AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3211 ದಿನಗಳನ್ನು ತೆಗೆದುಕೊಂಡು ವಿಶ್ವ ದಾಖಲೆ ಬರೆದ ಕೆಎಲ್ ರಾಹುಲ್

India vs West Indies: ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 162 ರನ್​ಗಳಿಗೆ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (100), ಧ್ರುವ್ ಜುರೆಲ್ (125) ಹಾಗೂ ರವೀಂದ್ರ ಜಡೇಜಾ (104) ಶತಕ ಸಿಡಿಸಿದ್ದಾರೆ. ಈ ಶತಕಗಳ ನೆರವಿನೊಂದಿಗೆ ಭಾರತ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್ ಕಲೆಹಾಕಿದೆ.

ಝಾಹಿರ್ ಯೂಸುಫ್
|

Updated on: Oct 04, 2025 | 8:19 AM

Share
ಬರೋಬ್ಬರಿ 3211 ದಿನಗಳ ದಿನಗಳ ಬಳಿಕ ಕೆಎಲ್ ರಾಹುಲ್ (KL Rahul) ಬ್ಯಾಟ್​ನಿಂದ ತವರಿನಲ್ಲಿ ಶತಕ ಮೂಡಿಬಂದಿದೆ. ಈ ಶತಕದೊಂದಿಗೆ ಕನ್ನಡಿಗ ವಿಶೇಷ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದೆ. ಅದು ಕೂಡ 3211 ದಿನಗಳ ಕಾಯುವಿಕೆಯೊಂದಿಗೆ ಎಂಬುದೇ ವಿಶೇಷ.

1 / 6
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೆಲ್ ರಾಹುಲ್ 197 ಎಸೆತಗಳಲ್ಲಿ 12 ಫೋರ್​ಗಳೊಂದಿಗೆ 100 ರನ್ ಬಾರಿಸಿದ್ದಾರೆ.

2 / 6
ಈ ಮೂಲಕ ಕೆಎಲ್ ರಾಹುಲ್ 9 ವರ್ಷಗಳ ಟೆಸ್ಟ್ ಶತಕದ ಬರ ನೀಗಿಸಿದ್ದಾರೆ. ಅಂದರೆ ತವರಿನಲ್ಲಿ ಕೆಎಲ್​ಆರ್​​ ಕೊನೆಯ ಟೆಸ್ಟ್ ಶತಕ ಸಿಡಿಸಿದ್ದು 2016 ರಲ್ಲಿ. ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 199 ರನ್ ಬಾರಿಸಿದ್ದರು. ಇದಾದ ಬಳಿಕ ಭಾರತದ ಪಿಚ್​ನಲ್ಲಿ ರಾಹುಲ್ ಬ್ಯಾಟ್​ನಿಂದ ಒಂದೇ ಒಂದು ಶತಕ ಮೂಡಿ ಬಂದಿರಲಿಲ್ಲ.

ಈ ಮೂಲಕ ಕೆಎಲ್ ರಾಹುಲ್ 9 ವರ್ಷಗಳ ಟೆಸ್ಟ್ ಶತಕದ ಬರ ನೀಗಿಸಿದ್ದಾರೆ. ಅಂದರೆ ತವರಿನಲ್ಲಿ ಕೆಎಲ್​ಆರ್​​ ಕೊನೆಯ ಟೆಸ್ಟ್ ಶತಕ ಸಿಡಿಸಿದ್ದು 2016 ರಲ್ಲಿ. ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 199 ರನ್ ಬಾರಿಸಿದ್ದರು. ಇದಾದ ಬಳಿಕ ಭಾರತದ ಪಿಚ್​ನಲ್ಲಿ ರಾಹುಲ್ ಬ್ಯಾಟ್​ನಿಂದ ಒಂದೇ ಒಂದು ಶತಕ ಮೂಡಿಬಂದಿರಲಿಲ್ಲ.

3 / 6
ಇದೀಗ ಬರೋಬ್ಬರಿ 3211 ದಿನಗಳ ಕಾಯುವಿಕೆ ಅಂತ್ಯಗೊಳಿಸಿ ಕೆಎಲ್ ರಾಹುಲ್ ವಿಶೇಷ ದಾಖಲೆ ಬರೆದಿದ್ದಾರೆ. ಅಂದರೆ ಟೆಸ್ಟ್ ಇತಿಹಾಸದಲ್ಲಿ ಬ್ಯಾಟ್ಸ್​ಮನ್​ವೊಬ್ಬರು ತವರಿನಲ್ಲಿ ಎರಡು ಶತಕಗಳನ್ನು ಬಾರಿಸಲು ತೆಗೆದುಕೊಂಡ ದೀರ್ಘಾವಧಿ ಸಮಯ ಇದಾಗಿದೆ.

4 / 6
ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ರವಿಚಂದ್ರನ್ ಅಶ್ವಿನ್ ಅವರ ಹೆಸರಿನಲ್ಲಿತ್ತು. ಅಶ್ವಿನ್ ತವರಿನಲ್ಲಿ ಬಾರಿಸಿದ ಎರಡು ಶತಕಗಳ ನಡುವೆ 2655 ದಿನಗಳ ಅಂತರವಿತ್ತು. ಈ ಮೂಲಕ ಹೋಮ್ ಮ್ಯಾಚ್​ನಲ್ಲಿ ಎರಡು ಶತಕ ಬಾರಿಸಲು ದೀರ್ಘಾವಧಿಯ ಸಮಯ ತೆಗೆದುಕೊಂಡ ಬ್ಯಾಟರ್ ಎನಿಸಿಕೊಂಡಿದ್ದರು.

5 / 6
ಇದೀಗ 3211 ದಿನಗಳ ಅಂತರದೊಂದಿಗೆ ಈ ದಾಖಲೆಯನ್ನು ಕೆಲ್ ರಾಹುಲ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ 9 ವರ್ಷಗಳ ಬಳಿಕ ತವರಿನಲ್ಲಿನ ಶತಕದ ಬರ ನೀಗಿಸಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಅತ್ಯಧಿಕ ಟೆಸ್ಟ್ ಶತಕ ಬಾರಿಸಿದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

6 / 6