AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ತಂತ್ರನಾ ಕುತಂತ್ರನಾ… ಮುಂದಿನ ಸೀಸನ್‌ಗಾಗಿ CSK ಪ್ಲ್ಯಾನ್?

IPL 2025 CSK: ಈ ಬಾರಿಯ ಐಪಿಎಲ್​ನಲ್ಲಿ 5 ಬಾರಿಯ ಚಾಂಪಿಯನ್ ಸಿಎಸ್​ಕೆ ತಂಡವು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಈವರೆಗೆ ಆಡಿದ 11 ಪಂದ್ಯಗಳಲ್ಲಿ 9 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ. ಇನ್ನು ಗೆದ್ದಿರುವುದು ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ. ಈ ಮೂಲಕ ಸಿಎಸ್​ಕೆ ತಂಡ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಝಾಹಿರ್ ಯೂಸುಫ್
|

Updated on: May 06, 2025 | 8:54 AM

Share
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಿಂದ ಚೆನ್ಣೈ ಸೂಪರ್ ಕಿಂಗ್ಸ್ (CSK) ತಂಡವು ಈಗಾಗಲೇ ಹೊರಬಿದ್ದಿದೆ. ಆಡಿದ 11 ಪಂದ್ಯಗಳಲ್ಲಿ ಸಿಎಸ್​ಕೆ ತಂಡ ಜಯ ಸಾಧಿಸಿದ್ದು ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ. ಈ ಸೋಲುಗಳ ನಡುವೆ ನಾವು ಮುಂದಿನ ಸೀಸನ್​ಗಾಗಿ ಸರಿಯಾದ ಸಂಯೋಜನೆ ರೂಪಿಸುತ್ತಿದ್ದೇವೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿಕೆಯೊಂದನ್ನು ನೀಡಿದ್ದರು.

1 / 10
ಈ ಹೇಳಿಕೆಯೊಂದಿಗೆ ಸಿಎಸ್​ಕೆ ತಂಡವು  ಮುಂದಿನ ಸೀಸನ್​ಗಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಚೆನ್ನೈ ಪಡೆ ಈ ಬಾರಿಯ ಐಪಿಎಲ್​ ನಡುವೆ ಮೂರು ಬದಲಾವಣೆ ಮಾಡಿಕೊಂಡಿದೆ. ಅಂದರೆ ಗಾಯಗೊಂಡ ಆಟಗಾರರ ಬದಲಿಯಾಗಿ ಮೂವರನ್ನು ಆಯ್ಕೆ ಮಾಡಿಕೊಂಡಿದೆ.

2 / 10
ಈ ಮೂವರಲ್ಲಿ ಇಬ್ಬರು ಈಗಾಗಲೇ ಪ್ಲೇಯಿಂಗ್​​ ಇಲೆವೆನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದರೆ ಸಿಎಸ್​ಕೆ ತಂಡವು ಬೆಂಚ್ ಕಾಯುತ್ತಿರುವ ಆಟಗಾರರ ಬದಲಿಗೆ, ಬದಲಿಯಾಗಿ ಆಯ್ಕೆಯಾದ ಆಟಗಾರರನ್ನು ಕಣಕ್ಕಿಳಿಸುತ್ತಿದ್ದಾರೆ. ಹೀಗಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಗಾಯದ ನೆಪದೊಂದಿಗೆ ಮುಂದಿನ ಸೀಸನ್​ಗಾಗಿ ಪ್ಲ್ಯಾನ್ ರೂಪಿಸುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

3 / 10
ರುತುರಾಜ್ ಗಾಯಕ್ವಾಡ್ ಬದಲಿಗೆ ಆಯ್ಕೆಯಾದ ಆಯುಷ್ ಮ್ಹಾತ್ರೆ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲಾಗಿತ್ತು. ಅತ್ತ ರಚಿನ್ ರವೀಂದ್ರ, ಡೆವೊನ್ ಕಾನ್ವೆಯಂತಹ ಸ್ಟಾರ್ ಆರಂಭಿಕರಿದ್ದರೂ ಸಿಎಸ್​ಕೆ ಫ್ರಾಂಚೈಸಿ ಟೂರ್ನಿ ನಡುವೆ ಆಯ್ಕೆಯಾದ ಆಯುಷ್​ಗೆ ಮಣೆ ಹಾಕಿದ್ದು ಅಚ್ಚರಿಗೆ ಕಾರಣವಾಗಿತ್ತು.

4 / 10
ತಂಡದಲ್ಲಿದ್ದ ವೇಗಿ ಗುರ್ಜಪ್ನೀತ್ ಸಿಂಗ್ ಗಾಯಗೊಂಡು ಹೊರಬಿದ್ದ ಬೆನ್ನಲ್ಲೇ ಸಿಎಸ್​ಕೆ ತಂಡ ಆಯ್ಕೆ ಮಾಡಿಕೊಂಡಿದ್ದು ಡೆವಾಲ್ಡ್ ಬ್ರೆವಿಸ್ ಅವರನ್ನು. ಅಂದರೆ ಭಾರತೀಯ ಆಟಗಾರನ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೌತ್ ಆಫ್ರಿಕಾದ ಹೊಡಿಬಡಿ ದಾಂಡಿಗನನ್ನು ಕರೆತಂದಿದ್ದರು. ಅಲ್ಲದೆ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಬ್ರೆವಿಸ್ ಪ್ಲೇಯಿಂಗ್ ಇಲೆವೆನ್​ನಲ್ಲೂ ಸ್ಥಾನ ಪಡೆದಿದ್ದರು. ಅಂದರೆ ಸಿಎಸ್​ಕೆ ತಂಡದಲ್ಲಿ ವಿದೇಶಿ ಆಟಗಾರರು ಬೆಂಚ್ ಕಾಯುತ್ತಿದ್ದರೂ, ಅವರನ್ನು ಸೈಡ್​ಗಿರಿಸಿ ಡೆವಾಲ್ಡ್ ಬ್ರೆವಿಸ್​ಗೆ ಅವಕಾಶ ನೀಡಲಾಗಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.

5 / 10
ಇದೀಗ ಸಿಎಸ್​ಕೆ ತಂಡದಲ್ಲಿದ್ದ ವಿಕೆಟ್ ಕೀಪರ್ ಬ್ಯಾಟರ್ ವಂಶ್ ಬೇಡಿ ಸಹ ಗಾಯಗೊಂಡು ಹೊರಬಿದ್ದಿದ್ದಾರೆ. ಅವರ ಬದಲಿಗೆ ದೇಶೀಯ ಅಂಗಳದ ಸ್ಪೋಟಕ ದಾಂಡಿಗ ಉರ್ವಿಲ್ ಪಟೇಲ್ ಅವರನ್ನು ಕರೆ ತರಲಾಗಿದೆ. ಇತ್ತ ಸಿಎಸ್​ಕೆ ತಂಡಕ್ಕೆ ಉಳಿದಿರುವುದು ಕೇವಲ 3 ಮ್ಯಾಚ್​ಗಳು ಮಾತ್ರ. ಅಲ್ಲದೆ ಈಗಾಗಲೇ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಇಂತಹ ಸಮಯದಲ್ಲಿ ಬದಲಿ ಆಟಗಾರನ ಆಯ್ಕೆ ಮಾಡಿಕೊಂಡಿದ್ದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

6 / 10
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಬದಲಿಯಾಗಿ ಬಂದ ಆಟಗಾರರನ್ನು ಮುಂದಿನ ಸೀಸನ್​ಗಾಗಿ ತಂಡದಲ್ಲೇ ಉಳಿಸಿಕೊಳ್ಳಬಹುದು ಎಂಬುದನ್ನು. ಅಂದರೆ ಸಿಎಸ್​ಕೆ ತಂಡವು ಮುಂದಿನ ಸೀಸನ್​ಗೂ ಮುನ್ನ ತಂಡದಲ್ಲಿರುವ ಕೆಲ ಆಟಗಾರರನ್ನು ಗಾಯದ ನೆಪದೊಂದಿಗೆ ಹೊರಹಾಕುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. 

7 / 10
ಏಕೆಂದರೆ ತಂಡದಲ್ಲಿರುವ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ ಎಂಬುದು ಈಗಾಗಲೇ ಜಗ್ಗಜ್ಜಾಹೀರಾಗಿದೆ. ಅಲ್ಲದೆ ಈ ಬಾರಿ ಸಿಎಸ್​ಕೆ ಫ್ರಾಂಚೈಸಿ ಖರೀದಿಸಿದ ಯುವ ಆಟಗಾರರಲ್ಲಿ ಭರ್ಜರಿ ಪ್ರದರ್ಶನ ನೀಡುವ ಸಾಮರ್ಥ್ಯವಿಲ್ಲ ಎಂಬುದು ಅರಿವಾಗಿರುವ ಸಾಧ್ಯತೆಯಿದೆ. ಇದೇ ಕಾರಣದಿಂದಾಗಿ ಸಿಎಸ್​ಕೆ ತಂಡವು ಗಾಯದ ಬೆನ್ನಲ್ಲೇ ಸ್ಪೋಟಕ ದಾಂಡಿಗರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

8 / 10
ಈ ಆಟಗಾರರನ್ನು ಮುಂದಿನ ಸೀಸನ್​ಗಾಗಿ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಮಿನಿ ಹರಾಜಿಗೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅತ್ಯುತ್ತಮ ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ಲ್ಯಾನ್ ರೂಪಿಸಿದಂತಿದೆ. ಇದಕ್ಕೆ ಸಾಕ್ಷಿ ಬೌಲರ್​ ಬದಲಿಗೆ ಡೆವಾಲ್ಡ್ ಬ್ರೆವಿಸ್ ಎಂಬ ಸ್ಪೋಟಕ ದಾಂಡಿಗ ಎಂಟ್ರಿ ಕೊಟ್ಟಿರುವುದು.  ಹಾಗೆಯೇ ಬದಲಿಯಾಗಿ ಬಂದ ಆಯುಷ್ ಮ್ಹಾತ್ರೆ ಒಮ್ಮೆಲ್ಲೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡಿರುವುದು. 

9 / 10
ಇದೀಗ ಕೇವಲ 3 ಪಂದ್ಯಗಳು ಮಾತ್ರ ಉಳಿದಿರುವಾಗ ದೇಶೀಯ ಅಂಗಳದ ಸ್ಪೋಟಕ ಬ್ಯಾಟರ್ ಉರ್ವಿಲ್ ಪಟೇಲ್ ಅವರನ್ನು ಸಿಎಸ್​ಕೆ ತಂಡ ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 2026ರ​ ಮಿನಿ ಹರಾಜಿಗೂ ಮುನ್ನವೇ ಮೂವರು ಸ್ಪೋಟಕ ದಾಂಡಿಗರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಂತಾಗಿದೆ. ಹೀಗಾಗಿಯೇ ಐಪಿಎಲ್ 2026 ಕ್ಕಾಗಿ ಸಿಎಸ್​ಕೆ ಫ್ರಾಂಚೈಸಿ ತೆರೆಮರೆಯಲ್ಲೇ ಪ್ಲ್ಯಾನ್ ರೂಪಿಸುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

10 / 10
ಅರಸು ದಾಖಲೆ ಬ್ರೇಕ್ ಮಾಡಲಿರುವ ಸಿಎಂ ಸಿದ್ದರಾಮಯ್ಯಗೆ ​​ಜೋಶಿ ಟಕ್ಕರ್

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ

ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ

ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ

ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ

ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ

ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ

ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ