IPL 2024: ಅಗ್ರ 4ರಲ್ಲಿ ಸ್ಥಾನ ಪಡೆಯುತ್ತಾ ಆರ್‌ಸಿಬಿ? ಇಲ್ಲಿದೆ ಪ್ಲೇಆಫ್ ಲೆಕ್ಕಾಚಾರ
IPL 2024 RCB Playoff Scenario: 17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ತನ್ನ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿ ಅಖಾಡಕ್ಕಿಳಿದಿತ್ತು. ಆದರೆ ತಂಡ ಬದಲಾದರೂ ತಂಡದ ಪ್ರದರ್ಶನ ಮಾತ್ರ ಬದಲಾಗಿಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಪ್ಲೇಆಫ್ಗೇರಲು ಇದೀಗ ಹರಸಾಹಸ ಪಡಬೇಕಾಗಿದೆ.
1 / 9
17ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ತನ್ನ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿ ಅಖಾಡಕ್ಕಿಳಿದಿತ್ತು. ಆದರೆ ತಂಡ ಬದಲಾದರೂ ತಂಡದ ಪ್ರದರ್ಶನ ಮಾತ್ರ ಬದಲಾಗಿಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ತಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದು, ಪ್ಲೇಆಫ್ಗೇರಲು ಇದೀಗ ಹರಸಾಹಸ ಪಡಬೇಕಾಗಿದೆ.
2 / 9
ಆರ್‌ಸಿಬಿ ಇದುವರೆಗೆ ಲೀಗ್ನಲ್ಲಿ 6 ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಎರಡು ಅಂಕಗಳೊಂದಿಗೆ ತಂಡವು 10 ತಂಡಗಳ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಈಗಾಗಲೇ 5 ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ ಈ ವರ್ಷ ಪ್ಲೇ ಆಫ್ ತಲುಪುವುದು ಕಷ್ಟ ಎಂದು ಹೇಳಲಾಗುತ್ತಿದೆ. ಅದಾಗ್ಯೂ ಆರ್‌ಸಿಬಿ ಪ್ಲೇ ಆಫ್ ಹಾದಿ ಈಗಲೂ ಜೀವಂತವಾಗಿದ್ದು, ಅದಕ್ಕಾಗಿ ತಂಡ ಎಷ್ಟು ಶ್ರಮಿಸಬೇಕು ಎಂಬ ವಿವರ ಹೀಗಿದೆ.
3 / 9
ಮೇಲೆ ಹೇಳಿದಂತೆ ಈ ವರ್ಷ ಆರ್‌ಸಿಬಿ ಇದುವರೆಗೆ 6 ಪಂದ್ಯಗಳನ್ನು ಆಡಿದೆ. ಲೀಗ್ ಹಂತದಲ್ಲಿ ತಂಡವು 14 ಪಂದ್ಯಗಳನ್ನು ಆಡುತ್ತದೆ. ಅದರ ಪ್ರಕಾರ ಆರ್ಸಿಬಿಗೆ ಇನ್ನು 8 ಪಂದ್ಯಗಳು ಬಾಕಿ ಉಳಿದಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ ಆರ್‌ಸಿಬಿ ಪ್ಲೇ ಆಫ್ ಕನಸು ಇನ್ನು ಜೀವಂತವಾಗಿದೆ.
4 / 9
ಅದಾಗ್ಯೂ ತಂಡ ಪ್ಲೇ ಆಫ್ಗೇರಬೇಕೆಂದರೆ ಮುಂದಿನ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹಾಗಾದಾಗ ಮಾತ್ರ ತಂಡ 16 ಅಂಕ ಸಂಪಾಧಿಸುವ ಮೂಲಕ ಪ್ಲೇ ಆಫ್ಗೇರಬಹುದಾಗಿದೆ. ಈಗಾಗಲೇ ಒಂದು ಪಂದ್ಯ ಗೆದ್ದಿರುವ ಆರ್‌ಸಿಬಿ ಇನ್ನು 7 ಪಂದ್ಯ ಗೆದ್ದರೆ, ಒಟ್ಟು 8 ಗೆಲುವುಗಳಿಂದ 16 ಅಂಕ ಸಂಪಾಧಿಸಲಿದೆ.
5 / 9
ಕಳೆದ ಎರಡು ಐಪಿಎಲ್ ಸೀಸನ್ಗಳಲ್ಲೂ 16 ಅಂಕ ಪಡೆದಿದ್ದ ತಂಡಗಳು ಪ್ಲೇ ಆಫ್ಗೇರಿದ್ದವು. ಸ್ವತಃ ಆರ್‌ಸಿಬಿ ಕೂಡ 2022 ರ ಐಪಿಎಲ್ನಲ್ಲಿ 16 ಅಂಕ ಪಡೆದು ಪ್ಲೇ ಆಫ್ಗೇರಿತ್ತು. 2023 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೂಡ 16 ಅಂಕ ಪಡೆಯುವ ಮೂಲಕ ಪ್ಲೇ ಆಫ್ ಆಡಿತ್ತು.
6 / 9
ಒಂದು ವೇಳೆ ಆರ್‌ಸಿಬಿ ಉಳಿದ 8 ಪಂದ್ಯಗಳನ್ನು ಗೆದ್ದರೆ ಒಟ್ಟು 18 ಅಂಕ ಗಳಿಸಲಿದೆ. ಇದು ಸಾಧ್ಯವಾದರೆ ಆರ್‌ಸಿಬಿ ಸುಲಭವಾಗಿ ಪ್ಲೇ ಆಫ್ಗೇರಲಿದೆ. ಅಲ್ಲದೆ ಆರ್‌ಸಿಬಿ ಒಂದು ಪಂದ್ಯದಲ್ಲಿ ಸೋತರೂ 16 ಅಂಕಗಳೊಂದಿಗೆ ಪ್ಲೇ ಆಫ್‌ಗೆ ತಲುಪುವ ಅವಕಾಶ ಹೊಂದಿರುತ್ತದೆ.
7 / 9
ಆದರೆ ಆರ್‌ಸಿಬಿ ಉಳಿದ 8 ಪಂದ್ಯಗಳಲ್ಲಿ 2 ರಲ್ಲಿ ಸೋತರೆ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. ಏಕೆಂದರೆ ಆರ್‌ಸಿಬಿ 7 ಗೆಲುವುಗಳೊಂದಿಗೆ 14 ಅಂಕಗಳನ್ನು ಮಾತ್ರ ಗಳಿಸಬಹುದಾಗಿದೆ. ಇಲ್ಲಿ 14 ಅಂಕಗಳಿದ್ದರೂ ಆರ್‌ಸಿಬಿ ಪ್ಲೇಆಫ್ ತಲುಪಬಹುದು. ಆದರೆ ಇಲ್ಲಿ ತಂಡದ ನೆ ಟ್ ರನ್ರೇಟ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
8 / 9
ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ 7 ವಿಕೆಟ್‌ಗಳ ಸೋಲು ಮಾತ್ರವಲ್ಲದೆ ಹೀನಾಯವಾಗಿ ಸೋತಿತ್ತು. ಹೀಗಾಗಿ ತಂಡದ ನೆಟ್ ರನ್ ರೇಟ್‌ನಲ್ಲಿಯೂ ಕುಸಿತ ಕಂಡಿದೆ. ಇದು ನಿರ್ಣಾಯಕ ಹಂತದಲ್ಲಿ ಆರ್ಸಿಬಿಗೆ ತೊಡಕ್ಕಾಗುವ ಸಾಧ್ಯತೆಗಳಿವೆ.
9 / 9
ಹೀಗಾಗಿ ಆರ್‌ಸಿಬಿ ತನ್ನ ಮುಂದಿನ ಪಂದ್ಯಗಳಲ್ಲಿ ಕೇವಲ ಗೆಲುವು ಸಾಧಿಸಿದರೆ ಮಾತ್ರ ಸಾಲದು. ಬದಲಿಗೆ ಈ ಗೆಲುವು ಅತಿದೊಡ್ಡದಾಗಿರಬೇಕು. ಇದರಿಂದಾಗಿ ತಂಡದ ನೆಟ್ ರನ್ರೇಟ್ ಉತ್ತಮಗೊಳ್ಳಲಿದ್ದು, ಪ್ಲೇ ಆಫ್ ಲೆಕ್ಕಾಚಾರದ ವೇಳೆ ಆರ್ಸಿಬಿಗೆ ಸಹಾಯಕವಾಗಲಿದೆ.