Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಮಳೆಯಿಂದ ಕ್ವಾಲಿಫೈಯರ್ 2 ರದ್ದಾದರೆ ಯಾವ ತಂಡ ಫೈನಲ್​ಗೇರಲಿದೆ? ಇಲ್ಲಿದೆ ವಿವರ

IPL 2024: ಚೆಪಾಕ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ನಡುವೆ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಮೇ 26ರಂದು ಕೆಆರ್‌ಆರ್‌ ತಂಡವನ್ನು ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದೆ. ಆದರೆ ಕ್ವಾಲಿಫೈಯರ್-2 ಪಂದ್ಯದ ವೇಳೆ ಮಳೆ ಬಂದರೆ, ಯಾವ ತಂಡವು ಫೈನಲ್ ಪ್ರವೇಶಿಸುತ್ತದೆ ಎಂಬುದರ ವಿವರ ಇಲ್ಲಿದೆ.

ಪೃಥ್ವಿಶಂಕರ
|

Updated on: May 23, 2024 | 6:04 PM

ಭಾನುವಾರ ನಡೆಯಲಿರುವ ಐಪಿಎಲ್ 2024ರ ಫೈನಲ್‌ಗೂ ಮುನ್ನ ಎರಡನೇ ಕ್ವಾಲಿಫೈಯರ್ ಪಂದ್ಯ ಶುಕ್ರವಾರ ನಡೆಯಲಿದೆ. ಚೆಪಾಕ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ .

1 / 8
ಈ ಪಂದ್ಯದಲ್ಲಿ ಗೆದ್ದ ತಂಡ ಮೇ 26ರಂದು ಕೆಆರ್‌ಆರ್‌ ತಂಡವನ್ನು ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದೆ. ಇತ್ತ ಸೋತ ತಂಡದ ಪಯಣ ಅಲ್ಲಿಗೆ ಅಂತ್ಯಗೊಳಲಿದೆ. ಆದರೆ ಕ್ವಾಲಿಫೈಯರ್-2 ಪಂದ್ಯದ ವೇಳೆ ಮಳೆ ಬಂದರೆ, ಯಾವ ತಂಡವು ಫೈನಲ್ ಪ್ರವೇಶಿಸುತ್ತದೆ ಎಂಬುದನ್ನು ನೋಡುವುದಾದರೆ..

2 / 8
ಲೀಗ್ ಹಂತದ ಯಾವುದೇ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಉಭಯ ತಂಡಗಳು ತಲಾ 1 ಅಂಕ ಪಡೆಯುತ್ತಿದ್ದವು. ಆದರೆ, ಪ್ಲೇಆಫ್‌ನಲ್ಲಿ ಇದು ನಡೆಯುವುದಿಲ್ಲ. ಮಳೆ ಬಂದರೆ ಮೊದಲು ಓವರ್‌ಗಳನ್ನು ಕಡಿತಗೊಳಿಸಲಾಗುತ್ತಿದೆ. ಇನಿಂಗ್ಸ್ ಬಳಿಕ ಮಳೆ ಬಂದರೆ ಡಿಎಲ್‌ಎಸ್ ವಿಧಾನದ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು.

3 / 8
ಅದೇ ದಿನ ಪಂದ್ಯ ಪೂರ್ಣಗೊಳ್ಳದಿದ್ದರೆ, ಮೀಸಲು ದಿನದಂದು ಅದನ್ನು ಮುಗಿಸಲು ಪ್ರಯತ್ನಿಸಲಾಗುವುದು. ಕ್ವಾಲಿಫೈಯರ್ 1, ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್‌ಗೆ ಮೀಸಲು ದಿನವಿದೆ. ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಸೂಪರ್ ಓವರ್‌ನಿಂದ ಫಲಿತಾಂಶ ಪಡೆಯಲು ಪ್ರಯತ್ನಿಸಲಾಗುವುದು.

4 / 8
ಇಷ್ಟೆಲ್ಲ ಆದ ನಂತರವೂ ಪಂದ್ಯ ನಡೆಯದಿದ್ದರೆ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ ಮುನ್ನಡೆಯಲಿದೆ. ಹೀಗಿರುವಾಗ ಎರಡನೇ ಕ್ವಾಲಿಫೈಯರ್‌ ಪಂದ್ಯ ಮಳೆಯಿಂದ ರದ್ದಾರೆ ಸನ್‌ರೈಸರ್ಸ್ ಹೈದರಾಬಾದ್ ಫೈನಲ್‌ಗೆ ಲಗ್ಗೆ ಇಡಲಿದೆ.

5 / 8
ಹೈದರಾಬಾದ್ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 8 ರಲ್ಲಿ ಗೆದ್ದಿದ್ದರೆ, 5 ಪಂದ್ಯಗಳಲ್ಲಿ ಸೋಲು ಹಾಗೂ 1 ಪಂದ್ಯ ಮಳೆಯಿಂದ ರದ್ದಾಗಿದೆ. ತಂಡದ ನೆಟ್ ರನ್ ರೇಟ್ +0.414 ಆಗಿದೆ.

6 / 8
ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಕೂಡ ಲೀಗ್ ಹಂತದಲ್ಲಿ 8 ಪಂದ್ಯಗಳನ್ನು ಗೆದ್ದುಕೊಂಡಿದೆ. ಉಳಿದಂತೆ 5 ಪಂದ್ಯಗಳಲ್ಲಿ ಸೋಲು ಮತ್ತು 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಆದಾಗ್ಯೂ, ರಾಜಸ್ಥಾನದ ನೆಟ್ ರನ್ ರೇಟ್ (+0.273) ಹೈದರಾಬಾದ್‌ಗಿಂತ ಕಡಿಮೆಯಾಗಿದೆ.

7 / 8
ಮೇ 24 ರಂದು ಚೆನ್ನೈನ ಹವಾಮಾನದ ಕುರಿತು ಹೇಳುವುದಾದರೆ, ಅಂದು ಗರಿಷ್ಠ ತಾಪಮಾನ 36 ಡಿಗ್ರಿ ಮತ್ತು ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಗಂಟೆಗೆ 41 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಪಂದ್ಯದ ವೇಳೆ ಮಳೆ ಬೀಳುವ ಸಾಧ್ಯತೆ ಶೇ.2 ಮಾತ್ರ ಇದೆ. ಹೀಗಾಗಿ ಪಂದ್ಯದ ದಿನ ಮಳೆ ಬೀಳುವುದಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

8 / 8
Follow us
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ

ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ

ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್

ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ

ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ

ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ

ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ

ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?

ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ