನಡುವಣ ಮೊದಲ ಪಂದ್ಯಕ್ಕೆ ಈ ದಂಪತಿ ಹಾಜರಾಗಿದ್ದರು. ಅದು ಸಹ ಪುಟ್ಟ ಪುಟಾಣಿಯೊಂದಿಗೆ ಎಂಬುದು ವಿಶೇಷ.

ಕಿಂಗ್ ಕೊಹ್ಲಿ - ಮಹೇಂದ್ರ ಸಿಂಗ್ ಧೋನಿ ಜೊತೆಯಾಗಿ ಕಣಕ್ಕಿಳಿಯುವುದನ್ನು ಕಣ್ತುಂಬಿಕೊಳ್ಳಲು ತಮ್ಮ ಪುಟ್ಟ ಮಗುವನ್ನು ಸ್ಟೇಡಿಯಂಗೆ ಕರೆದುಕೊಂಡು ಬಂದಿದ್ದರು. ಅಲ್ಲದೆ ಮಗುವನ್ನು ಉಪಚರಿಸುತ್ತಾ ಇಡೀ ಪಂದ್ಯವನ್ನು ಕಣ್ತುಂಬಿಕೊಂಡರು.

ಆದರೆ ಪಂದ್ಯ ಮುಗಿದಾಗ ಗಂಡನಿಗೆ ಸೋಲಿನ ನಿರಾಸೆಯಾದರೆ, ಹೆಂಡತಿಗೆ ಗೆಲುವಿನ ಸಂತಸ. ಇನ್ನು ಹೈವೋಲ್ಟೇಜ್ ಪಂದ್ಯಕ್ಕೆ ಹಾಜರಿದ್ದ ಈ ಪುಟ್ಟ ಪುಟಾಣಿ ದೊಡ್ಡವನಾದ ಮೇಲೆ ಆರ್ಸಿಬಿ ಪರ ಇರುತ್ತಾರಾ ಅಥವಾ ಸಿಎಸ್ಕೆ ಪರ ಸೀಟಿ ಹೊಡೆಯುತ್ತರಾ ಎಂಬುದೇ ಕುತೂಹಲ.

ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಫಾಫ್ ಡುಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ಗುರಿಯನ್ನು 18.4 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಸಿಎಸ್ಕೆ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
























