AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಬಿಡಿಯ ವಿಶ್ವ ದಾಖಲೆ ಸರಿಗಟ್ಟಿದ ಮ್ಯಾಥ್ಯೂ ಫೋರ್ಡ್

Matthew Forde Record: ಐರ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್​ನ ಯುವ ಆಲ್​ರೌಂಡರ್ ಮ್ಯಾಥ್ಯೂ ಫೋರ್ಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ 19 ಎಸೆತಗಳನ್ನು ಎದುರಿಸಿದ ಮ್ಯಾಥ್ಯೂ ಫೋರ್ಡ್ 8 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 58 ರನ್ ಚಚ್ಚಿದರು. ಈ ಅರ್ಧಶತಕದೊಂದಿಗೆ ಫೋರ್ಡ್ ಎಬಿಡಿ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸಹ ಸರಿಗಟ್ಟಿದರು.

ಝಾಹಿರ್ ಯೂಸುಫ್
|

Updated on: May 24, 2025 | 9:07 AM

ಏಕದಿಕ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಅದು ಕೂಡ ವೆಸ್ಟ್ ಇಂಡೀಸ್​ನ ಯುವ ದಾಂಡಿಗ ಮ್ಯಾಥ್ಯೂ ಫೋರ್ಡ್ (Matthew Forde)  ಬ್ಯಾಟ್​ನಿಂದ. ವಿಶೇಷ ಎಂದರೆ ಈ ದಾಖಲೆಯೊಂದಿಗೆ ಮ್ಯಾಥ್ಯೂ, ಸಿಡಿಲಬ್ಬರದ ಸಿಡಿಲಮರಿ ಎಬಿ ಡಿವಿಲಿಯರ್ಸ್ (AB De Villiers) ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

1 / 5
ಡಬ್ಲಿನ್​ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ಫೋರ್ಡ್ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದರು. ಈ ಸಿಡಿಲಬ್ಬರರೊಂದಿಗೆ ಮ್ಯಾಥ್ಯೂ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ಹಾಫ್ ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

2 / 5
ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿತ್ತು. 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿಡಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಹಾಫ್ ಸೆಂಚುರಿ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

3 / 5
ಇದೀಗ 10 ವರ್ಷಗಳ ಬಳಿಕ ಎಬಿಡಿ ದಾಖಲೆಯನ್ನು ಸರಿಗಟ್ಟುವಲ್ಲಿ ಮ್ಯಾಥ್ಯೂ ಫೋರ್ಡ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು 23 ವರ್ಷದ ಮ್ಯಾಥ್ಯೂ ತಮ್ಮದಾಗಿಸಿಕೊಂಡಿದ್ದಾರೆ.

4 / 5
ಇನ್ನು ಮ್ಯಾಥ್ಯೂ ಫೋರ್ಡ್ ಅವರ ಈ ಸ್ಪೋಟಕ ಅರ್ಧಶತಕದ ನೆರವಿನೊಂದಿಗೆ ವೆಸ್ಟ್ ಇಂಡೀಸ್​ ತಂಡವು ಈ ಪಂದ್ಯದಲ್ಲಿ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 352 ರನ್ ಕಲೆಹಾಕಿತು. ಆದರೆ ಐರ್ಲೆಂಡ್​ ಇನಿಂಗ್ಸ್​ ಆರಂಭಕ್ಕೂ ಮುನ್ನ ಬರಲಾರಂಭಿಸಿದ್ದರಿಂದ ಈ ಪಂದ್ಯವನ್ನು ರದ್ದುಗೊಳಿಸಲಾಗಿದೆ. 

5 / 5
Follow us
‘ಎಸ್​ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್

ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು

ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ

ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ

ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ

‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು

ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು

ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ

ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ