AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಉಲ್ಟಾ ಹೊಡೆದ ಜೋಫ್ರಾ: ಕೊನೆಯ ಕ್ಷಣದಲ್ಲಿ ಹರಾಜಿಗೆ ಆರ್ಚರ್

IPL 2025 Mega Auction: ಜೋಫ್ರಾ ಆರ್ಚರ್ ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರು. ಆದರೆ ಗಾಯದ ಕಾರಣ ಕಳೆದ ಸೀಸನ್​ನಲ್ಲಿ ಅವರು ಆಡಿರಲಿಲ್ಲ. ಈ ಬಾರಿಯ ಮೆಗಾ ಹರಾಜಿಗೆ ಹೆಸರು ನೀಡಿದರೂ, ಶಾರ್ಟ್ ಲಿಸ್ಟ್​ನಲ್ಲಿ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ.

TV9 Web
| Edited By: |

Updated on:Nov 21, 2024 | 8:33 AM

Share
IPL 2025: ಐಪಿಎಲ್ ಮೆಗಾ ಹರಾಜಿಗಾಗಿ 574 ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಆಟಗಾರರಲ್ಲಿ ಇಂಗ್ಲೆಂಡ್​ನ 37 ಪ್ಲೇಯರ್ಸ್ ಕಾಣಿಸಿಕೊಂಡಿದ್ದಾರೆ. ಆದರೆ ಇವರಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿತ್ತು.

1 / 5
ಏಕೆಂದರೆ ಐಪಿಎಲ್​ ಮೆಗಾ ಹರಾಜಿಗೆ ಹೆಸರು ನೀಡಿದವರಲ್ಲಿ ಜೋಫ್ರಾ ಆರ್ಚರ್ ಕೂಡ ಒಬ್ಬರು. ಆದರೆ ಅಂತಿಮ ಪಟ್ಟಿಯಲ್ಲಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಇದಕ್ಕೆ ಮುಖ್ಯ ಕಾರಣ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆರ್ಚರ್​ಗೆ ಐಪಿಎಲ್ ಆಡಲು ಅನುಮತಿ ನೀಡದಿರುವುದು ಎಂದು ತಿಳಿದು ಬಂದಿದೆ.

2 / 5
ಮುಂಬರುವ ಟೆಸ್ಟ್ ಸರಣಿಗಳನ್ನು ಕೇಂದ್ರೀಕರಿಸಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೆಲ ಆಟಗಾರರಿಗೆ ಎನ್​ಒಸಿ ನೀಡಲು ನಿರಾಕರಿಸಿದೆ. ಇದರಿಂದಾಗಿ ಇಂಗ್ಲೆಂಡ್ ವೇಗದ ಬೌಲರ್​ಗಳಾದ ಮಾರ್ಕ್​ ವುಡ್ ಹಾಗೂ ಜೋಫ್ರಾ ಆರ್ಚರ್ ಹೆಸರುಗಳು ಅಂತಿಮ ಪಟ್ಟಿಯಿಂದ ಹೊರಬಿದ್ದಿದ್ದವು.

3 / 5
ಆದರೀಗ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ನಿಲುವಿಗೆ ಜೋಫ್ರಾ ಆರ್ಚರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂಬರುವ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಜೋಫ್ರಾ ಆರ್ಚರ್ ಇಸಿಬಿ ಜೊತೆ ಚರ್ಚಿಸಿದ್ದು, ಹೀಗಾಗಿ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ವೇಗಿಯ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

4 / 5
ಇತ್ತ ಮೆಗಾ ಹರಾಜಿಗೂ ಮುನ್ನ ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್​ಗೆ ಸೇರಿಸಲು ಅವಕಾಶವಿದೆ. ಇದೀಗ ಜೋಫ್ರಾ ಆರ್ಚರ್ ಐಪಿಎಲ್ ಆಡಲು ಬಯಸಿರುವುದರಿಂದ ಕೊನೆಯ ಕ್ಷಣದಲ್ಲಿ ಅವರ ಹೆಸರು ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕ್ರಿಕೆಟ್ ಬ್ರಾಡ್​ಕಾಸ್ಟರ್ ಮ್ಯಾಟ್ ಕಬೀರ್ ಫ್ಲೋಡ್ ತಿಳಿಸಿದ್ದಾರೆ. ಅದರಂತೆ ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ 575ನೇ ಆಟಗಾರನಾಗಿ ಜೋಫ್ರಾ ಆರ್ಚರ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

5 / 5

Published On - 8:30 am, Thu, 21 November 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ