DC vs KKR: 250, 500, 1000..! ಐಪಿಎಲ್‌ನಲ್ಲಿ ರಾಹುಲ್ ಐತಿಹಾಸಿಕ ಸಾಧನೆ

Updated on: May 08, 2026 | 8:51 PM

KL Rahul IPL Records: ಐಪಿಎಲ್ 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ ಕೆಎಲ್ ರಾಹುಲ್ ಹಲವು ವಿಶೇಷ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದು ರಾಹುಲ್ ಅವರ 250ನೇ ಟಿ20 ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಅವರು ಐಪಿಎಲ್‌ನಲ್ಲಿ 500 ಬೌಂಡರಿಗಳನ್ನು ಪೂರ್ಣಗೊಳಿಸಿದರು ಮತ್ತು ಡೆಲ್ಲಿ ಪರ ವೇಗವಾಗಿ 1000 ರನ್ ಗಳಿಸಿದರು. ಮೂರು ವಿಭಿನ್ನ ಐಪಿಎಲ್ ತಂಡಗಳಿಗೆ 1000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾದರು.

1 / 5
ಐಪಿಎಲ್ 2026 ರ 51 ನೇ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡದ ಪರ ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್‌ ಉತ್ತಮ ಆರಂಭ ಪಡೆದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ಎಡವಿದರು (PC- DC X).

2 / 5
ಆದಾಗ್ಯೂ ಈ ಪಂದ್ಯ ಕೆಎಲ್ ರಾಹುಲ್​ಗೆ ಬಹಳ ವಿಶೇಷವಾಗಿತ್ತು. ಏಕೆಂದರೆ ರಾಹುಲ್​ಗೆ ಇದು 250 ನೇ ಟಿ20 ಪಂದ್ಯವಾಗಿತ್ತು. ಈ ಪಂದ್ಯದಲ್ಲಿ 14 ಎಸೆತಗಳನ್ನು ಎದುರಿಸಿದ ರಾಹುಲ್ 23 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್​ನಲ್ಲಿ ನಾಲ್ಕು ಬೌಂಡರಿಗಳು ಸೇರಿದ್ದವು. ಈ 4 ಬೌಂಡರಿಗಳ ಮೂಲಕ ರಾಹುಲ್ ಐಪಿಎಲ್‌ನಲ್ಲಿ ವಿಶೇಷ ಮೈಲಿಗಲ್ಲನ್ನು ದಾಟಿದರು (PC- DC X).

3 / 5
ಈ ನಾಲ್ಕು ಬೌಂಡರಿಗಳೊಂದಿಗೆ ರಾಹುಲ್ ಐಪಿಎಲ್‌ನಲ್ಲಿ 500 ಬೌಂಡರಿಗಳನ್ನು ಪೂರ್ಣಗೊಳಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ 7 ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಐಪಿಎಲ್‌ನಲ್ಲಿ ಇದುವರೆಗೆ 156 ಪಂದ್ಯಗಳನ್ನಾಡಿರುವ ರಾಹುಲ್ 232 ಸಿಕ್ಸರ್‌ಗಳನ್ನು ಸಹ ಹೊಡೆದಿದ್ದಾರೆ (PC- DC X).

4 / 5
ಹಾಗೆಯೇ ಈ ಪಂದ್ಯದಲ್ಲಿ 23 ರನ್​ಗಳ ಇನ್ನಿಂಗ್ಸ್ ಆಡಿದ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ 1000 ರನ್‌ಗಳನ್ನು ಸಹ ಪೂರ್ಣಗೊಳಿಸಿದರು. ಇದು ಡೆಲ್ಲಿ ಪರ ವೇಗವಾಗಿ 1000 ರನ್‌ಗಳನ್ನು ಪೂರೈಸಿದ ದಾಖಲೆಯಾಗಿದೆ (PC- DC X).

5 / 5
ಕೆಎಲ್ ರಾಹುಲ್ ಈ ಹಿಂದೆ ಪಂಜಾಬ್ ಮತ್ತು ಲಕ್ನೋ ತಂಡಗಳ ಪರವೂ 1000 ರನ್ ಬಾರಿಸಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ಮೂರು ವಿಭಿನ್ನ ತಂಡಗಳ ಪರ 1000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ (PC- DC X).

Published On - 8:48 pm, Fri, 8 May 26

Follow Us