4 ವರ್ಷಗಳ ನಂತರ ಚೊಚ್ಚಲ ಏಕದಿನ ಶತಕ ಬಾರಿಸಿದ ಜಸ್ಟಿನ್ ಗ್ರೀವ್ಸ್

Updated on: Sep 27, 2026 | 5:12 PM

ಭಾರತ vs ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯದಲ್ಲಿ, ಜಸ್ಟಿನ್ ಗ್ರೀವ್ಸ್ (101 ರನ್) ತಮ್ಮ ಚೊಚ್ಚಲ ಏಕದಿನ ಶತಕ ಬಾರಿಸಿ ಮಿಂಚಿದ್ದಾರೆ. 26ನೇ ಪಂದ್ಯದಲ್ಲಿ ಬಂದ ಈ ಅಮೋಘ ಇನ್ನಿಂಗ್ಸ್, ಭಾರತದ ನೆಲದಲ್ಲಿ ಟೀಮ್ ಇಂಡಿಯಾ ವಿರುದ್ಧ ಶತಕ ಬಾರಿಸಿದ ಆರನೇ ವಿಂಡೀಸ್ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 32ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿ, ಗ್ರೀವ್ಸ್ ಕೆರಿಬಿಯನ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೇರಿಸಿದ್ದಾರೆ.

1 / 6
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್ ಇಂಡೀಸ್‌ ಪರ ಆರಂಭಿಕ ಆಟಗಾರ ಜಸ್ಟಿನ್ ಗ್ರೀವ್ಸ್ ತಮ್ಮ ಏಕದಿನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಇನ್ನಿಂಗ್ಸ್ ಆಡುವ ಮೂಲಕ ಶತಕ ಬಾರಿಸಿ ಮಿಂಚಿದ್ದಾರೆ(PC-PTI).

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್ ಇಂಡೀಸ್‌ ಪರ ಆರಂಭಿಕ ಆಟಗಾರ ಜಸ್ಟಿನ್ ಗ್ರೀವ್ಸ್ ತಮ್ಮ ಏಕದಿನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಇನ್ನಿಂಗ್ಸ್ ಆಡುವ ಮೂಲಕ ಶತಕ ಬಾರಿಸಿ ಮಿಂಚಿದ್ದಾರೆ(PC-PTI).

2 / 6

ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳ ವಿರುದ್ಧ ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸಿದ ಗ್ರೀವ್ಸ್, ಕೇವಲ 104 ಎಸೆತಗಳಲ್ಲಿ ತಮ್ಮ ಚೊಚ್ಚಲ ಏಕದಿನ ಶತಕವನ್ನು ಪೂರೈಸಿದರು(PC-PTI).

3 / 6

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪ್ರವೇಶಿಸಿದ ನಾಲ್ಕು ವರ್ಷಗಳ ನಂತರ ಮತ್ತು 26 ನೇ ಪಂದ್ಯದಲ್ಲಿ ಗ್ರೀವ್ಸ್ ತಮ್ಮ ಶತಕಗಳ ಬರವನ್ನು ನೀಗಿಸಿಕೊಂಡಿದ್ದಾರೆ. 2022 ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಗ್ರೀವ್ಸ್‌ ಇದಕ್ಕೂ ಮೊದಲು ಆಡಿದ 25 ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಬಾರಿಸಿದ್ದರು(PC-PTI).

4 / 6

ಈ ಇನ್ನಿಂಗ್ಸ್‌ನಲ್ಲಿ ಜಸ್ಟಿನ್ ಗ್ರೀವ್ಸ್ ಒಟ್ಟು 108 ಎಸೆತಗಳನ್ನು ಎದುರಿಸಿ 12 ಬೌಂಡರಿಗಳನ್ನು ಒಳಗೊಂಡಂತೆ 101 ರನ್ ಗಳಿಸಿ ಔಟಾದರು. ಈ ಶತಕದ ಮೂಲಕ ಗ್ರೀವ್ಸ್, ಭಾರತದ ನೆಲದಲ್ಲಿ ಆರಂಭಿಕರಾಗಿ ಶತಕ ಬಾರಿಸಿದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ(PC-PTI).

5 / 6

ಜಸ್ಟಿನ್ ಗ್ರೀವ್ಸ್‌ಗಿಂತ ಮೊದಲು, ವೆಸ್ಟ್ ಇಂಡೀಸ್‌ನ ಕೇವಲ ಐದು ಆರಂಭಿಕರು ಮಾತ್ರ ಭಾರತದಲ್ಲಿ ಟೀಂ ಇಂಡಿಯಾ ವಿರುದ್ಧ ಏಕದಿನ ಶತಕ ಬಾರಿಸಿದ್ದರು. ಅವರುಗಳಲ್ಲಿ ಗಾರ್ಡನ್ ಗ್ರೀನಿಡ್ಜ್, ಕ್ರಿಸ್ ಗೇಲ್, ಫಿಲ್ ಸಿಮ್ಮನ್ಸ್, ಶೈ ಹೋಪ್ ಮತ್ತು ಶಿವನಾರಾಯಣ್ ಚಂದ್ರಪಾಲ್ ಸೇರಿದ್ದಾರೆ(PC-PTI).

6 / 6

32 ನೇ ವಯಸ್ಸಿನಲ್ಲಿ ತಮ್ಮ ಮೊದಲ ಏಕದಿನ ಶತಕವನ್ನು ಬಾರಿಸುವ ಮೂಲಕ, ಗ್ರೀವ್ಸ್ ಕೆರಿಬಿಯನ್ ಕ್ರಿಕೆಟ್ ಇತಿಹಾಸದ ದಾಖಲೆ ಪುಸ್ತಕಗಳಿಗೆ ಹೊಸ ಅಧ್ಯಾಯವನ್ನು ಸೇರಿಸಿದ್ದಾರೆ. ತಮ್ಮ ಮೊದಲ ಏಕದಿನ ಶತಕ ಬಾರಿಸಿದ ವೆಸ್ಟ್​ ಇಂಡೀಸ್​ನ ಮೂರನೇ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ(PC-PTI).

Published On - 5:12 pm, Sun, 27 September 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us