- Kannada News Photo gallery Cricket photos IPL 2025: RCB is a god gifted franchise with the most loyal fanbase: Ravi Ashwin
ದೇವರ ಉಡುಗೊರೆ… RCB ಅಭಿಮಾನಿಗಳನ್ನು ಹಾಡಿ ಹೊಗಳಿದ ಅಶ್ವಿನ್
IPL 2025: ಐಪಿಎಲ್ 2025 ರಲ್ಲಿ ರವಿಚಂದ್ರನ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ. ಏಕೆಂದರೆ ಇತ್ತೀಚೆಗಷ್ಟೇ ಅಶ್ವಿನ್ ಅವರನ್ನು ಸಿಎಸ್ಕೆ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಹೈ ಪರ್ಫಾರ್ಮೆನ್ಸ್ ಸೆಂಟರ್‌ನ ಮುಖ್ಯಸ್ಥರಾಗಿ ನೇಮಿಸಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಅಶ್ವಿನ್ ಹೊರಬರುವುದು ಬಹುತೇಕ ಖಚಿತ ಎನ್ನಬಹುದು.
Updated on: Oct 16, 2024 | 8:54 AM

17 ವರ್ಷಗಳು...ಒಂದೇ ಒಂದು ಕಪ್ ಗೆದ್ದಿಲ್ಲ...ಪ್ರತಿ ಸೀಸನ್ನಲ್ಲೂ ಲೆಕ್ಕಾಚಾರ... ಕೊನೆಗೆ ನೋವಿನ ವಿದಾಯ. ಇದಾಗ್ಯೂ ಅಂದಿಗೂ ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ನಿಷ್ಠೆ ಮಾತ್ರ ಬದಲಾಗಿಲ್ಲ. ಈ ಸಲ ಕಪ್ ನಮ್ದೆ ಎನ್ನುವ ವಿಶ್ವಾಸ, ಕಪ್ ಕೈ ತಪ್ಪಿದ್ದರೆ ಮುಂದಿನ ವರ್ಷ ನಮ್ದೆ ಎನ್ನುವ ಭರವಸೆ.

ಇಂತಹ ಅಭಿಮಾನಿಗಳನ್ನು ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯೇ ಧನ್ಯ ಎಂದಿದ್ದಾರೆ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಆರ್ಸಿಬಿ ಬಗ್ಗೆ ಮಾತನಾಡಿದ ಅಶ್ವಿನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ದೇವರಿಂದ ಪಡೆದಿರುವ ಉಡುಗೊರೆ ಎಂದರೆ ಅವರ ಅಭಿಮಾನಿಗಳು ಎಂದು ಹೊಗಳಿದ್ದಾರೆ.

ಆರ್ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿಯನ್ನು ತುಂಬಾ ಪ್ರೀತಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ಟ್ರೋಲಿಂಗ್‌ಗಳನ್ನು ನೋಡಿ ಹಲವರು ಖಿನ್ನತೆಗೆ ಒಳಗಾಗುತ್ತಾರೆ. ಇದಾಗ್ಯೂ ತಂಡದ ಮೇಲಿನ ಅವರ ನಿಷ್ಠೆ ಮಾತ್ರ ಬದಲಾಗಲ್ಲ ಎಂದು ರವಿಚಂದ್ರನ್ ಅಶ್ವಿನ್ ಆರ್ಸಿಬಿ ಅಭಿಮಾನಿಗಳ ನಿಯತ್ತನ್ನು ಕೊಂಡಾಡಿದ್ದಾರೆ.

ನನ್ನ ಪ್ರಕಾರ, ಆರ್ಸಿಬಿ ಫ್ರಾಂಚೈಸಿ ದೇವರಿಂದ ಪಡೆದ ಉಡುಗೊರೆ ಎಂದರೆ ಅದು ಅತ್ಯಂತ ನಿಷ್ಠಾವಂತ ಅಭಿಮಾನಿಗಳು. ಅವರ ಅಭಿಮಾನಿಗಳು ಯಾವಾಗಲೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿಯೇ ಕಳೆದ 10 ವರ್ಷಗಳಲ್ಲಿ ಆರ್ಸಿಬಿ ಅತ್ಯಂತ ಸ್ಥಿರವಾದ ತಂಡವಾಗಿ ನಿಂತಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಟೀಮ್ ಇಂಡಿಯಾದ ಸ್ಪಿನ್ ದಿಗ್ಗಜ ಅಶ್ವಿನ್ ಅವರ ಮಾತಿನಿಂದ ಇದೀಗ ಆರ್ಸಿಬಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾಗಳಲ್ಲಿ... ಇಂದಿಗೂ ಎಂದಿಗೂ ಎಂದೆಂದಿಗೂ ರಾಯಲ್ ಅಭಿಮಾನಿಗಳ ನಿಷ್ಠೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂಬುದನ್ನು ಸಾರಿ ಹೇಳುತ್ತಿದ್ದಾರೆ.



















