AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಢೀರ್ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ಆಟಗಾರ

Kane Richardson retirement: ಕೇನ್ ರಿಚರ್ಡ್ಸನ್ ಆಸ್ಟ್ರೇಲಿಯಾ ಪರ 25 ಏಕದಿನ ಹಾಗೂ 36 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಅದರಲ್ಲೂ 2021 ರ ಟಿ20 ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದರು. ಕಳೆದ ಎರಡು ವರ್ಷಗಳಿಂದ ಆಸ್ಟ್ರೇಲಿಯಾ ತಂಡದಿಂದ ಹೊರಗುಳಿದಿದ್ದ ಕೇನ್ ಇದೀಗ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Jan 27, 2026 | 2:32 PM

Share
ಆಸ್ಟ್ರೇಲಿಯಾ ತಂಡದ ವೇಗಿ ಕೇನ್ ರಿಚರ್ಡ್ಸನ್ (Kane Richardson) ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 2023 ರಲ್ಲಿ ಗಾಯದ ಕಾರಣ ಆಸೀಸ್ ತಂಡದಿಂದ ಹೊರಬಿದ್ದಿದ್ದ ರಿಚರ್ಡ್ಸನ್ ಇತ್ತೀಚೆಗಷ್ಟೇ ಸ್ಪರ್ಧಾತ್ಮಕ ಕ್ರಿಕೆಟ್​​ಗೆ ಮರಳಿದ್ದರು. ಇದೀಗ 34ನೇ ವಯಸ್ಸಿನಲ್ಲಿ ನಿವೃತ್ತಿ ನಿರ್ಧಾರ ತೆಗೆದುಕೊಂಡು ಅಚ್ಚರಿ ಮೂಡಿಸಿದ್ದಾರೆ.

1 / 5
ಆಸ್ಟ್ರೇಲಿಯಾ ಪರ 25 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕೇನ್ ರಿಚರ್ಡ್ಸನ್ 1312 ಎಸೆತಗಳನ್ನು ಎಸೆದಿದ್ದರು. ಈ ವೇಳೆ 1240 ರನ್ ನೀಡುವ ಮೂಲಕ ಒಟ್ಟು 39 ವಿಕೆಟ್ ಕಬಳಿಸಿದ್ದರು. ಆದರೆ ಕಳೆದ 5 ವರ್ಷಗಳಲ್ಲಿ ಅವರು ಆಸ್ಟ್ರೇಲಿಯಾ ಪರ ಒಂದೇ ಏಕದಿನ ಪಂದ್ಯವಾಡಿರಲಿಲ್ಲ ಎಂಬುದು ಉಲ್ಲೇಖಾರ್ಹ.

2 / 5
ಇದಾಗ್ಯೂ ಆಸ್ಟ್ರೇಲಿಯಾ ಟಿ20 ತಂಡದ ಭಾಗವಾಗಿ ಮುಂದುವರೆದಿದ್ದ ಕೇನ್ ರಿಚರ್ಡ್ಸನ್ 36 ಪಂದ್ಯಗಳಲ್ಲಿ ಒಟ್ಟು  756 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 1056 ರನ್ ನೀಡುವ ಮೂಲಕ ಅವರು ಪಡೆದಿರುವುದು ಬರೋಬ್ಬರಿ 45 ವಿಕೆಟ್​ಗಳನ್ನು.

3 / 5
ಇನ್ನು ಆಸ್ಟ್ರೇಲಿಯಾ ತಂಡದಲ್ಲಿರುವಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಎಂಟ್ರಿ ಕೊಟ್ಟಿದ್ದ ಕೇನ್ ರಿಚರ್ಡ್ಸನ್ ಒಟ್ಟು 15 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 335 ಎಸೆತಗಳಲ್ಲಿ 472 ರನ್ ನೀಡಿರುವ ಅವರು 19 ವಿಕೆಟ್​ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

4 / 5
ಅಂದಹಾಗೆ ಕೇನ್ ರಿಚರ್ಡ್ಸನ್ ಐಪಿಎಲ್​ನಲ್ಲಿ ಪುಣೆ ವಾರಿಯರ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. ಅದರಲ್ಲೂ 2021 ರಲ್ಲಿ  ಆರ್​ಸಿಬಿ ಪರ ಕಣಕ್ಕಿಳಿದ ಬಳಿಕ ಅವರು ಇಂಡಿಯನ್ ಪ್ರೀಮಿಯರ್ ಲೀಗ್​ನಿಂದಲೂ ಕಣ್ಮರೆಯಾಗಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಸುದ್ದಿಯಾಗಿದ್ದಾರೆ.

5 / 5