7 ಭರ್ಜರಿ ದಾಖಲೆಗಳನ್ನು ಬದಿಗಿಟ್ಟು ನಿವೃತ್ತಿ ಘೋಷಿಸಿದ ಕೇನ್ ವಿಲಿಯಮ್ಸನ್!

Updated on: Jun 13, 2026 | 8:57 AM

Kane Williamson: ಅಂಕಿ-ಅಂಶಗಳು ಮತ್ತು ಈ ಮೈಲಿಗಲ್ಲುಗಳು ಕೇನ್ ವಿಲಿಯಮ್ಸನ್ ಅವರ ಶ್ರೇಷ್ಠತೆಯನ್ನು ಅಳೆಯಲು ಸಾಧ್ಯವಿಲ್ಲ. 2021 ರ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಟ್ರೋಫಿ ಗೆದ್ದ ನಾಯಕನಾಗಿ, 2019 ರ ಏಕದಿನ ವಿಶ್ವಕಪ್‌ನಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿ ಪಡೆದ ಆಟಗಾರನಾಗಿ ಗುರುತಿಸಿಕೊಂಡಿರುವ ಕೇನ್ ವಿಲಿಯಮ್ಸನ್ ನಿವೃತ್ತಿ ಘೋಷಿಸುವ ಮುನ್ನ 7 ಭರ್ಜರಿ ದಾಖಲೆಗಳನ್ನು ಬದಿಗಿಟ್ಟಿದ್ದಾರೆ. ಹೀಗಾಗಿಯೇ ಅಂಕಿ-ಅಂಶಗಳು ಮತ್ತು ಈ ಮೈಲಿಗಲ್ಲುಗಳು ಕೇನ್ ವಿಲಿಯಮ್ಸನ್ ಅವರ ಶ್ರೇಷ್ಠತೆಯನ್ನು ಅಳೆಯಲು ಸಾಧ್ಯವಿಲ್ಲ!

1 / 9
ನ್ಯೂಝಿಲೆಂಡ್ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಮತ್ತು ಶ್ರೇಷ್ಠ ಬ್ಯಾಟರ್ ಕೇನ್ ವಿಲಿಯಮ್ಸನ್ ಜೂನ್ 12, 2026 ರಂದು ತಮ್ಮ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಈ ನಿವೃತ್ತಿಯೊಂದಿಗೆ ವಿಲಿಯಮ್ಸನ್ ಹಲವು ದಾಖಲೆಗಳನ್ನು ಅತ್ಯಂತ ಕಡಿಮೆ ಅಂತರದಲ್ಲಿ ಮಿಸ್ ಮಾಡಿಕೊಂಡಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ... (PC: GettyImages)

2 / 9
 20,000 ರನ್:  ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 20 ಸಾವಿರ ರನ್ ಗಳಿಸಿದ ವಿಶೇಷ ದಾಖಲೆ ಬರೆಯಲು ಕೇನ್ ವಿಲಿಯಮ್ಸನ್‌ಗೆ ಕೇವಲ 654 ರನ್‌ಗಳ ಅಗತ್ಯವಿತ್ತು. ಆದರೆ ಅವರು 19,346 ರನ್‌ಗಳಿಗೆ ತಮ್ಮ ಕೆರಿಯರ್ ಅಂತ್ಯಗೊಳಿಸಿದ್ದಾರೆ. (PC: GettyImages)

3 / 9
10,000 ರನ್: ನ್ಯೂಝಿಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿರುವ ಕೇನ್ ವಿಲಿಯಮ್ಸನ್, 10 ಸಾವಿರ ರನ್‌ಗಳ ಗಡಿ ತಲುಪಲು ಕೇವಲ 485 ರನ್‌ಗಳು ಮಾತ್ರ ಬೇಕಿದ್ದವು. ಇದಾಗ್ಯೂ ಅವರು 9,515 ರನ್​ಗಳೊಂದಿಗೆ ಟೆಸ್ಟ್ ಕೆರಿಯರ್ ಅಂತ್ಯಗೊಳಿಸಿದ್ದಾರೆ. (PC: GettyImages)

4 / 9
 20,000 ರನ್:  ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 20 ಸಾವಿರ ರನ್ ಗಳಿಸಿದ ವಿಶೇಷ ದಾಖಲೆ ಬರೆಯಲು ಕೇನ್ ವಿಲಿಯಮ್ಸನ್‌ಗೆ ಕೇವಲ 654 ರನ್‌ಗಳ ಅಗತ್ಯವಿತ್ತು. ಆದರೆ ಅವರು 19,346 ರನ್‌ಗಳಿಗೆ ತಮ್ಮ ಕೆರಿಯರ್ ಅಂತ್ಯಗೊಳಿಸಿದ್ದಾರೆ. (PC: GettyImages)

 20,000 ರನ್:  ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 20 ಸಾವಿರ ರನ್ ಗಳಿಸಿದ ವಿಶೇಷ ದಾಖಲೆ ಬರೆಯಲು ಕೇನ್ ವಿಲಿಯಮ್ಸನ್‌ಗೆ ಕೇವಲ 654 ರನ್‌ಗಳ ಅಗತ್ಯವಿತ್ತು. ಆದರೆ ಅವರು 19,346 ರನ್‌ಗಳಿಗೆ ತಮ್ಮ ಕೆರಿಯರ್ ಅಂತ್ಯಗೊಳಿಸಿದ್ದಾರೆ. (PC: GettyImages)

5 / 9
 50 ಶತಕಗಳು: ತಮ್ಮ ಅದ್ಭುತ ವೃತ್ತಿಜೀವನದಲ್ಲಿ ಒಟ್ಟು 48 ಶತಕಗಳನ್ನು (33 ಟೆಸ್ಟ್, 15 ಏಕದಿನ) ಬಾರಿಸಿರುವ ಕೇನ್, ಕೇವಲ 2 ಶತಕಗಳ ಅಂತರದಿಂದ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಶತಕಗಳ ಅರ್ಧಶತಕ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಿಂದ ಹೊರಗುಳಿದಿದ್ದಾರೆ. (PC: GettyImages)

6 / 9
400 ಪಂದ್ಯಗಳು: ಲಾರ್ಡ್ಸ್ ಮೈದಾನದಲ್ಲಿ ತಮ್ಮ 378ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ಕೇನ್ ವಿಲಿಯಮ್ಸನ್, 400 ಇಂಟರ್​ನ್ಯಾಷನಲ್​ ಮ್ಯಾಚ್​ಗಳ ದಾಖಲೆ ಬರೆಯಲು ಕೇವಲ 22 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರೆ ಸಾಕಿತ್ತು. ಇದಾಗ್ಯೂ ಈ ದಾಖಲೆಯತ್ತ ಮುಖ ಮಾಡಿಲ್ಲ. (PC: GettyImages)

7 / 9
50 ಹಾಫ್ ಸೆಂಚರಿ: ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 47 ಅರ್ಧಶತಕಗಳನ್ನು ಬಾರಿಸಿರುವ ಕೇನ್ ವಿಲಿಯಮ್ಸನ್ 50 ಅರ್ಧಶತಕಗಳ ದಾಖಲೆ ಬರೆಯಲು ಕೇವಲ 3 ಹಾಫ್ ಸೆಂಚುರಿಗಳ ಅವಶ್ಯಕತೆಯಿತ್ತು. ಈ ದಾಖಲೆಯನ್ನು ಕೂಡ ಅರ್ಧದಲ್ಲೇ ಬಿಟ್ಟು ನಿವೃತ್ತಿ ಘೋಷಿಸಿದ್ದಾರೆ. (PC: GettyImages)

8 / 9
100 ಕ್ಯಾಚ್​ಗಳು: ಸ್ಲಿಪ್ ಫೀಲ್ಡಿಂಗ್‌ನಲ್ಲಿ ಅತ್ಯಂತ ಸುರಕ್ಷಿತ  ಫೀಲ್ಡರ್​ ಎನಿಸಿಕೊಂಡಿದ್ದ ಕೇನ್ ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್​​ನಲ್ಲಿ 100 ಕ್ಯಾಚ್​ಗಳನ್ನು ಹಿಡಿದ ದಾಖಲೆ ಬರೆಯಲು ಕೇವಲ 4 ಕ್ಯಾಚ್​ಗಳ ಅವಶ್ಯಕತೆಯಿತ್ತು. ಆದರೆ 96 ಕ್ಯಾಚ್​ಗಳೊಂದಿಗೆ ಟೆಸ್ಟ್ ಕೆರಿಯರ್ ಅಂತ್ಯಗೊಳಿಸಿದ್ದಾರೆ. (PC: GettyImages)

9 / 9
100 ಮ್ಯಾಚ್​ಗಳು: ಟಿ20 ಅಂತಾರಾಷ್ಟ್ರೀ ಕ್ರಿಕೆಟ್​ನಲ್ಲಿ 93 ಪಂದ್ಯಗಳನ್ನಾಡಿರುವ ಕೇನ್ ವಿಲಿಯಮ್ಸನ್ ಶತಕಗಳ ಸಾಧನೆ ಮಾಡಲು ಕೇವಲ 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರೆ ಸಾಕಿತ್ತು. ಇದಾಗ್ಯೂ ಈ ದಾಖಲೆಯನ್ನು ಬದಿಗಿಟ್ಟು ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕೆರಿಯರ್ ಅಂತ್ಯಗೊಳಿಸಿದ್ದಾರೆ. (PC: GettyImages)

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us