IPL 2025: ಪ್ಲೇಆಫ್ ಪಂದ್ಯಗಳಿಂದ 8 ಆಟಗಾರರು ಔಟ್

Updated on: May 29, 2025 | 8:54 AM

IPL 2025 Playoffs: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಹಾಗೂ ಗುಜರಾತ್ ಟೈಟಾನ್ಸ್ (GT) ತಂಡಗಳು ಸೆಣಸಲಿದೆ.

1 / 6
IPL 2025: ಇಂಡಿಯುನ್ ಪ್ರೀಮಿಯರ್ ಲೀಗ್​​ನ ಪ್ಲೇಆಫ್ ಪಂದ್ಯಗಳಿಗೆ ಇಂದಿನಿಂದ (ಮೇ 29) ಚಾಲನೆ ದೊರೆಯಲಿದೆ. ಈ ಸುತ್ತಿನಲ್ಲಿ ಅಂಕ ಪಟ್ಟಿಯಲ್ಲಿ ಟಾಪ್-4 ಸ್ಥಾನಗಳನ್ನು ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಪಂಜಾಬ್ ಕಿಂಗ್ಸ್ (PBKS), ಮುಂಬೈ ಇಂಡಿಯನ್ಸ್ (MI) ಹಾಗೂ ಗುಜರಾತ್ ಟೈಟಾನ್ಸ್ (GT) ತಂಡಗಳು ಕಣಕ್ಕಿಳಿಯಲಿವೆ.

2 / 6
ಈ ಸುತ್ತಿನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾದರೆ, ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಲಿದೆ. ಈ ಪಂದ್ಯಗಳಿಗೆ ನಾಲ್ಕು ತಂಡಗಳ 8 ಆಟಗಾರರು ಅಲಭ್ಯರಾಗಿದ್ದಾರೆ. ಅವರೆಂದರೆ...

3 / 6
ಗುಜರಾತ್ ಟೈಟಾನ್ಸ್: ಶುಭ್​ಮನ್ ಗಿಲ್ ಮುಂದಾಳತ್ವದ ಗುಜರಾತ್ ಟೈಟಾನ್ಸ್ ತಂಡದಿಂದ ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಹೊರನಡೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಬಟ್ಲರ್ ತವರಿಗೆ ಮರಳಿದ್ದಾರೆ.  ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಸಿದ್ಧತೆಗಾಗಿ ಸೌತ್ ಆಫ್ರಿಕಾ ವೇಗಿ ಕಗಿಸೊ ರಬಾಡ ಕೂಡ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಬಟ್ಲರ್ ಹಾಗೂ ರಬಾಡ ಕಾಣಿಸಿಕೊಳ್ಳುವುದಿಲ್ಲ.

4 / 6
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡದಿಂದ ಮೂವರು ಆಟಗಾರರು ಹೊರ ನಡೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್ ಆಟಗಾರ ವಿಲ್ ಜಾಕ್ಸ್ ತವರಿಗೆ ಮರಳಿದರೆ, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಸಿದ್ಧತೆಗಾಗಿ ಸೌತ್ ಆಫ್ರಿಕಾ ಆಟಗಾರರಾದ ರಯಾನ್ ರಿಕೆಲ್ಟನ್ ಹಾಗೂ ಕಾರ್ಬಿನ್ ಬಾಷ್ ತವರಿಗೆ ಮರಳಿದ್ದಾರೆ.

5 / 6
ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದಲ್ಲಿ ಸೌತ್ ಆಫ್ರಿಕಾ ಆಲ್​ರೌಂಡರ್ ಮಾರ್ಕೊ ಯಾನ್ಸೆನ್ ಕೂಡ ತವರಿಗೆ ಮರಳಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕಾಗಿ ಆಯ್ಕೆ ಮಾಡಲಾದ ಸೌತ್ ಆಫ್ರಿಕಾ ತಂಡದಲ್ಲಿ ಯಾನ್ಸೆನ್ ಸ್ಥಾನ ಪಡೆದಿದ್ದು, ಹೀಗಾಗಿ ಅವರು ಸಹ ತವರಿಗೆ ಹಿಂತಿರುಗಿದ್ದಾರೆ.

6 / 6
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಇಬ್ಬರು ಆಟಗಾರರು ಹೊರ ನಡೆದಿದ್ದಾರೆ. ತಂಡದಲ್ಲಿ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್​ಗಿಡಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದ ಸಿದ್ಧತೆಗಾಗಿ ತವರಿಗೆ ಮರಳಿದರೆ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್ ಆಟಗಾರ ಜೇಕಬ್ ಭೆಥೆಲ್ ತವರಿಗೆ ಹಿಂತಿರುಗಿದ್ದಾರೆ.

Published On - 8:53 am, Thu, 29 May 25