Team India: ಭಾರತ ತಂಡದ ಭವಿಷ್ಯದ ಸೂಪರ್​ಸ್ಟಾರ್​ಗಳನ್ನು ಹೆಸರಿಸಿದ ಅನಿಲ್ ಕುಂಬ್ಳೆ

Team India: ಭಾರತ ತಂಡದಲ್ಲಿ ಹಲವು ಯುವ ಆಟಗಾರರಿದ್ದಾರೆ. ಇವರಲ್ಲಿ ಕೆಲ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗೆ ಅದ್ಭುತ ಪ್ರದರ್ಶನ ನೀಡಿ ಭರವಸೆ ಮೂಡಿಸಿರುವ ಇಬ್ಬರು ಆಟಗಾರರು ಭಾರತ ತಂಡದ ಭವಿಷ್ಯ ಸೂಪರ್ ಸ್ಟಾರ್ಸ್​ ಆಗಬಲ್ಲರು.

TV9 Web
| Updated By: ಝಾಹಿರ್ ಯೂಸುಫ್

Updated on: Feb 04, 2023 | 8:30 PM

ಟೀಮ್ ಇಂಡಿಯಾದ ಪ್ರಸ್ತುತ ಸೂಪರ್​ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ನಿವೃತ್ತಿ ಅಂಚಿನಲ್ಲಿದ್ದಾರೆ. ಇವರ ವಿದಾಯದ ಬಳಿಕ ಭಾರತ ತಂಡವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಬಲ್ಲ ಆಟಗಾರರು ಯಾರು ಎಂಬ ಪ್ರಶ್ನೆ ಆಗಾಗ್ಗೆ ಹುಟ್ಟಿಕೊಳ್ಳುತ್ತವೆ. ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ ಮಾಜಿ ಟೀಮ್ ಇಂಡಿಯಾ ಆಟಗಾರ ಅನಿಲ್ ಕುಂಬ್ಳೆ.

1 / 6
ಚಿಟ್​ಚಾಟ್ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅನಿಲ್ ಕುಂಬ್ಳೆ, ಪ್ರಸ್ತುತ ಭಾರತ ತಂಡದಲ್ಲಿ ಹಲವು ಯುವ ಆಟಗಾರರಿದ್ದಾರೆ. ಇವರಲ್ಲಿ ಕೆಲ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗೆ ಅದ್ಭುತ ಪ್ರದರ್ಶನ ನೀಡಿ ಭರವಸೆ ಮೂಡಿಸಿರುವ ಇಬ್ಬರು ಆಟಗಾರರು ಭಾರತ ತಂಡದ ಭವಿಷ್ಯ ಸೂಪರ್ ಸ್ಟಾರ್ಸ್​ ಆಗಬಲ್ಲರು. ಅವರೆಂದರೆ...

2 / 6
ಇಶಾನ್ ಕಿಶನ್: ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಭಾರತದ ಭವಿಷ್ಯದ ತಾರೆಯಾಗಿ ಹೊರಹೊಮ್ಮಬಲ್ಲರು. ಕಳೆದ ವರ್ಷಾಂತ್ಯದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಯುವ ದಾಂಡಿಗ ದ್ವಿಶತಕ ಸಿಡಿಸಿ ಮಿಂಚಿದ್ದರು. ಇಶಾನ್​ಗೆ ಸಿಕ್ಕಿರುವ ಅವಕಾಶಗಳಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಹೀಗಾಗಿ 24 ವರ್ಷದ ಇಶಾನ್ ಕಿಶನ್ ಭಾರತ ತಂಡದ ಮುಂಬರುವ ಸೂಪರ್ ಸ್ಟಾರ್ ಆಗಬಹುದು ಎಂದಿದ್ದಾರೆ ಅನಿಲ್ ಕುಂಬ್ಳೆ.

3 / 6
ಅರ್ಷದೀಪ್ ಸಿಂಗ್: ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಕೂಡ ಭವಿಷ್ಯದಲ್ಲಿ ಪ್ರಜ್ವಲಿಸಲಿದ್ದಾರೆ ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಅರ್ಷದೀಪ್ ಜೊತೆ ನಾನು ಪಂಜಾಬ್ ಕಿಂಗ್ಸ್​ನಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಆತ ನೀಡುತ್ತಿರುವ ಪ್ರದರ್ಶನ ಹಾಗೂ ಆತನ ಬೆಳವಣಿಗೆ ನೋಡಿದ್ರೆ ಖಂಡಿತವಾಗಿಯೂ ಅರ್ಷದೀಪ್ ಸಿಂಗ್ ಭವಿಷ್ಯದ ಸೂಪರ್​ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ ಎಂದೆನಿಸುತ್ತದೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

4 / 6
ಟೀಮ್ ಇಂಡಿಯಾ ಪರ ಒಟ್ಟು 38 ಇನಿಂಗ್ಸ್ ಆಡಿರುವ ಇಶಾನ್ ಕಿಶನ್ 7 ಅರ್ಧಶತಕ, 1 ಶತಕ ಹಾಗೂ 1 ದ್ವಿಶತಕದೊಂದಿಗೆ ಒಟ್ಟು 1002 ರನ್​ ಕಲೆಹಾಕಿದ್ದಾರೆ.

5 / 6
ಇನ್ನು 2022 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ಅರ್ಷದೀಪ್ ಸಿಂಗ್, ಇದುವರೆಗೆ 25 ಪಂದ್ಯಗಳಿಂದ ಒಟ್ಟು 39 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹೀಗಾಗಿಯೇ ಈ ಇಬ್ಬರು ಆಟಗಾರರು ಭಾರತ ತಂಡದ ಭವಿಷ್ಯ ಸೂಪರ್ ಸ್ಟಾರ್ಸ್​ ಆಗಬಲ್ಲರು ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

6 / 6
Follow us
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?

ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ

ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ