IPL 2023: 1438 ಎಸೆತಗಳ ಮೂಲಕ ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದ ಕಗಿಸೊ ರಬಾಡ

IPL 2023 Kannada: ಐಪಿಎಲ್​ನಲ್ಲಿ ಕಡಿಮೆ ಎಸೆತಗಳಲ್ಲಿ 100 ವಿಕೆಟ್​ಗಳ ಸಾಧನೆ ಮಾಡಿದ ಟಾಪ್-4 ಬೌಲರ್​ಗಳ ಪಟ್ಟಿ ಈ ಕೆಳಗಿನಂತಿದೆ.

| Updated By: ಝಾಹಿರ್ ಯೂಸುಫ್

Updated on: Apr 13, 2023 | 11:29 PM

IPL 2023: ಮೊಹಾಲಿಯಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದದ ಮೂಲಕ ಪಂಜಾಬ್ ಕಿಂಗ್ಸ್ ವೇಗಿ ಕಗಿಸೊ ರಬಾಡ ಹೊಸ ದಾಖಲೆ ಬರೆದಿದ್ದಾರೆ. ಅದು ಅಂತಿಂಥ ದಾಖಲೆಯಲ್ಲ ಎಂಬುದೇ ಇಲ್ಲಿ ವಿಶೇಷ.

1 / 9
ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ವೃದ್ಧಿಮಾನ್ ಸಾಹ ವಿಕೆಟ್ ಪಡೆಯುವ ಮೂಲಕ ಕಗಿಸೊ ರಬಾಡ ಐಪಿಎಲ್​ನಲ್ಲಿ 100 ವಿಕೆಟ್​ಗಳ ಸಾಧನೆ ಮಾಡಿದರು. ಆದರೆ ಇದು ಇತರೆ ಎಲ್ಲಾ ಬೌಲರ್​ಗಿಂತ ವೇಗವಾಗಿ ಎಂಬುದು ಇಲ್ಲಿ ಗಮನಾರ್ಹ.

2 / 9
ಅಂದರೆ ಐಪಿಎಲ್​ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 100 ವಿಕೆಟ್ ಕಬಳಿಸಿದ ದಾಖಲೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ ಹೆಸರಿನಲ್ಲಿತ್ತು. ಮಲಿಂಗಾ 1622 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.

3 / 9
ಆದರೆ ಕಗಿಸೊ ರಬಾಡ ಕೇವಲ 1438 ಎಸೆತಗಳಲ್ಲಿ 100 ವಿಕೆಟ್ ಕಬಳಿಸುವ ಮೂಲಕ ಇದೀಗ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಕಡಿಮೆ ಎಸೆತಗಳಲ್ಲಿ ವೇಗವಾಗಿ ನೂರು ವಿಕೆಟ್ ಬೌಲರ್ ಎನಿಸಿಕೊಂಡಿದ್ದಾರೆ.

4 / 9
ಹಾಗೆಯೇ ಅತೀ ಕಡಿಮೆ ಪಂದ್ಯಗಳ ಮೂಲಕ 100 ವಿಕೆಟ್​ ಕಬಳಿಸಿದ ದಾಖಲೆಯನ್ನೂ ಕೂಡ ರಬಾಡ ತಮ್ಮದಾಗಿಸಿಕೊಂಡಿದ್ದಾರೆ. 64 ಪಂದ್ಯಗಳಲ್ಲಿ ನೂರು ವಿಕೆಟ್ ಉರುಳಿಸಿ, ಈ ಹಿಂದೆ 70 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದ ಮಲಿಂಗಾ ಅವರ ದಾಖಲೆಯನ್ನು ಮುರಿದಿದ್ದಾರೆ. ಇನ್ನು ಐಪಿಎಲ್​ನಲ್ಲಿ ಕಡಿಮೆ ಎಸೆತಗಳಲ್ಲಿ 100 ವಿಕೆಟ್​ಗಳ ಸಾಧನೆ ಮಾಡಿದ ಟಾಪ್-4 ಬೌಲರ್​ಗಳ ಪಟ್ಟಿ ಈ ಕೆಳಗಿನಂತಿದೆ.

5 / 9
1- ಕಗಿಸೊ ರಬಾಡ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪರ ಬೌಲಿಂಗ್ ಮಾಡಿರುವ ಕಗಿಸೊ ರಬಾಡ 1438 ಎಸೆತಗಳಲ್ಲಿ 100 ವಿಕೆಟ್​ಗಳನ್ನು ಪಡೆದಿದ್ದಾರೆ.

6 / 9
2- ಲಸಿತ್ ಮಾಲಿಂಗ: ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ 100 ವಿಕೆಟ್​ ಕಬಳಿಸಲು ಒಟ್ಟು 1622 ಎಸೆತಗಳನ್ನು ಎಸೆದಿದ್ದರು.

7 / 9
3- ಡ್ವೇನ್ ಬ್ರಾವೊ: ಮುಂಬೈ ಇಂಡಿಯನ್ಸ್, ಸಿಎಸ್​ಕೆ ಹಾಗೂ ಗುಜರಾತ್ ಲಯನ್ಸ್ ಪರ ಆಡಿರುವ ಡ್ವೇನ್ ಬ್ರಾವೊ 1619 ಎಸೆತಗಳಲ್ಲಿ 100 ವಿಕೆಟ್ ಕಬಳಿಸಿದ್ದರು.

8 / 9
4- ಹರ್ಷಲ್ ಪಟೇಲ್: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​ಸಿಬಿ ಪರ ಬೌಲಿಂಗ್ ಮಾಡಿರುವ ಹರ್ಷಲ್ ಪಟೇಲ್ 1647 ಎಸೆತಗಳ ಮೂಲಕ 100 ವಿಕೆಟ್​ಗಳನ್ನು ಕಬಳಿಸಿದ್ದಾರೆ.

9 / 9
Follow us