- Kannada News Photo gallery Cricket photos Marcus Stoinis has been appointed new captain of Melbourne Stars
BBL 2024: ಮಾರ್ಕಸ್ ಸ್ಟೊಯಿನಿಸ್ಗೆ ನಾಯಕತ್ವ
Big Bash League 2024-25: ಬಿಗ್ ಬ್ಯಾಷ್ ಟಿ20 ಲೀಗ್ ಡಿಸೆಂಬರ್ 15 ರಿಂದ ಶುರುವಾಗಲಿದೆ. ಫೈನಲ್ ಪಂದ್ಯವು ಮುಂದಿನ ವರ್ಷ ಜನವರಿ 27 ರಂದು ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಅದರಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಆಸ್ಟ್ರೇಲಿಯಾದ ಆಲ್ರೌಂಡರ್ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಮುನ್ನಡೆಸಲಿದ್ದಾರೆ.
Updated on:Dec 11, 2024 | 10:57 AM

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಲೀಗ್ ಸೀಸನ್-14 ರಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ನಾಯಕ ಮಾರ್ಕಸ್ ಸ್ಟೊಯಿನಿಸ್ ಮುನ್ನಡೆಸಲಿದ್ದಾರೆ. ಈ ಟೂರ್ನಿಯು ಡಿಸೆಂಬರ್ 15 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಪರ್ತ್ ಸ್ಕಾಚರ್ಸ್ ಹಾಗೂ ಮೆಲ್ಬೋರ್ನ್ ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಮೂಲಕ ಮಾರ್ಕಸ್ ಸ್ಟೊಯಿನಿಸ್ ಕ್ಯಾಪ್ಟನ್ ಆಗಿ ಪಾದಾರ್ಪಣೆ ಮಾಡಲಿದ್ದಾರೆ.

ಇದಕ್ಕೂ ಮುನ್ನ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕನಾಗಿ ಗ್ಲೆನ್ ಮ್ಯಾಕ್ಸ್ವೆಲ್ ಕಾಣಿಸಿಕೊಂಡಿದ್ದರು. 2018 ರಿಂದ ತಂಡದ ಚುಕ್ಕಾಣಿ ಹಿಡಿದಿದ್ದ ಮ್ಯಾಕ್ಸಿ ಅವರನ್ನು ಈ ಬಾರಿ ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ಅವರ ಬದಲಿಗೆ ಸ್ಟೊಯಿನಿಸ್ ಅವರನ್ನು ಕ್ಯಾಪ್ಟನ್ ಎಂದು ಘೋಷಿಸಲಾಗಿದೆ.

ಅದರಂತೆ 15 ಸದಸ್ಯರ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕರಾಗಿ ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಕಾಣಿಸಿಕೊಳ್ಳಲಿದ್ದಾರೆ. ಒಂದು ವೇಳೆ ಸ್ಟೊಯಿನಿಸ್ ನಾಯಕತ್ವದಲ್ಲಿ ಮೆಲ್ಬೋರ್ನ್ ಪಡೆ ಮಿಂಚಿದರೆ, ಐಪಿಎಲ್ನಲ್ಲಿ ಉಪನಾಯಕನ ಸ್ಥಾನ ಒಲಿಯುವುದು ಖಚಿತ.

ಏಕೆಂದರೆ ಮಾರ್ಕಸ್ ಸ್ಟೊಯಿನಿಸ್ ಈ ಬಾರಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ತಂಡದ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳುವುದು ಖಚಿತ. ಇದಾಗ್ಯೂ ಉಪನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಇದೀಗ ಅತ್ತ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿರುವ ಮಾಕರ್ಸ್ ಸ್ಟೊಯಿನಿಸ್, ಅದ್ಭುತ ಪ್ರದರ್ಶನದೊಂದಿಗೆ ತಂಡವನ್ನು ಮುನ್ನಡೆಸಿದರೆ ಪಂಜಾಬ್ ಕಿಂಗ್ಸ್ ತಂಡದ ಉಪನಾಯಕನಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಬಹುದು.

ಮೆಲ್ಬೋರ್ನ್ ಸ್ಟಾರ್ಸ್ ತಂಡ: ಮಾರ್ಕಸ್ ಸ್ಟೊಯಿನಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ಸ್ಕಾಟ್ ಬೋಲ್ಯಾಂಡ್, ಹಿಲ್ಟನ್ ಕಾರ್ಟ್‌ರೈಟ್, ಬ್ರಾಡಿ ಕೌಚ್, ಟಾಮ್ ಕರನ್, ಬೆನ್ ಡಕೆಟ್, ಸ್ಯಾಮ್ ಹಾರ್ಪರ್, ಕ್ಯಾಂಪ್‌ಬೆಲ್ ಕೆಲ್ಲವೇ, ಹ್ಯಾಮಿಶ್ ಮೆಕೆಂಜಿ, ಉಸಾಮಾ ಮಿರ್, ಜೋಯಲ್ ಪ್ಯಾರಿಸ್, ಟಾಮ್ ರೋಜರ್ಸ್, ಮಾರ್ಕ್ ಸ್ಟೆಕ್ಟೀ, ಬ್ಯೂ ವೆಬ್‌ಸ್ಟರ್.
Published On - 10:56 am, Wed, 11 December 24
























