IND vs NAM: 6,6,6,6,6.. 24 ಎಸೆತಗಳಲ್ಲಿ 61 ಚಚ್ಚಿದ ಇಶಾನ್ ಕಿಶನ್

Updated on: Feb 12, 2026 | 8:15 PM

Ishan Kishan: ನಮೀಬಿಯಾ ವಿರುದ್ಧದ 2026 ಟಿ20 ವಿಶ್ವಕಪ್ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದರು. 254.17 ಸ್ಟ್ರೈಕ್ ರೇಟ್‌ನಲ್ಲಿ 61 ರನ್ (24 ಎಸೆತ) ಗಳಿಸಿದ ಕಿಶನ್, ಭಾರತದ ಪರ ಐದನೇ ವೇಗದ ಟಿ20 ವಿಶ್ವಕಪ್ ಅರ್ಧಶತಕದ ದಾಖಲೆ ಬರೆದರು. ಪವರ್ ಪ್ಲೇನಲ್ಲಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿ, ಯುವ ಆಟಗಾರ ತನ್ನ ಸಾಮರ್ಥ್ಯ ಪ್ರದರ್ಶಿಸಿದರು.

1 / 5
ನಮೀಬಿಯಾ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್​ನ 18ನೇ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್‌ ಮಾಡಿತು. ಅದರಂತೆ ತಂಡದ ಪರ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದರು. ಅಭಿಷೇಕ್ ಬದಲಿಯಾಗಿ ಬಂದಿದ್ದ ಸಂಜು 22 ರನ್ ಬಾರಿಸಿ ಔಟಾದರು.

2 / 5
ಸಂಜು ವಿಕೆಟ್ ಪತನದ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಹೊತ್ತ ಇಶಾನ್ ಕಿಶನ್ ಸಿಕ್ಸರ್​ಗಳ ಮಳೆ ಸುರಿಸಲಾರಂಭಿಸಿದರು. ಇದರ ಪರಿಣಾಮವಾಗಿ ಕಿಶನ್ ಕೇವಲ 20 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ಬರೋಬ್ಬರಿ 250 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಕಿಶನ್, ಪವರ್ ಪ್ಲೇನಲ್ಲಿಯೇ ತಂಡವನ್ನು 86 ರನ್​ಗಳಿಗೆ ಕೊಂಡೊಯ್ದರು.

3 / 5
ಅರ್ಧಶತಕದ ಬಳಿಕವೂ ಸ್ಫೋಟಕ ಬ್ಯಾಟಿಂಗ್‌ ಮುಂದುವರೆಸಿದ ಕಿಶನ್ ಸಿಕ್ಸರ್ ಸಿಡಿಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 24 ಎಸೆತಗಳನ್ನು ಎದುರಿಸಿದ ಕಿಶನ್ 61 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ ಅವರು 6 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಈ ಪಂದ್ಯದಲ್ಲಿ ಅವರ ಸ್ಟ್ರೈಕ್ ರೇಟ್ 254.17 ಆಗಿತ್ತು.

4 / 5
ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ದಾಖಲಿಸಿದ ಐದನೇ ವೇಗದ ಅರ್ಧಶತಕವಾಗಿದೆ. ಇದಕ್ಕೂ ಮೊದಲು, ಯುವರಾಜ್ ಸಿಂಗ್ 2007 ರಲ್ಲಿ 12 ಎಸೆತಗಳಲ್ಲಿ, ಕೆಎಲ್ ರಾಹುಲ್ 2021 ರಲ್ಲಿ 18 ಎಸೆತಗಳಲ್ಲಿ, ರೋಹಿತ್ ಶರ್ಮಾ 2024 ರಲ್ಲಿ 19 ಎಸೆತಗಳಲ್ಲಿ, ಯುವರಾಜ್ ಸಿಂಗ್ 2007 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಈಗ ಇಶಾನ್ ಕಿಶನ್ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.

5 / 5
ಅರ್ಧಶತಕ ಬಾರಿಸುವುದರ ಜೊತೆಗೆ ಇಶಾನ್ ಕಿಶನ್, ತಿಲಕ್ ವರ್ಮಾ ಜೊತೆ ಎರಡನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟವಾಡಿದರು. ಇದರಲ್ಲಿ ಇಶಾನ್ ಕಿಶನ್ ಒಬ್ಬಂಟಿಯಾಗಿ 59 ರನ್ ಕಲೆಹಾಕಿದರು. ಇದು ಅವರು ಎಷ್ಟು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು ಎಂಬುದನ್ನು ತೋರಿಸುತ್ತದೆ.