IPL 2025: ಐಪಿಎಲ್​ನಲ್ಲಿ ಮಹತ್ವದ ಬದಲಾವಣೆ: ಪಂದ್ಯಗಳ ಸಂಖ್ಯೆ ಹೆಚ್ಚಳ..!

Updated on: May 28, 2024 | 2:04 PM

IPL 2025: ಐಪಿಎಲ್​ನಲ್ಲಿ ಎರಡು ಸೀಸನ್​ಗೊಮ್ಮೆ ಪಂದ್ಯಗಳ ಸಂಖ್ಯೆ ಹೆಚ್ಚಿಸುವುದರಿಂದ 5 ವರ್ಷದಲ್ಲಿ 370 ರ ಬದಲು 410 ಪಂದ್ಯಗಳನ್ನು ಆಡಿಸಬಹುದು. ಇದರಿಂದ 40 ಪಂದ್ಯಗಳು ಕೂಡ ಹೆಚ್ಚಳವಾಗಲಿದೆ. ಈ ಮೂಲಕ ಐಪಿಎಲ್​ 2027ರವರೆಗಿನ ನೇರ ಪ್ರಸಾರ ಹಕ್ಕುಗಳ ಖರೀದಿದಾರರಿಗೆ ಹೆಚ್ಚಿನ ಲಾಭ ತಂದುಕೊಡಲು ಬಿಸಿಸಿಐ ಮುಂದಾಗಿದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಅದು ಸಹ ಪಂದ್ಯಗಳ ಸಂಖ್ಯೆಗಳ ಹೆಚ್ಚಳದೊಂದಿಗೆ ಎಂಬುದು ವಿಶೇಷ. ಅಂದರೆ ಮುಂಬರುವ ಐಪಿಎಲ್ ಟೂರ್ನಿಯಲ್ಲಿ 84 ಪಂದ್ಯಗಳನ್ನು ಆಡಿಸಲು ಚಿಂತಿಸಲಾಗಿದೆ. ಈವರಗೆ ಐಪಿಎಲ್​ನಲ್ಲಿ ಪ್ಲೇಆಫ್ ಸೇರಿ ಒಟ್ಟು 74 ಪಂದ್ಯಗಳನ್ನಾಡಲಾಗುತ್ತಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ. ಅದು ಸಹ ಪಂದ್ಯಗಳ ಸಂಖ್ಯೆಗಳ ಹೆಚ್ಚಳದೊಂದಿಗೆ ಎಂಬುದು ವಿಶೇಷ. ಅಂದರೆ ಮುಂಬರುವ ಐಪಿಎಲ್ ಟೂರ್ನಿಯಲ್ಲಿ 84 ಪಂದ್ಯಗಳನ್ನು ಆಡಿಸಲು ಚಿಂತಿಸಲಾಗಿದೆ. ಈವರಗೆ ಐಪಿಎಲ್​ನಲ್ಲಿ ಪ್ಲೇಆಫ್ ಸೇರಿ ಒಟ್ಟು 74 ಪಂದ್ಯಗಳನ್ನಾಡಲಾಗುತ್ತಿತ್ತು.

2 / 6

ಆದರೆ ಮುಂಬರುವ ಸೀಸನ್​ಗಳಲ್ಲಿ ಹೆಚ್ಚುವರಿ 10 ಪಂದ್ಯಗಳು ನಡೆಸುವ ಬಗ್ಗೆ ಬಿಸಿಸಿಐ ಚರ್ಚಿಸಿದೆ. ಈ ಮೂಲಕ ಒಟ್ಟು 84 ಪಂದ್ಯಗಳ ಟೂರ್ನಿಯನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ಅದರಂತೆ ಐಪಿಎಲ್​ 2025 ಮತ್ತು 2026 ರಲ್ಲಿ 84 ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

3 / 6

ಹಾಗೆಯೇ ಐಪಿಎಲ್​ 2027 ರಲ್ಲಿ ಈ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಏರಿಸಲಿದ್ದಾರೆ. ಇದರಿಂದ 2027 ರಲ್ಲಿ ಮತ್ತೆ ಲೀಗ್ ಮಾದರಿಯಲ್ಲೇ ಟೂರ್ನಿ ನಡೆಯಲಿದೆ. ಪ್ರಸ್ತುತ ಐಪಿಎಲ್​ ಅನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ.

4 / 6

ಐಪಿಎಲ್ 2021 ರಲ್ಲಿ ಒಟ್ಟು 60 ಪಂದ್ಯಗಳನ್ನು ನಡೆಸಲಾಗಿತ್ತು. ಇದರಲ್ಲಿ 56 ಲೀಗ್ ಪಂದ್ಯಗಳಿದ್ದರೆ, 4 ಪ್ಲೇಆಫ್​ ಪಂದ್ಯಗಳನ್ನು ಆಡಿಸಲಾಗಿತ್ತು. ಈ ವೇಳೆ ಪ್ರತಿ ತಂಡಗಳು ಪರಸ್ಪರ ಎರೆಡೆರಡು ಪಂದ್ಯಗಳನ್ನಾಡಿತ್ತು. ಈ ಮೂಲಕ ಲೀಗ್​ನಲ್ಲಿ ಎಲ್ಲಾ ತಂಡಗಳು ಪರಸ್ಪರ 2 ಪಂದ್ಯಗಳಂತೆ ಒಟ್ಟು 14 ಪಂದ್ಯಗಳನ್ನಾಡಿದ್ದರು. ಆದರೆ 2022ರಿಂದ ಐಪಿಎಲ್​ ಅನ್ನು ರೌಂಡ್ ರಾಬಿನ್ ಸ್ವರೂಪದಲ್ಲಿ ಆಯೋಜಿಸಲಾಗುತ್ತಿದೆ. ಈ ಸ್ವರೂಪವನ್ನೇ ಐಪಿಎಲ್ 2025 ಮತ್ತು 2026 ರಲ್ಲೂ ಮುಂದುವರೆಸಲಾಗುತ್ತದೆ.

5 / 6

ಇನ್ನು ಐಪಿಎಲ್ 2027 ರ ಸೀಸನ್​ ಅನ್ನು ಲೀಗ್ ಮಾದರಿಯಲ್ಲೇ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅಂದರೆ ಎಲ್ಲಾ ತಂಡಗಳು ಪರಸ್ಪರ ಎರೆಡೆರಡು ಪಂದ್ಯಗಳನ್ನು ಆಡಲಿದೆ. ಇಲ್ಲಿ ಯಾವುದೇ ಗ್ರೂಪ್ ಇರುವುದಿಲ್ಲ. ಬದಲಾಗಿ ಒಂದು ತಂಡವು ಉಳಿದ 9 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಈ ಮೂಲಕ ಲೀಗ್ ಹಂತದಲ್ಲಿ 90 ಪಂದ್ಯಗಳನ್ನು ಆಡಲಿದೆ.

6 / 6

ಸದ್ಯ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಚರ್ಚಿಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಇದಾಗ್ಯೂ ಮುಂಬರುವ ಸೀಸನ್​ಗಳಲ್ಲಿ ಪ್ಲೇಆಫ್​ ಮಾದರಿಯಲ್ಲಿ ಯಾವುದೇ ಬದಲಾವಣೆ ಕಂಡು ಬರುವುದಿಲ್ಲ. ಈಗಿರುವಂತೆ ಮೊದಲ ಕ್ವಾಲಿಫೈಯರ್ ಪಂದ್ಯ, ಎಲಿಮಿನೇಟರ್ ಪಂದ್ಯ, ಎರಡನೇ ಕ್ವಾಲಿಫೈಯರ್ ಪಂದ್ಯ ಹಾಗೂ ಫೈನಲ್ ಪಂದ್ಯಗಳನ್ನು ನಡೆಸಲಾಗುತ್ತದೆ.

Published On - 8:53 am, Tue, 28 May 24

Loading...
Unable to load recommendations.
Follow Us