2009 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿ, ಆ ನಂತರ ಅಂದರೆ 2013 ರಲ್ಲಿ ತನ್ನ ತಂಡದ ಹೆಸರನ್ನು ಸನ್‌ರೈಸ್ ಹೈದರಾಬಾದ್ ಎಂದು ಬದಲಾಯಿಸಿತು. ಈ ಅವಧಿಯಲ್ಲಿ ತಂಡದ ಮಾಲೀಕತ್ವದಲ್ಲೂ ಬದಲಾವಣೆ ಆಗಿತ್ತು. ತಂಡದ ಹೆಸರನ್ನು ಬದಲಾಯಿಸಿದ ನಂತರ, ತಂಡವು 2016 ರಲ್ಲಿ ಐಪಿಎಲ್ ಟ್ರೋಫಿ ಎತ್ತಿಹಿಡಿದಿತ್ತು. ವಿಚಿತ್ರವೆಂದರೆ ಈ ತಂಡ ಎರಡೂ ಫೈನಲ್ ಪಂದ್ಯಗಳಲ್ಲಿ ಆರ್ಸಿಬಿಯನ್ನು ಮಣಿಸಿತ್ತು.