- Kannada News Photo gallery Cricket photos IPL 2026: Josh Inglis available for just 4 IPL games this season
IPL 2026: ಕೇವಲ 4 ಪಂದ್ಯಗಳಿಗಾಗಿ 2 ಕೋಟಿ ರೂ. ಘೋಷಿಸಿದ ಆಸ್ಟ್ರೇಲಿಯಾ ಆಟಗಾರ
IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದೆ. ಅಬುಧಾಬಿಯಲ್ಲಿ ಜರುಗಲಿರುವ ಈ ಆಕ್ಷನ್ ಪ್ರಕ್ರಿಯೆಗಾಗಿ ಬರೋಬ್ಬರಿ 1355 ಆಟಗಾರರು ಹೆಸರು ನೀಡಿದ್ದಾರೆ. ಈ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಕೂಡ ಕಾಣಿಸಿಕೊಂಡಿದ್ದಾರೆ.
Updated on: Dec 09, 2025 | 7:53 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿನ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಆಟಗಾರರ ನೋಂದಣಿ ಪ್ರಕ್ರಿಯೆ ಮುಗಿದಿದ್ದು. ಒಟ್ಟು 1355 ಆಟಗಾರರು ಹರಾಜಿಗಾಗಿ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಹೀಗೆ ಹೆಸರು ನೋಂದಣಿ ಮಾಡಿಕೊಂಡ ಆಟಗಾರರಲ್ಲಿ 45 ಮಂದಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ.

ಹೀಗೆ ಗರಿಷ್ಠ ಮೂಲ ಬೆಲೆ ಘೋಷಿಸಿದ 45 ಆಟಗಾರರಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಕೂಡ ಇರುವುದು ವಿಶೇಷ. ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಇಂಗ್ಲಿಸ್ ಅವರನ್ನು ಈ ಬಾರಿ ತಂಡದಿಂದ ಕೈ ಬಿಡಲು ಮುಖ್ಯ ಕಾರಣ ಅವರು ಮುಂದಿನ ಸೀಸನ್ಗೆ ಅಲಭ್ಯರಾಗಲಿರುವುದು.

ಐಪಿಎಲ್ 2026 ರಲ್ಲಿ ಕೆಲ ಪಂದ್ಯಗಳಿಗೆ ಮಾತ್ರ ಲಭ್ಯನಿರಲಿದ್ದೇನೆ ಎಂದು ತಿಳಿಸಿದ ಕಾರಣ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಜೋಶ್ ಇಂಗ್ಲಿಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದ್ದರು. ಇತ್ತ ರಿಲೀಸ್ ಆದ ಬೆನ್ನಲ್ಲೇ ಇಂಗ್ಲಿಸ್ ಐಪಿಎಲ್ ಮಿನಿ ಹರಾಜಿಗೆ ಹೆಸರು ನೀಡಿದ್ದಾರೆ.

ಅದು ಕೂಡ ಬರೋಬ್ಬರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಎಂಬುದು ವಿಶೇಷ. ಅಂದರೆ ಜೋಶ್ ಇಂಗ್ಲಿಸ್ ಐಪಿಎಲ್ 2026 ರಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಈ ನಾಲ್ಕು ಪಂದ್ಯಗಳಿಗಾಗಿ ಇಂಗ್ಲಿಸ್ ಬರೋಬ್ಬರಿ 2 ಕೋಟಿ ರೂ. ಬೇಸ್ ಪ್ರೈಸ್ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಇತ್ತ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಳ್ಳಲಿರುವ ಜೋಶ್ ಇಂಗ್ಲಿಸ್ ಅವರನ್ನು ಕೇವಲ 4 ಮ್ಯಾಚ್ಗಳಿಗಾಗಿ ಯಾವುದಾದರೂ ತಂಡ ಖರೀದಿಸಲಿದೆಯಾ ಎಂಬುದೇ ಈಗ ಕುತೂಹಲ. ಒಂದು ವೇಳೆ ಅವರನ್ನು ಯಾವುದಾದರೂ ಫ್ರಾಂಚೈಸಿ ಆಯ್ಕೆ ಮಾಡಿಕೊಂಡರೂ ಟೂರ್ನಿ ಮಧ್ಯೆದಲ್ಲೇ ಬದಲಿ ಆಟಗಾರರನ್ನು ಸಹ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಹೀಗಾಗಿ ಈ ಬಾರಿ ಜೋಶ್ ಇಂಗ್ಲಿಸ್ ಅವರ ಬಿಕರಿಯಾಗದೇ ಉಳಿಯಲಿದ್ದಾರಾ? ಅಥವಾ ಕೋಟಿ ಮೊತ್ತಕ್ಕೆ ಮಾರಾಟವಾಗಲಿದ್ದಾರಾ ಕಾದು ನೋಡಬೇಕಿದೆ.




