- Kannada News Photo gallery Cricket photos IPL 2026: Josh Inglis will be paid 2.15 crore per match by LSG
ಇಂಗ್ಲಿಸ್ಗೆ ಜಾಕ್ ಪಾಟ್: ಒಂದು ಮ್ಯಾಚ್ಗೆ ಬರೋಬ್ಬರಿ 2.14 ಕೋಟಿ ರೂ.
IPL 2026 Josh Inglis: ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಜೋಸ್ ಇಂಗ್ಲಿಸ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೆ ಆಡಿರುವುದು ಕೇವಲ 11 ಪಂದ್ಯಗಳನ್ನು ಮಾತ್ರ. ಅದು ಕೂಡ ಪಂಜಾಬ್ ಕಿಂಗ್ಸ್ ಪರ. ಕಳೆದ ಸೀಸನ್ನಲ್ಲಿ ಪಂಜಾಬ್ ಪರ 11 ಮ್ಯಾಚ್ಗಳನ್ನಾಡಿದ್ದ ಇಂಗ್ಲಿಸ್ ಒಂದು ಅರ್ಧಶತಕದೊಂದಿಗೆ 278 ರನ್ ಕಲೆಹಾಕಿದ್ದರು. ಈ ಬಾರಿ ಆಸ್ಟ್ರೇಲಿಯನ್ ದಾಂಡಿಗ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದಾರೆ.
Updated on: Dec 17, 2025 | 10:24 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜು ಪ್ರಕ್ರಿಯೆಗೆ ತೆರೆ ಬಿದ್ದಿದೆ. ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಬಿಡ್ ಆಗಿರುವುದು ಕ್ಯಾಮರೋನ್ ಗ್ರೀನ್. ಆಸ್ಟ್ರೇಲಿಯಾ ಆಲ್ರೌಂಡರ್ನನ್ನು ಕೆಕೆಆರ್ ಬರೋಬ್ಬರಿ 25.20 ಕೋಟಿ ರೂ.ಗೆ ಖರೀದಿಸಿದ್ದಾರೆ. ಇದಾಗ್ಯೂ ಜಾಕ್ ಪಾಟ್ ಹೊಡೆದಿರುವುದು ಜೋಶ್ ಇಂಗ್ಲಿಸ್ಗೆ (Josh Inglis).

ಏಕೆಂದರೆ ಜೋಶ್ ಇಂಗ್ಲಿಸ್ ಬರೋಬ್ಬರಿ 8.60 ಕೋಟಿ ರೂ.ಗೆ ಬಿಡ್ ಆಗಿದ್ದಾರೆ. ಆಸ್ಟ್ರೇಲಿಯನ್ ವಿಕೆಟ್ ಕೀಪರ್ ಬ್ಯಾಟರ್ನನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಬೃಹತ್ ಮೊತ್ತ ನೀಡಿ ಖರೀದಿಸಿದೆ. ಇದರಲ್ಲೇನು ವಿಶೇಷ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಈ ಕೆಳಗಿದೆ...

ಜೋಶ್ ಇಂಗ್ಲಿಸ್ ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು. ಇದಾಗ್ಯೂ ಅವರನ್ನು ಕಿಂಗ್ಸ್ ಪಡೆ ರಿಟೈನ್ ಮಾಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಜೋಶ್ ಇಂಗ್ಲಿಸ್ ಮುಂದಿನ ಸೀಸನ್ನಲ್ಲಿ ಕೇವಲ 4 ಮ್ಯಾಚ್ಗಳಿಗೆ ಮಾತ್ರ ಲಭ್ಯನಿರಲಿದ್ದೇನೆ ಎಂದು ತಿಳಿಸಿರುವುದು.

ಅಂದರೆ ಐಪಿಎಲ್ 2026 ರಲ್ಲಿ ಜೋಶ್ ಇಂಗ್ಲಿಸ್ ವೈಯುಕ್ತಿಕ ಕಾರಣಗಳಿಂದಾಗಿ ಕೇವಲ 4 ನಾಲ್ಕು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯಲಿದ್ದೇನೆ ಎಂದು ತಿಳಿಸಿದ್ದಾರೆ. ಮೊದಲೇ ನಾಲ್ಕು ಮ್ಯಾಚ್ಗಳಿಗೆ ಲಭ್ಯರಿರುವುದಾಗಿ ತಿಳಿಸಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು.

ಇದಾಗ್ಯೂ 4 ಪಂದ್ಯಗಳಿಗಾಗಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಜೋಶ್ ಇಂಗ್ಲಿಸ್ ಅವರನ್ನು ಬರೋಬ್ಬರಿ 8.60 ಕೋಟಿ ರೂ. ನೀಡಿ ಖರೀದಿಸಿದೆ. ಅದರಂತೆ ಒಂದು ಪಂದ್ಯಕ್ಕಾಗಿ ಇಂಗ್ಲಿಸ್ ಬರೋಬ್ಬರಿ 2.14 ಕೋಟಿ ರೂ. ಪಡೆಯಲಿದ್ದಾರೆ. ಈ ಮೂಲಕ ಮುಂದಿನ ಸೀಸನ್ ಐಪಿಎಲ್ನಲ್ಲಿ ಪಂದ್ಯವೊಂದಕ್ಕೆ ಗರಿಷ್ಠ ಮೊತ್ತ ಪಡೆಯುವ ಆಟಗಾರನಾಗಿ ಜೋಶ್ ಇಂಗ್ಲಿಸ್ ಕಾಣಿಸಿಕೊಳ್ಳಲಿದ್ದಾರೆ.




