IPL 2025: ಧೋನಿಯ ಸಂಭಾವನೆ ಕಡಿತ: ಅತೀ ಕಡಿಮೆ ಮೊತ್ತ ಪಡೆಯಲಿರುವ MSD

Updated on: Sep 26, 2024 | 10:17 AM

IPL 2025: ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ ಐವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ. ಈ ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ದಿಷ್ಟ ಮೊತ್ತವನ್ನು ವ್ಯಯಿಸಬೇಕಾಗುತ್ತದೆ. ಹೀಗೆ ನಿಗದಿತ ಮೊತ್ತದೊಳಗೆ ಐವರು ಆಟಗಾರರ ಸಂಭಾವನೆ ನೀಡಬೇಕಾಗುತ್ತದೆ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)​ ಸೀಸನ್-18ರ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 5 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಈ ಐವರು ಆಟಗಾರರಲ್ಲಿ ಅತೀ ಕಡಿಮೆ ಹಣ ಪಡೆಯಲಿರುವುದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎನ್ನಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)​ ಸೀಸನ್-18ರ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 5 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಈ ಐವರು ಆಟಗಾರರಲ್ಲಿ ಅತೀ ಕಡಿಮೆ ಹಣ ಪಡೆಯಲಿರುವುದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎನ್ನಲಾಗಿದೆ.

2 / 6

ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಡೆಯಿಂದ ಧೋನಿ ಪ್ರಸ್ತುತ ಪಡೆಯುತ್ತಿರುವ ಮೊತ್ತ 12 ಕೋಟಿ ರೂ. 2022ರ ಹರಾಜಿನ ವೇಳೆ ಸಿಎಸ್​ಕೆ 2ನೇ ಆಟಗಾರನಾಗಿ ಧೋನಿಯನ್ನು ರಿಟೈನ್ ಮಾಡಿಕೊಂಡಿತ್ತು. ಅದರಂತೆ ಮೊದಲಿಗನಾಗಿ ರಿಟೈನ್ ಆಗಿದ್ದ ರವೀಂದ್ರ ಜಡೇಜಾ 16 ಕೋಟಿ ರೂ. ಪಡೆದರೆ, ಧೋನಿಗೆ 12 ಕೋಟಿ ರೂ. ನೀಡಲಾಗಿತ್ತು.

3 / 6

ಇದೀಗ ಐಪಿಎಲ್ 2025 ರಲ್ಲಿ ಧೋನಿ ಅತೀ ಕಡಿಮೆ ಮೊತ್ತಕ್ಕೆ ರಿಟೈನ್ ಆಗಲಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಇದಕ್ಕೆ ಮುಖ್ಯ ಕಾರಣ ಅವರನ್ನು ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಳ್ಳುತ್ತಿರುವುದು. ಅಂದರೆ ಐಪಿಎಲ್​ನಲ್ಲಿ ರಿಟೇನ್ಷನ್ ಪಟ್ಟಿಯಲ್ಲಿ ಅನ್​ಕ್ಯಾಪ್ಡ್ ಆಟಗಾರನಾಗಿ ಆಯ್ಕೆಯಾಗುವ ಪ್ಲೇಯರ್​ಗೆ ಕಡಿಮೆ ಹಣ ನೀಡಲಾಗುತ್ತದೆ.

4 / 6

2022ರ ಹರಾಜಿನ ನಿಯಮದ ಪ್ರಕಾರ ಅನ್​ಕ್ಯಾಪ್ಡ್ ರಿಟೈನ್ ಆಟಗಾರನಿಗೆ ಕೇವಲ 4 ಕೋಟಿ ರೂ. ನಿಗದಿ ಮಾಡಲಾಗಿತ್ತು. ಈ ಬಾರಿ ಕೂಡ 4 ಕೋಟಿ ಅಥವಾ 5 ಕೋಟಿ ರೂ. ನಿಗದಿಪಡಿಸುವ ಸಾಧ್ಯತೆಯಿದೆ. ಇದರಿಂದಾಗಿ ಮಹೇಂದ್ರ ಸಿಂಗ್ ಧೋನಿ ಅವರ ಸಂಭಾವನೆ ಮೊತ್ತ ಕಡಿಮೆಯಾಗಲಿರುವುದು ಬಹುತೇಕ ಖಚಿತ.

5 / 6

ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವತ್ತರಾಗಿ 5 ವರ್ಷ ಕಳೆದಿರುವ ಆಟಗಾರರನ್ನು ಅನ್​ಕ್ಯಾಪ್ಡ್ ಆಟಗಾರರ ಪಟ್ಟಿಗೆ ಸೇರಿಸಿಕೊಳ್ಳಲು ಅವಕಾಶ ನೀಡಬೇಕೆಂದು ಬಿಸಿಸಿಐಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮನವಿ ಮಾಡಿದೆ. ಈ ಕೋರಿಕೆಯಂತೆ ಈ ಬಾರಿ ಹೊಸ ನಿಯಮವು ಜಾರಿಯಾಗುವ ಸಾಧ್ಯತೆಯಿದೆ.

6 / 6

ಅದರಂತೆ 2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿರುವ ಧೋನಿ ಈ ಬಾರಿ ಅನ್ ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿಯೇ ಮಹೇಂದ್ರ ಸಿಂಗ್ ಧೋನಿಯ ರಿಟೈನ್ ಮೊತ್ತವು ಒಂದಂಕಿ ಕೋಟಿಗೆ ಸೀಮಿತವಾಗಲಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us