
ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ನಡುವೆಯೇ ಇಂಗ್ಲೆಂಡ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಮಾರಕ ವೇಗಿ ಮಾರ್ಕ್ ವುಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 36 ವರ್ಷದ ಮಾರ್ಕ್ ವುಡ್ ಪ್ರಥಮ ದರ್ಜೆ, ಲಿಸ್ಟ್ ಎ ಮತ್ತು ಟಿ20 ಕ್ರಿಕೆಟ್‌ನಲ್ಲಿ ಒಟ್ಟು 466 ವಿಕೆಟ್‌ಗಳನ್ನು ಕಬಳಿಸಿದ್ದರು. ಹಾಗೆಯೇ ಇಂಗ್ಲೆಂಡ್‌ನ ಎರಡು ವಿಶ್ವಕಪ್ ವಿಜೇತ ತಂಡಗಳ ಸದಸ್ಯರೂ ಆಗಿದ್ದರು(PC-PTI).
ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಮನದಾಳ ತೆರೆದಿಟ್ಟಿರುವ ಮಾರ್ಕ್ ವುಡ್, ‘ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಕಳೆದ ವರ್ಷದ ಸಂದರ್ಭಗಳನ್ನು ಗಮನಿಸಿದರೆ ಈ ನಿರ್ಧಾರವು ಬಹುಶಃ ದೊಡ್ಡ ಆಶ್ಚರ್ಯವನ್ನುಂಟು ಮಾಡುವುದಿಲ್ಲ. ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ನನ್ನ ಒಪ್ಪಂದವೂ ಕೊನೆಗೊಳ್ಳುತ್ತಿದ್ದು, ನಿವೃತ್ತಿ ಹೊಂದಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ’ ಎಂದಿದ್ದಾರೆ(PC-PTI).
ಮಾರ್ಕ್ ವುಡ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 255 ವಿಕೆಟ್‌ಗಳು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ 126 ಮತ್ತು ಟಿ20 ಕ್ರಿಕೆಟ್‌ನಲ್ಲಿ 85 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರು ಒಟ್ಟು 2,341 ರನ್‌ಗಳನ್ನು (ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1,977, ಲಿಸ್ಟ್ ಎ ಕ್ರಿಕೆಟ್‌ನಲ್ಲಿ 230 ಮತ್ತು ಟಿ20 ಕ್ರಿಕೆಟ್‌ನಲ್ಲಿ 134) ಸಹ ಕಲೆಹಾಕಿದ್ದರು. ಆದಾಗ್ಯೂ ನಿರಂತರ ಗಾಯದ ಸಮಸ್ಯೆಗಳಿಂದಾಗಿ, ವುಡ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ(PC-PTI).
ಎರಡು ಬಾರಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಮಾರ್ಕ್ ವುಡ್, 2015 ರಲ್ಲಿ ಲಾರ್ಡ್ಸ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ ಇಂಗ್ಲೆಂಡ್ ಪರ 38 ಟೆಸ್ಟ್‌ಗಳಲ್ಲಿ 119 ವಿಕೆಟ್‌ಗಳು, 70 ಏಕದಿನ ಪಂದ್ಯಗಳಲ್ಲಿ 80 ವಿಕೆಟ್‌ಗಳು ಮತ್ತು 38 ಟಿ20ಪಂದ್ಯಗಳಲ್ಲಿ 54 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ಟೆಸ್ಟ್‌ನಲ್ಲಿ 811 ರನ್, ಏಕದಿನದಲ್ಲಿ 168 ಮತ್ತು ಟಿ20ಕ್ರಿಕೆಟ್‌ನಲ್ಲಿ 27 ರನ್ ಕಲೆಹಾಕಿದ್ದರು(PC-PTI).
ಇಂಗ್ಲೆಂಡ್‌ನ 2019 ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಮಾರ್ಕ್ ವುಡ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಪಂದ್ಯಾವಳಿಯಾದ್ಯಂತ 18 ವಿಕೆಟ್‌ಗಳನ್ನು ಕಬಳಿಸಿದ್ದರು. ಹಾಗೆಯೇ 2022 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ಮಾರ್ಕ್ ವುಡ್ ಇಡೀ ಪಂದ್ಯಾವಳಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದರು(PC-PTI).