IPL 2025: ಮುಂದಿನ ಪಂದ್ಯಕ್ಕೆ RCB ನಾಯಕನೇ ಅಲಭ್ಯ..!

Updated on: May 11, 2025 | 7:54 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಶನಿವಾರ ಸಂಜೆ ಭಾರತ ಮತ್ತು ಪಾಕಿಸ್ತಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಈ ಬೆಳವಣಿಗೆ ನಡೆದಿದ್ದು, ಹೀಗಾಗಿ ಈ ವಾರದಲ್ಲೇ ಐಪಿಎಲ್ ಮತ್ತೆ ಶುರುವಾಗಲಿದೆ.

1 / 5
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 59ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗಲಿದೆ. ಲಕ್ನೋ ಏಕಾನ ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಈ ಪಂದ್ಯದಲ್ಲಿ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ.

2 / 5
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಫೀಲ್ಡಿಂಗ್​ ವೇಳೆ ರಜತ್ ಪಾಟಿದಾರ್ ಅವರ ಬೆರಳಿಗೆ ಗಾಯವಾಗಿದ್ದು, ಹೀಗಾಗಿ ವೈದ್ಯರು ಕೆಲ ದಿನಗಳವರೆಗೆ ವಿಶ್ರಾಂತಿ ಸೂಚಿಸಿದ್ದಾರೆ. ಇದೇ ಕಾರಣದಿಂದಾಗಿ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು.

3 / 5
ಇದೀಗ ಒಂದು ವಾರದ ಬಳಿಕ ಐಪಿಎಲ್ ಅನ್ನು ಪುನರಾರಂಭಿಸಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಗುರುವಾರ ಅಥವಾ ಶುಕ್ರವಾರದಿಂದ ಟೂರ್ನಿ ಮತ್ತೆ ಶುರುವಾಗುವ ಸಾಧ್ಯತೆಯಿದೆ. ಈ ವೇಳೆಗೆ ರಜತ್ ಪಾಟಿದಾರ್ ಅವರ ಗಾಯವು ಸಂಪೂರ್ಣ ಗುಣವಾದರೆ ಮಾತ್ರ ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

4 / 5
ಇತ್ತ ರಜತ್ ಪಾಟಿದಾರ್ ಅಲಭ್ಯರಾಗುವ ಸಾಧ್ಯತೆಯಿರುವ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈಗಾಗಲೇ ಹಂಗಾಮಿ ನಾಯಕನಾಗಿ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಿಕೊಂಡಿದೆ. ಒಂದು ವೇಳೆ ಪಾಟಿದಾರ್ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯದಿದ್ದರೆ, ಜಿತೇಶ್ ಶರ್ಮಾ ಆರ್​​ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ.

5 / 5
ಇನ್ನು ಆರ್​ಸಿಬಿ ತಂಡದ ಮುಂದಿನ ಎದುರಾಳಿಗಳು ಯಾರೆಂದು ನೋಡುವುದಾದರೆ... ಲಕ್ನೋ ಸೂಪರ್ ಜೈಂಟ್ಸ್ (ಏಕಾನ ಸ್ಟೇಡಿಯಂ ಲಕ್ನೋ), ಸನ್​ರೈಸರ್ಸ್ ಹೈದರಾಬಾದ್ (ಚಿನ್ನಸ್ವಾಮಿ ಸ್ಡೇಡಿಯಂ ಬೆಂಗಳೂರು) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (ಚಿನ್ನಸ್ವಾಮಿ ಸ್ಡೇಡಿಯಂ ಬೆಂಗಳೂರು). ಈ ಮೂರು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ವಿಶ್ವಾಸದಲ್ಲಿದೆ.