IND vs NZ, Semi Final: ಭಾರತ ಫೈನಲ್​ಗೇರಲು ಅರ್ಹವಾದ ತಂಡ: ಕೇನ್ ವಿಲಿಯಮ್ಸನ್ ಆಡಿದ ಮಾತಿಗೆ ಮನಸೋತ ಭಾರತೀಯರು

Kane Williamson post match presentation: ಐಸಿಸಿ ಏಕದಿನ ವಿಶ್ವಕಪ್ 2023ರ ಮೊದಲ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತ ಬಳಿಕ ಮಾತನಾಡಿದ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಫೈನಲ್​ಗೆ ಪ್ರವೇಶ ಪಡೆಯಲು ಭಾರತ ಕ್ರಿಕೆಟ್ ತಂಡ ಅರ್ಹವಾಗಿದೆ. ಇಂದು ಅವರು ತಮ್ಮ ಅತ್ಯುತ್ತಮ ಆಟವಾಡಿದರು ಎಂದು ಹೇಳಿದ್ದಾರೆ.

Vinay Bhat
|

Updated on: Nov 16, 2023 | 8:08 AM

ಐಸಿಸಿ ಏಕದಿನ ವಿಶ್ವಕಪ್ 2023ರ ಮೊದಲ ಸೆಮಿಫೈನಲ್​ನಲ್ಲಿ ಗೆದ್ದು ಟೀಮ್ ಇಂಡಿಯಾ ಫೈನಲ್​ಗೆ ಪ್ರವೇಶ ಪಡೆದಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಝಿಲೆಂಡ್ ತಂಡ ಕಠಿಣ ಪೈಪೋಟಿ ನೀಡಿದರೂ ದೊಡ್ಡ ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಈ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.

1 / 8
ಭಾರತ ನೀಡಿದ್ದ 398 ರನ್​ಗಳ ಗುರಿ ಬೆನ್ನಟ್ಟಿದ ಕಿವೀಸ್ ಪಡೆ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡರೂ, ಡೆರಿಯಲ್ ಮಿಚೆಲ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಗೆಲುವಿಗೆ ಕಠಿಣ ಹೋರಾಟ ನಡೆಸಿದರು. 181 ರನ್​ಗಳ ಜೊತೆಯಾಟ ಆಡಿದರು. ಆದರೆ, ಮೊಹಮ್ಮದ್ ಶಮಿ ಇವರ ರನ್ ಓಟಕ್ಕೆ ಬ್ರೇಕ್ ಹಾಕಿದರು.

2 / 8
ಪಂದ್ಯ ಮುಗಿದ ಬಳಿಕ ಮಾತನಾಡಿದ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೆಲ ಮಾತುಗಳನ್ನು ಆಡಿದ್ದಾರೆ. ''ಮೊದಲನೆಯದಾಗಿ, ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡಕ್ಕೆ ಅಭಿನಂದನೆಗಳು. ಅವರು ಟೂರ್ನಿಯುದ್ದಕ್ಕೂ ಉತ್ತಮ ಕ್ರಿಕೆಟ್ ಆಡಿದ್ದಾರೆ. ಫೈನಲ್​ಗೆ ಪ್ರವೇಶ ಪಡೆಯಲು ಅವರು ಅರ್ಹರಾಗಿದ್ದಾರೆ. ಇಂದು ತಮ್ಮ ಅತ್ಯುತ್ತಮ ಆಟವಾಡಿದರು,'' ಎಂದು ಹೇಳಿದ್ದಾರೆ.

3 / 8
ಅವರದ್ದು ಅಗ್ರ ತಂಡ, ಇಂದು ಅತ್ಯುತ್ತಮ ಕ್ರಿಕೆಟ್ ಆಡಿದರು. ಭಾರತ ತಂಡಕ್ಕೆ ಕ್ರೆಡಿಟ್ ಸಲ್ಲಬೇಕು. ಆದರೆ, ನಮ್ಮ ಆಟಗಾರರು ಫೈಟ್ ಕೊಟ್ಟಿದ್ದು ಹೆಮ್ಮೆಯಿದೆ. ನಾಕೌಟ್ ಹಂತಗಳಲ್ಲಿ ನಿರ್ಗಮಿಸಿರುವುದು ನಿರಾಸೆ ತಂದಿದೆ. ನಾವು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ ಎಂಬುದು ಕೇನ್ ವಿಲಿಯಮ್ಸನ್ ಮಾತು.

4 / 8
ಭಾರತವು ಉನ್ನತ ದರ್ಜೆಯ ತಂಡವಾಗಿದೆ. ಅವರಲ್ಲಿ ವಿಶ್ವ ದರ್ಜೆಯ ಬ್ಯಾಟರ್‌ಗಳಿದ್ದು, ಸುಂದರವಾಗಿ ಬ್ಯಾಟ್ ಮಾಡಿದ್ದಾರೆ. ಅವರು 400 ರನ್​ಗಳ ಹತ್ತಿರ ಬಂದರು. ಭಾರತಕ್ಕೆ ಕ್ರೆಡಿಟ್ ಸಲ್ಲಬೇಕು. ಅವರು ಅದ್ಭುತ ಆಟವಾಡಿದರು. ಸಾಕಷ್ಟು ಮಂದಿ ಅಭಿಮಾನಿಗಳು ಬಂದಿದ್ದಾರೆ. ಇಲ್ಲಿಗೆ ಬಂದಿರುವುದು ವಿಶೇಷವಾಗಿತ್ತು ಮತ್ತು ಭಾರತ ಆತಿಥ್ಯ ವಹಿಸಿರುವುದಕ್ಕೆ ಖುಷಿಯಾಗಿದೆ ಎಂಬುದು ಕೇನ್ ಮಾತು.

5 / 8
ಟೂರ್ನಿಯಲ್ಲಿ ರಚಿನ್ ರವೀಂದ್ರ ಉತ್ತಮ ಪ್ರದರ್ಶನ ತೋರಿದ್ದಾರೆ. ಇಂದು ಮಿಚೆಲ್ ಆಟ ವಿಶೇಷವಾಗಿತ್ತು. ಅವರು ನಿಜವಾಗಿಯೂ ಚೆನ್ನಾಗಿ ಆಡಿದ್ದಾರೆ. ಬೌಲರ್‌ಗಳು ಅಲ್ಲೊಂದು ಇಲ್ಲೊಂದು ತಪ್ಪು ಮಾಡಿದ್ದಾರೆ. ಆದರೆ, ನಾವು ಸಾಕಷ್ಟು ಹೋರಾಟ ನೀಡಿದೆವು. ಇದರ ಬಗ್ಗೆ ತುಂಬಾ ಹೆಮ್ಮೆಯಿದೆ - ಕೇನ್ ವಿಲಿಯಮ್ಸನ್.

6 / 8
ಕಳೆದ ಎರಡು ವಿಶ್ವಕಪ್‌ಗಳಲ್ಲಿ ಸೆಮಿಫೈನಲ್‌ನಲ್ಲಿ ಸೋತಿದ್ದ ಭಾರತ ತಂಡ ಇದೀಗ 12 ವರ್ಷಗಳ ಕಾಯುವಿಕೆಯ ನಂತರ ಈ ಅಡೆತಡೆಯನ್ನು ಮೆಟ್ಟಿನಿಂತು ಫೈನಲ್‌ಗೆ ಲಗ್ಗೆ ಇಟ್ಟಿದೆ. ನ್ಯೂಝಿಲೆಂಡ್ ತಂಡವನ್ನು 70 ರನ್‌ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ 2023 ರ ವಿಶ್ವಕಪ್‌ನ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.

7 / 8
ಐಸಿಸಿ ಏಕದಿನ ವಿಶ್ವಕಪ್ 2023ರ ಎರಡನೇ ಸೆಮಿಫೈನಲ್ ಪಂದ್ಯ ಇಂದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಇಲ್ಲಿ ಗೆದ್ದ ತಂಡ ನವೆಂಬರ್ 19 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.

8 / 8
Follow us
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ

Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ

4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ

ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​

ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ

ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್

ಕಾಮಗಾರಿಗಳಲ್ಲಿ ಮೀಸಲಾತಿಯ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ: ಖರ್ಗೆ

ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗಲೇ ಹೃದಯಾಘಾತದಿಂದ ಸಾವು!

ಮೈಸೂರಿನ ಎಲ್ಲ ಕಾರ್ಯಕ್ರಮಗಳಲ್ಲಿ ತಂದೆಯನ್ನು ಹಿಂಬಾಲಿಸುತ್ತಿರುವ ಯತೀಂದ್ರ

ಮುಳ್ಳಯ್ಯನಗಿರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರ ಹುಚ್ಚಾಟ