ನೋವು, ಬೇಸರ, ಹತಾಶೆ; ಹೈದರಾಬಾದ್ ಸೋಲು ಕಂಡಾಗ ಕಾವ್ಯಾ ಮಾರನ್ ಎಕ್ಸ್​ಪ್ರೆಷನ್ ನೋಡಿ

Updated on: Mar 28, 2025 | 10:43 AM

ಕಾವ್ಯಾ ಮಾರನ್ ಅವರು ‘ಸನ್ ರೈಸರ್ಸ್ ಹೈದರಾಬಾದ್’ ತಂಡದ ಮಾಲಕಿ. ನಿನ್ನೆ (ಮಾರ್ಚ್ 27) ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಲಖನೋ ತಂಡ ಸೋಲು ಉಣಿಸಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ. ಕಾವ್ಯಾ ಮಾರನ್ ಎಕ್ಸ್ಪ್ರೆಷನ್ ಗಮನ ಸೆಳೆಯಿತು.

1 / 5
ಐಪಿಎಲ್ ಕಾವು ಜೋರಾಗಿದೆ. ಹೈ ಸ್ಕೋರ್ ಪಂದ್ಯಗಳಿಗೆ ಈ ಬಾರಿಯ ಐಪಿಎಲ್ ಸಾಕ್ಷಿ ಆಗುತ್ತಿದೆ. ಮಾರ್ಚ್ 27ರ ಎಸ್​ಆರ್​ಎಚ್ vs ಎಲ್​ಎಸ್​ಜಿ ಪಂದ್ಯದಲ್ಲಿ ಹೈದರಾಬಾದ್ ತಂಡದ ಸೋತಿದ್ದು, ತಂಡಕ್ಕೆ ಹಿನ್ನಡೆ ಆಗಿದೆ. ಕಾವ್ಯಾ ಮಾರನ್ ಬೇಸರ ಮಾಡಿಕೊಂಡಿದ್ದಾರೆ.

ಐಪಿಎಲ್ ಕಾವು ಜೋರಾಗಿದೆ. ಹೈ ಸ್ಕೋರ್ ಪಂದ್ಯಗಳಿಗೆ ಈ ಬಾರಿಯ ಐಪಿಎಲ್ ಸಾಕ್ಷಿ ಆಗುತ್ತಿದೆ. ಮಾರ್ಚ್ 27ರ ಎಸ್​ಆರ್​ಎಚ್ vs ಎಲ್​ಎಸ್​ಜಿ ಪಂದ್ಯದಲ್ಲಿ ಹೈದರಾಬಾದ್ ತಂಡದ ಸೋತಿದ್ದು, ತಂಡಕ್ಕೆ ಹಿನ್ನಡೆ ಆಗಿದೆ. ಕಾವ್ಯಾ ಮಾರನ್ ಬೇಸರ ಮಾಡಿಕೊಂಡಿದ್ದಾರೆ.

2 / 5

ಪಂದ್ಯ ಗೆಲ್ಲುತ್ತಿದೆ, ಎಸ್​ಆರ್​ಎಚ್ ತಂಡ ಚೆನ್ನಾಗಿ ಆಡುತ್ತಿದೆ ಎಂದಾಗ ಕಾವ್ಯಾ ಮಾರನ್ ಅವರು ಖುಷಿಯಿಂದ ಇರುತ್ತಾರೆ. ಅವರ ಮುಖದಲ್ಲಿ ನಗು ಚೆಲ್ಲುತ್ತಾ ಇರುತ್ತದೆ. ಆದರೆ, ಸೋಲುವಾಗ ಅವರ ಎಕ್ಸ್​ಪ್ರೆಷನ್ ಬೇರೆಯೇ ಆಗಿರುತ್ತದೆ.

3 / 5

ಮಾರ್ಚ್​ 27ರ ಪಂದ್ಯದಲ್ಲಿ ಹೈದರಾಬಾದ್ ತಂಡದ ಘಟಾನುಘಟಿ ಆಟಗಾರರು ಔಟ್ಆಗುತ್ತಾ ಬಂದರು. 300 ರನ್ ಟಾರ್ಗೆಟ್ ರೀಚ್ ಆಗಬೇಕು ಎಂದು ಕನಸು ಕಂಡಿದ್ದ ಆಟಗಾರರು ಕೇವಲ 190 ರನ್ ಗಳಿಸಲಷ್ಟೇ ಶಕ್ಯರಾದರು. ಇದು ಕಾವ್ಯಾ ಬೇಸರಕ್ಕೆ ಕಾರಣ ಆಗಿದೆ.

4 / 5

ಕಾವ್ಯಾ ಮಾರನ್ ಅವರ ವಿವಿಧ ಎಕ್ಸ್​ಪ್ರೆಷನ್ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ (6), ಇಶಾನ್ ಕಿಶನ್ (0) ನಿತೀಶ್ ರೆಡ್ಡಿ (32) ಔಟ್ ಆಗುವಾಗ ಕಾವ್ಯಾ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು.

5 / 5

ಇನ್ನು ಲಖನೋ ತಂಡದ ಪೂರನ್ ಅವರು ಹಿಗ್ಗಾ ಮುಗ್ಗಾ ಬಾರಿಸುವಾಗಲೂ ಕಾವ್ಯಾ ಅವರ ಮುಖದಲ್ಲಿ ಇದ್ದ ನಗು ಮಾಯ ಆಗಿತ್ತು. ಅವರ ಮುಖದ ಬೇಸರ ನೋಡಿಯೇ ಅನೇಕರಿಗೆ ಬೇಸರ ಆಗಿದೆ!

Published On - 10:42 am, Fri, 28 March 25

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us