- Kannada News Photo gallery Cricket photos RCB IPL 2026 Injury Scare: Salt, Patidar, Hazlewood, David Worries
IPL 2026: ನಾಯಕನೂ ಸೇರಿದಂತೆ ಆರ್ಸಿಬಿಯ ನಾಲ್ವರು ಸ್ಟಾರ್ ಆಟಗಾರರಿಗೆ ಇಂಜುರಿ
RCB IPL 2026 Injury Scare: 2026ರ ಐಪಿಎಲ್ ಸೀಸನ್ ಪ್ರಾರಂಭವಾಗುವ ಮುನ್ನವೇ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಫಿಲ್ ಸಾಲ್ಟ್, ರಜತ್ ಪಾಟಿದಾರ್, ಜೋಶ್ ಹ್ಯಾಜಲ್‌ವುಡ್ ಮತ್ತು ಟಿಮ್ ಡೇವಿಡ್ ಸೇರಿದಂತೆ ನಾಲ್ವರು ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಈ ಸ್ಟಾರ್ ಆಟಗಾರರ ಗಾಯದ ಸಮಸ್ಯೆ ಆರ್‌ಸಿಬಿ ತಂಡದ ಪ್ಲೇಯಿಂಗ್ XI ಬಗ್ಗೆ ಚಿಂತೆಗೀಡುಮಾಡಿದ್ದು, IPL 2026 ಅಭಿಯಾನಕ್ಕೆ ಕಠಿಣ ಸವಾಲು ಎದುರಾಗಿದೆ.
Updated on: Jan 04, 2026 | 6:02 PM

2026 ರ ಟಿ20 ವಿಶ್ವಕಪ್ ಮುಗಿದ ತಕ್ಷಣ, ಐಪಿಎಲ್ ಸೀಸನ್ ಆರಂಭವಾಗಲಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಎಲ್ಲಾ 10 ತಂಡಗಳು ಈಗಾಗಲೇ ತಮ್ಮ ಆಟಗಾರರನ್ನು ಆಯ್ಕೆ ಮಾಡಿವೆ. ಆದರೆ ಮುಂದಿನ ಆವೃತ್ತಿಯ ಐಪಿಎಲ್ ಪ್ರಾರಂಭವಾಗುವ ಮೊದಲೇ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡಕ್ಕೆ ಆಘಾತವೆಂಬಂತೆ ತಂಡದ ನಾಲ್ವರು ಸ್ಟಾರ್ ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ.

ಗಾಯದಿಂದ ಬಳಲುತ್ತಿರುವ ನಾಲ್ವರು ಆರ್‌ಸಿಬಿ ಆಟಗಾರರಲ್ಲಿ ಫಿಲ್ ಸಾಲ್ಟ್, ರಜತ್ ಪಾಟಿದಾರ್, ಜೋಶ್ ಹ್ಯಾಜಲ್‌ವುಡ್ ಮತ್ತು ಟಿಮ್ ಡೇವಿಡ್ ಸೇರಿದ್ದಾರೆ. ಈ ನಾಲ್ವರು ಆರ್‌ಸಿಬಿ ತಂಡದ ಪ್ರಮುಖ ಆಟಗಾರರಾಗಿದ್ದು, ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದ್ದರಿಂದ, ಈ ನಾಲ್ವರು ಇಂಜುರಿ ಆರ್‌ಸಿಬಿ ತಂಡವನ್ನು ಚಿಂತೆಗೀಡುಮಾಡಿದೆ.

ಫಿಲ್ ಸಾಲ್ಟ್ ಪ್ರಸ್ತುತ ILT20 ಲೀಗ್ನಲ್ಲಿ ಅಬುದಾಭಿ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಆದರೆ ಈ ಟಿ20 ಲೀಗ್ನಲ್ಲಿ ಬೆನ್ನಿನ ಗಾಯದಿಂದ ಬಳಲುತ್ತಿರುವ ಫಿಲ್ ಸಾಲ್ಟ್ ILT20 ಲೀಗ್ನ ಅರ್ಹತಾ ಪಂದ್ಯಗಳಿಂದ ಹೊರಗುಳಿದಿದ್ದರು.

ಹಾಗೆಯೇ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ನಾಯಕ ರಜತ್ ಪಾಟಿದಾರ್ ಕೂಡ ಗಾಯಕ್ಕೆ ತುತ್ತಾಗಿದ್ದಾರೆ. ಪ್ರಸ್ತುತ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿರುವ ಪಾಟಿದಾರ್ ಅವರ ಗಾಯದ ತೀವ್ರತೆ ಸದ್ಯಕ್ಕೆ ತಿಳಿದಿಲ್ಲ. ಆದರೆ ಪಾಟಿದರ್ ಗಾಯಗೊಂಡಿರುವುದು ಐಪಿಎಲ್ 2026 ರ ಆರಂಭಕ್ಕೂ ಮುಂಚಿತವಾಗಿ ಆರ್‌ಸಿಬಿ ತಂಡದ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಇತ್ತ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಬಿಗ್ ಬ್ಯಾಷ್ ಲೀಗ್ ಸಮಯದಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಪರ್ತ್ ಕ್ರೀಡಾಂಗಣದಲ್ಲಿ ನಡೆದ ಹೋಬಾರ್ಟ್ ಹರಿಕೇನ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ನಡುವಿನ ಪಂದ್ಯದ ಸಮಯದಲ್ಲಿ ಡೇವಿಡ್ ಗಾಯಗೊಂಡಿದ್ದರು. ಇದು ಆರ್‌ಸಿಬಿ ತಂಡಕ್ಕೆ ದೊಡ್ಡ ಆಘಾತ ಮಾತ್ರವಲ್ಲದೆ 2026 ರ ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾಕ್ಕೂ ಅಷ್ಟೇ ಆತಂಕಕಾರಿಯಾಗಿದೆ.

ಇವರುಗಳ ಜೊತೆಗೆ ಆರ್‌ಸಿಬಿ ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿರುವ ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಐಪಿಎಲ್ 2026 ಕ್ಕೂ ಮುನ್ನ ಗಾಯಗೊಂಡಿರುವುದು ಆರ್‌ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಹೇಜಲ್‌ವುಡ್ ಕಳೆದ ನವೆಂಬರ್ನಿಂದಲೂ ಗಾಯದಿಂದ ಬಳಲುತ್ತಿದ್ದು, ಇದರ ಪರಿಣಾಮವಾಗಿ ಅವರನ್ನು ಆಶಸ್ ಸರಣಿಯಿಂದಲೂ ಹೊರಗಿಡಲಾಗಿದೆ.
