AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಡೆಲ್ಲಿ ನಾಯಕತ್ವದಿಂದ ವಾರ್ನರ್​ಗೆ ಕೋಕ್; ಹೊಸ ನಾಯಕ ಯಾರು ಗೊತ್ತಾ?

IPL 2024: ಐಪಿಎಲ್ ಆರಂಭಕ್ಕೆ ಇನ್ನೇರಡು ದಿನ ಬಾಕಿ ಇರುವಾಗ ಡೆಲ್ಲಿ ಕ್ಯಾಪಿಟಲ್ಸ್ ತನ್ನ ನಾಯಕನನ್ನು ಬದಲಾಯಿಸಿದೆ. ಅದರಂತೆ ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ನಾಯಕತ್ವದಿಂದ ಕೆಳಗಿಳಿದಿದ್ದು, ತಂಡದ ಮಾಜಿ ನಾಯಕ ರಿಷಬ್ ಪಂತ್ ಮತ್ತೊಮ್ಮೆ ತಂಡದ ಚುಕ್ಕಾಣಿ ಹಿಡಿದಿದ್ದಾರೆ.

ಪೃಥ್ವಿಶಂಕರ
|

Updated on: Mar 20, 2024 | 4:13 PM

ಐಪಿಎಲ್ ಆರಂಭಕ್ಕೆ ಇನ್ನೇರಡು ದಿನ ಬಾಕಿ ಇರುವಾಗ ಡೆಲ್ಲಿ ಕ್ಯಾಪಿಟಲ್ಸ್ ತನ್ನ ನಾಯಕನನ್ನು ಬದಲಾಯಿಸಿದೆ. ಅದರಂತೆ ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ನಾಯಕತ್ವದಿಂದ ಕೆಳಗಿಳಿದಿದ್ದು, ತಂಡದ ಮಾಜಿ ನಾಯಕ ರಿಷಬ್ ಪಂತ್ ಮತ್ತೊಮ್ಮೆ ತಂಡದ ಚುಕ್ಕಾಣಿ ಹಿಡಿದಿದ್ದಾರೆ.

1 / 6
ಎಲ್ಲರಿಗೂ ತಿಳಿದಿರುವಂತೆ 2023 ರ ಡಿಸೆಂಬರ್​ನಲ್ಲಿ ಕಾರು ಅಪಘಾತಕ್ಕೀಡಾಗಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅಂದಿನಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಅಪಘಾತದಿಂದಾಗಿ ಪಂತ್ ಪ್ರಮುಖ ಐಸಿಸಿ ಈವೆಂಟ್​ಗಳನ್ನು ಕಳೆದುಕೊಂಡಿದಲ್ಲದೆ ಐಪಿಎಲ್​ನಿಂದಲ್ಲೂ ಹೊರಬಿದ್ದಿದ್ದರು.

2 / 6
ಆದರೀಗ ಪೂರ್ಣ ಚೇತರಿಸಿಕೊಂಡು ಕ್ರಿಕೆಟ್​ ಅಂಗಳಕ್ಕಿಳಿಯಲು ಸಜ್ಜಾಗಿರುವ ಪಂತ್, ಐಪಿಎಲ್ ಮೂಲಕ ವೃತ್ತಿಪರ ಕ್ರಿಕೆಟ್​ಗೆ ಕಾಲಿಡುತ್ತಿದ್ದಾರೆ. ಹೀಗಾಗಿ ಕಳೆದ ಆವೃತ್ತಿಯಲ್ಲಿ ಪಂತ್ ಅಲಭ್ಯತೆಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ  ಡೇವಿಡ್ ವಾರ್ನರ್, ತಂಡದ ಖಾಯಂ ನಾಯಕ ರಿಷಬ್ ಪಂತ್​ಗೆ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ.

3 / 6
ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಪಂತ್​ರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಬಹುದು ಎಂದು ವರದಿಯಾಗಿತ್ತು. ಏಕೆಂದರೆ ಇಂಜುರಿಯಿಂದ ಚೇತರಿಸಿಕೊಂಡಿರುವ ಪಂತ್​ಗೆ ಏಕಾಏಕಿ ವಿಕೆಟ್ ಕೀಪಿಂಗ್ ಜೊತೆಗೆ ತಂಡದ ನಾಯಕತ್ವ ನೀಡುವ ಬದಲು ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಬಹುದು ಎಂದು ವರದಿ ಹೇಳಿತ್ತು.

4 / 6
ಇದಕ್ಕೆ ಪೂರಕವಾಗಿ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಕೂಡ ಪಂತ್ ಆಟಗಾರನಾಗಿ ಆಡಲಿದ್ದಾರೆ ಎಂದು ಹೇಳಿದ್ದರು. ಆದರೀಗ ಡೆಲ್ಲಿ ಫ್ರಾಂಚೈಸ್ ರಿಷಬ್ ಪಂತ್​ಗೆ ನಾಯಕತ್ವ ಹಸ್ತಾಂತರಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಹೀಗಾಗಿ ಈ ಆವೃತ್ತಿಯಿಂದ ಪಂತ್ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

5 / 6
ಡೆಲ್ಲಿ ತಂಡ: ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಕುಮಾರ್ ಕುಶಾಗ್ರಾ, ರಿಕಿ ಭುಯಿ, ಶಾಯ್ ಹೋಪ್, ಪೃಥ್ವಿ ಶಾ, ಹ್ಯಾರಿ ಬ್ರೂಕ್, ಯಶ್ ಧುಲ್, ಸ್ವಸ್ತಿಕ್ ಚಿಕಾರಾ, ಡೇವಿಡ್ ವಾರ್ನರ್, ಪ್ರವೀಣ್ ದುಬೆ, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ವಿಕಿ ಓಸ್ತ್ವಾಲ್, ಸುಮಿತ್ ಕುಮಾರ್ , ಅನ್ರಿಚ್ ನೋಕಿಯಾ, ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಜ್ಯೆ ರಿಚರ್ಡ್ಸನ್, ರಾಸಿಖ್ ಸೇಲಂ.

6 / 6
Follow us
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್

ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್

ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ

ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್

ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ

ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ

ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ

ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ

ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್