IPL 2024: ಮೈದಾನಕ್ಕಿಳಿದ ಕೂಡಲೇ ವಿಶೇಷ ದಾಖಲೆ ಬರೆದ ರಿಷಬ್ ಪಂತ್..!

Updated on: Mar 28, 2024 | 7:37 PM

IPL 2024 Rishabh Pant: 2016 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸೇರಿಕೊಳ್ಳುವುದರೊಂದಿಗೆ ತನ್ನ ಐಪಿಎಲ್ ಜೀವನ ಆರಂಭಿಸಿದ ರಿಷಬ್ ಪಂತ್, ಅಂದಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಇಂದಿನ ಪಂದ್ಯ ರಿಷಬ್ ಪಂತ್ ಅವರ ಐಪಿಎಲ್ ವೃತ್ತಿಜೀವನದ 100ನೇ ಪಂದ್ಯವಾಗಿದೆ.

1 / 7
17ನೇ ಆವೃತ್ತಿಯ ಐಪಿಎಲ್​ನ 9ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಎರಡು ತಂಡಗಳು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್​ಗಾಗಿ ಕಣಕ್ಕಿಳಿದ ಡೆಲ್ಲಿ ನಾಯಕ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಯಾರೂ ಮಾಡದ ದಾಖಲೆ ಮಾಡಿದ್ದಾರೆ.

17ನೇ ಆವೃತ್ತಿಯ ಐಪಿಎಲ್​ನ 9ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಎರಡು ತಂಡಗಳು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್​ಗಾಗಿ ಕಣಕ್ಕಿಳಿದ ಡೆಲ್ಲಿ ನಾಯಕ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಯಾರೂ ಮಾಡದ ದಾಖಲೆ ಮಾಡಿದ್ದಾರೆ.

2 / 7

ವಾಸ್ತವವಾಗಿ ವರ್ಷದ ಬಳಿಕ ಕ್ರಿಕೆಟ್ ಮೈದಾನಕ್ಕಿಳಿದಿರುವ ರಿಷಬ್ ಪಂತ್​ಗೆ ಡೆಲ್ಲಿ ತಂಡದ ಪರ ಇದು ನೂರನೇ ಪಂದ್ಯ. ಈ ಮೂಲಕ ಪಂತ್, ಈ ಫ್ರಾಂಚೈಸಿಯ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

3 / 7

2016 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸೇರಿಕೊಳ್ಳುವುದರೊಂದಿಗೆ ತನ್ನ ಐಪಿಎಲ್ ಜೀವನ ಆರಂಭಿಸಿದ ರಿಷಬ್ ಪಂತ್, ಅಂದಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಇಂದಿನ ಪಂದ್ಯ ರಿಷಬ್ ಪಂತ್ ಅವರ ಐಪಿಎಲ್ ವೃತ್ತಿಜೀವನದ 100ನೇ ಪಂದ್ಯವಾಗಿದೆ.

4 / 7

ಈ ಪಂದ್ಯದೊಂದಿಗೆ ಪಂತ್ ದೆಹಲಿ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

5 / 7

ರಿಷಬ್ ಪಂತ್ ಇದುವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರ 99 ಪಂದ್ಯಗಳಲ್ಲಿ 34.41 ಸರಾಸರಿಯಲ್ಲಿ 2856 ರನ್ ಗಳಿಸಿದ್ದಾರೆ. ಇದರಲ್ಲಿ 15 ಅರ್ಧ ಶತಕ ಮತ್ತು 1 ಶತಕವೂ ಸೇರಿದೆ. 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವಹಿಸಿಕೊಂಡ ಪಂತ್ ತಂಡವನ್ನು ಒಮ್ಮೆ ಫೈನಲ್​ಗೆ ಕೊಂಡೊಯ್ದಿದ್ದಾರೆ.

6 / 7

ಇನ್ನು ರಿಷಬ್ ಪಂತ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ಪರ ಅಧಿಕ ಪಂದ್ಯಗಳನ್ನಾಡಿದ ಆಟಗಾರರನ್ನು ನೋಡುವುದಾದರೆ.. ಪ್ರಸ್ತುತ ಪಂತ್​ರಷ್ಟೇ ಅಂದರೆ 99 ಪಂದ್ಯಗಳನ್ನಾಡಿರುವ ಅಮಿತ್ ಮಿಶ್ರಾ 2ನೇ ಸ್ಥಾನದಲ್ಲಿದ್ದಾರೆ. 87 ಪಂದ್ಯಗಳನ್ನಾಡಿದ್ದ ಶ್ರೇಯಸ್ ಅಯ್ಯರ್ ಮೂರನೇ ಸ್ಥಾನದಲ್ಲಿದ್ದರೆ, 82 ಪಂದ್ಯಗಳೊಂದಿಗೆ ಡೇವಿಡ್ ವಾರ್ನರ್ 4ನೇ ಸ್ಥಾನದಲ್ಲಿದ್ದಾರೆ.

7 / 7

ಲೀಗ್​ ಬಗ್ಗೆ ಹೇಳುವುದಾದರೆ.. ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಈ ಸೀಸನ್​ನ ಮೊದಲ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅದೇ ಸಮಯದಲ್ಲಿ, ರಾಜಸ್ಥಾನ್ ರಾಯಲ್ಸ್ ತನ್ನ ಗೆಲುವಿನ ಸರಣಿಯನ್ನು ಉಳಿಸಿಕೊಳ್ಳಲು ಬಯಸುತ್ತದೆ. ಈ ಪಂದ್ಯ ರಿಷಬ್ ಪಂತ್​ಗೆ 100ನೇ ಪಂದ್ಯ ಆಗಿರುವುದರಿಂದ ಡೆಲ್ಲಿ ಗೆಲುವು ದಾಖಲಿಸಿ ನಾಯಕನಿಗೆ ಗೆಲುವಿನ ಉಡುಗೊರೆ ನೀಡುತ್ತಾ ಕಾದುನೋಡಬೇಕಿದೆ.

Loading...
Unable to load recommendations.
Follow Us