- Kannada News Photo gallery Cricket photos RCB IPL 2024 Squad: Analysis of New Players & AB de Villiers' Insights
IPL Auction 2025: ಆರ್‌ಸಿಬಿ ತಂಡಕ್ಕೆ ಈತನೇ ನಾಯಕ ಎಂದ ಎಬಿ ಡಿವಿಲಿಯರ್ಸ್
AB de Villiers RCB: ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿಲಿವಿಯರ್ಸ್ ಆರ್‌ಸಿಬಿಯ ಖರೀದಿಯ ಬಗ್ಗೆ ಮಾತನಾಡಿದ್ದು, ತಂಡದ ಮುಂದಿನ ನಾಯಕ ಹಾಗೂ ತಂಡದ ನ್ಯೂನತೆಯಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಡಿವಿಲಿಯರ್ಸ್ ಪ್ರಕಾರ, ವಿರಾಟ್ ಕೊಹ್ಲಿ ಆರ್‌ಸಿಬಿಯ ಮುಂದಿನ ನಾಯಕನಾಗುವ ಸಾಧ್ಯತೆಗಳಿವೆ.
Updated on: Nov 29, 2024 | 3:55 PM

18ನೇ ಆವೃತ್ತಿಯ ಐಪಿಎಲ್ಗೆ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಬಲಿಷ್ಠ ಪಡೆಯನ್ನು ಕಟ್ಟಿಕೊಂಡು ಕಣಕ್ಕಿಳಿಯಲು ಸಜ್ಜಾಗಿವೆ. ಕೆಲವು ದಿನಗಳ ಹಿಂದೆ ನಡೆದ ಮೆಗಾ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ನೂತನ ತಂಡವನ್ನು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅವುಗಳಲ್ಲಿ ಆರ್‌ಸಿಬಿ ಕೂಡ ಒಂದಾಗಿದೆ. ಈ ಫ್ರಾಂಚೈಸಿಯಲ್ಲಿ ಈ ಬಾರಿ ಹೊಸ ಆಟಗಾರರು ಕಂಗೊಳಿಸಲಿದ್ದಾರೆ.

ಆದರೆ ಫ್ರಾಂಚೈಸಿಯ ಆಟಗಾರರ ಆಯ್ಕೆಯ ಮೇಲೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ತಂಡದಲ್ಲಿ ಕರ್ನಾಟದ ಸ್ಟಾರ್ ಆಟಗಾರರಿಲ್ಲ ಎಂಬುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಉಳಿದಂತೆ ಕ್ರಿಕೆಟ್ ಪಂಡಿತರಿಂದ ಫ್ರಾಂಚೈಸಿಯ ಖರೀದಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಈ ನಡುವೆ ತಂಡದ ಮಾಜಿ ಆಟಗಾರ ಎಬಿ ಡಿಲಿವಿಯರ್ಸ್, ಆರ್‌ಸಿಬಿಯ ಖರೀದಿಯ ಬಗ್ಗೆ ಮಾತನಾಡಿದ್ದು, ತಂಡದ ಮುಂದಿನ ನಾಯಕ ಹಾಗೂ ತಂಡದ ನ್ಯೂನತೆಯಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಡಿವಿಲಿಯರ್ಸ್ ಪ್ರಕಾರ, ವಿರಾಟ್ ಕೊಹ್ಲಿ ಆರ್‌ಸಿಬಿಯ ಮುಂದಿನ ನಾಯಕನಾಗುವ ಸಾಧ್ಯತೆಗಳಿವೆ.

ವಾಸ್ತವವಾಗಿ ಮೆಗಾ ಹರಾಜಿಗೂ ಮುಂಚೆಯೇ, ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ನಾಯಕರಾಗುತ್ತಾರೆ ಎಂಬ ಊಹಾಪೋಹ ಇತ್ತು. ಕೊಹ್ಲಿ 2021 ರಲ್ಲಿ ಆರ್‌ಸಿಬಿ ನಾಯಕತ್ವವನ್ನು ತೊರೆದಿದ್ದರು. ಇದೀಗ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆರ್‌ಸಿಬಿಯ ಹೊಸ ನಾಯಕನ ಬಗ್ಗೆ ಮಾತನಾಡಿದ್ದು, ತಂಡವನ್ನು ನೋಡುವಾಗ, ವಿರಾಟ್ ಕೊಹ್ಲಿ ಮತ್ತೊಮ್ಮೆ ನಾಯಕರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇನ್ನು ಆರ್‌ಸಿಬಿಯ ಹೊಸ ತಂಡದ ನ್ಯೂನತೆಗಳ ಬಗ್ಗೆ ಮಾತನಾಡಿರುವ ಡಿವಿಲಿಯರ್ಸ್, ‘ಹರಾಜಿನಲ್ಲಿ ನಾವು ಕೆಲವು ಅವಕಾಶಗಳನ್ನು ಕಳೆದುಕೊಂಡಿದ್ದೇವೆ. ನಾವು ರಬಾಡ ಅವರನ್ನು ಖರೀದಿಸಬಹುದಿತ್ತು, ಆದರೆ ಅದು ಆಗಲಿಲ್ಲ ಆದರೆ ನಮಗೆ ಲುಂಗಿ ಎನ್ಗಿಡಿ ಸಿಕ್ಕಿದ್ದಾರೆ. ಇದರ ಹೊರತಾಗಿ ನಾವು ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಿದ್ದೇವೆ. ಜೋಶ್ ಹ್ಯಾಜಲ್‌ವುಡ್ ತಂಡ ಸೇರಿರುವುದು ಸಂತೋಷವಾಗಿದೆ.

ಆದರೆ ನಾವು ಆರ್ ಅಶ್ವಿನ್ ಅವರನ್ನು ಕಳೆದುಕೊಂಡಿದ್ದೇವೆ. ಹಾಗೆಯೇ ಪ್ರಮುಖ ಸ್ಪಿನ್ನರ್ ತಂಡದಲ್ಲಿ ಇಲ್ಲದಿರುವುದು ತಂಡಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ. ಎರಡೂ ಕಡೆ ಚೆಂಡನ್ನು ಸ್ಪಿನ್ ಮಾಡುವ ಸ್ಪಿನ್ನರ್ನ ಅಗತ್ಯತೆ ನಮಗಿತ್ತು. ಆದರೆ ಅಂತಹ ಸ್ಪಿನ್ನರ್ ಅನ್ನು ಖರೀದಿಸಲು ಸಾಧ್ಯವಾಗಿಲ್ಲ. ಉಳಿದಂತೆ ಆರ್‌ಸಿಬಿ ತುಂಬಾ ಸಮತೋಲಿತ ತಂಡವಾಗಿದೆ ಎಂದು ತೋರುತ್ತದೆ, ನಾನು ಅದರಲ್ಲಿ ಸಾಕಷ್ಟು ಸಂತೋಷವಾಗಿದ್ದೇನೆ ಎಂದಿದ್ದಾರೆ.

ಈ ಬಾರಿ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಆಟಗಾರರನ್ನು ಖರೀದಿಸಿದೆ. ಇದರಲ್ಲಿ ಜೋಶ್ ಹ್ಯಾಜಲ್‌ವುಡ್ ಅತ್ಯಂತ ದುಬಾರಿ ಆಟಗಾರನಾಗಿದ್ದು, ಅವರನ್ನು ಆರ್‌ಸಿಬಿ 12.50 ಕೋಟಿಗೆ ಖರೀದಿಸಿದೆ. ಈ ಬಾರಿ ಆರ್‌ಸಿಬಿ 4 ಬ್ಯಾಟ್ಸ್‌ಮನ್‌ಗಳು ಮತ್ತು 9 ಬೌಲರ್‌ಗಳನ್ನು ಖರೀದಿಸಿದೆ.



















