IPL 2026: ಕೇವಲ 31 OP ಸ್ಲಾಟ್: ಹರಾಜಿನಲ್ಲಿ ಎಷ್ಟು ಆಟಗಾರರಿಗೆ ಸಿಗಲಿದೆ ಚಾನ್ಸ್​?

Updated on: Nov 17, 2025 | 4:03 PM

IPL 2026 Mini Auction: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿಗಾಗಿ ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದೆ. ಅಬುಧಾಬಿಯಲ್ಲಿ ನಡೆಯಲಿರುವ ಈ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಆರು ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬಹುದು.

1 / 5
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ರಿಟೆನ್ಷನ್ ಪ್ರಿಕ್ರಿಯೆ ಮುಗಿದಿದೆ. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಆಟಗಾರರನ್ನು ರಿಟೈನ್ ಮಾಡಿಕೊಂಡ ಫ್ರಾಂಚೈಸಿ ಪಂಜಾಬ್ ಕಿಂಗ್ಸ್​. ಪಂಜಾಬ್ ಕಿಂಗ್ಸ್ 21 ಆಟಗಾರರನ್ನು ಉಳಿಸಿಕೊಂಡರೆ, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಲಾ 20 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ರಿಟೆನ್ಷನ್ ಪ್ರಿಕ್ರಿಯೆ ಮುಗಿದಿದೆ. ಈ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಆಟಗಾರರನ್ನು ರಿಟೈನ್ ಮಾಡಿಕೊಂಡ ಫ್ರಾಂಚೈಸಿ ಪಂಜಾಬ್ ಕಿಂಗ್ಸ್​. ಪಂಜಾಬ್ ಕಿಂಗ್ಸ್ 21 ಆಟಗಾರರನ್ನು ಉಳಿಸಿಕೊಂಡರೆ, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಲಾ 20 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

2 / 5

ಇನ್ನು 10 ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡಿರುವ ಒಟ್ಟು ಆಟಗಾರರ ಸಂಖ್ಯೆ ಬರೋಬ್ಬರಿ 173 ಪ್ಲೇಯರ್ಸ್​. ಈ 173 ಆಟಗಾರರಲ್ಲಿ 49 ವಿದೇಶಿ ಆಟಗಾರರಿದ್ದಾರೆ. ಅಂದರೆ ಮಿನಿ ಹರಾಜಿನಲ್ಲಿ ಕೇವಲ 31 ಓವರ್ಸಿಸ್ ಪ್ಲೇಯರ್ಸ್​ಗೆ ಮಾತ್ರ ಅವಕಾಶ ದೊರೆಯಲಿದೆ.

3 / 5

ಐಪಿಎಲ್ ನಿಯಮ ಪ್ರಕಾರ ಒಂದು ಫ್ರಾಂಚೈಸಿಯು ಕನಿಷ್ಠ 18 ಆಟಗಾರರನ್ನು ಹೊಂದಿರಲೇಬೇಕು. ಹಾಗೆಯೇ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇದೀಗ 10 ಫ್ರಾಂಚೈಸಿಗಳು 173 ಪ್ಲೇಯರ್ಸ್​ಗಳನ್ನು ರಿಟೈನ್ ಮಾಡಿಕೊಂಡಿರುವ ಕಾರಣ ಹರಾಜಿನ ಮೂಲಕ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.

4 / 5

ಇಲ್ಲಿ ಎಲ್ಲಾ ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರನ್ನು ಆಯ್ಕೆ ಮಾಡಲು ಮುಂದಾದರೆ ಹರಾಜಿನ ಮೂಲಕ 77 ಪ್ಲೇಯರ್ಸ್​ಗೆ ಅವಕಾಶ ಸಿಗಲಿದೆ. ಅದರಂತೆ ಈ ಬಾರಿಯ ಹರಾಜಿನ ಮೂಲಕ ಗರಿಷ್ಠ 77 ಆಟಗಾರರು ಮಾತ್ರ ಆಯ್ಕೆಯಾಗಲಿದ್ದಾರೆ. ಇದರಲ್ಲಿ 31 ವಿದೇಶಿ ಆಟಗಾರರಿಗೆ ಚಾನ್ಸ್ ಸಿಗಬಹುದು.

5 / 5

ಅಂದರೆ ಮಿನಿ ಹರಾಜಿನ ಮೂಲಕ 10 ತಂಡಗಳು 46 ಭಾರತೀಯರು ಹಾಗೂ 31 ವಿದೇಶಿ ಆಟಗಾರರನ್ನು ಖರೀದಿಸಬಹುದು.  ಅದರಂತೆ ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಮಿನಿ ಆಕ್ಷನ್​ ಮೂಲಕ ಯಾವ ಆಟಗಾರ ಯಾವ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ? ಎಂಬುದನ್ನು ಕಾದು ಬೋಡಬೇಕಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us