ಅಭಿಷೇಕ್ ದಾಖಲೆ ಧೂಳೀಪಟ… ಮಿಚೆಲ್ ಓವನ್ ಹೊಸ ವಿಶ್ವ ದಾಖಲೆ

Updated on: Nov 09, 2026 | 8:30 AM

ವಿಶ್ವ ಕ್ರಿಕೆಟ್‌ನ ಅತ್ಯಂತ ಸ್ಫೋಟಕ ಸ್ವರೂಪವಾದ ಟಿ20ಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ ತಂಡದ ಯುವ ದಾಂಡಿಗ ಮಿಚೆಲ್ ಓವನ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದಲೇ ಅಬ್ಬರಿಸಿರುವ ಓವನ್, ಕನಿಷ್ಠ 50 ಇನಿಂಗ್ಸ್​ ಆಡಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ವಿಶ್ವದ ನಂಬರ್ 1 ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

1 / 5
ಆಸ್ಟ್ರೇಲಿಯಾ ತಂಡದ ಯುವ ದಾಂಡಿಗ ಮಿಚೆಲ್ ಓವನ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ 50 ಇನಿಂಗ್ಸ್​ ಆಡಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ವಿಶ್ವ ದಾಖಲೆಯನ್ನು ಓವನ್ ತಮ್ಮದಾಗಿಸಿಕೊಂಡಿದ್ದಾರೆ. (PC: BBL)

ಆಸ್ಟ್ರೇಲಿಯಾ ತಂಡದ ಯುವ ದಾಂಡಿಗ ಮಿಚೆಲ್ ಓವನ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಕನಿಷ್ಠ 50 ಇನಿಂಗ್ಸ್​ ಆಡಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ವಿಶ್ವ ದಾಖಲೆಯನ್ನು ಓವನ್ ತಮ್ಮದಾಗಿಸಿಕೊಂಡಿದ್ದಾರೆ. (PC: BBL)

2 / 5

ಟಿ20 ಕ್ರಿಕೆಟ್​ನಲ್ಲಿ ಈವರೆಗೆ ಒಟ್ಟು 86 ಇನ್ನಿಂಗ್ಸ್‌ಗಳ ನಂತರ ಮಿಚೆಲ್ ಓವನ್ ಸದ್ಯ 181.3 ಸ್ಟ್ರೈಕ್ ರೇಟ್ ಹೊಂದಿದ್ದು, ಈ ಮಲಕ ಕನಿಷ್ಠ 50 ಇನ್ನಿಂಗ್ಸ್ ಆಡಿದ ಆಟಗಾರರ ಪಟ್ಟಿಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನಕ್ಕೇರಿದ್ದಾರೆ. (PC: BBL)

3 / 5

ಇದಕ್ಕೂ ಮುನ್ನ ಈ ದಾಖಲೆ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಅಭಿಷೇಕ್ ಶರ್ಮಾ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಅಭಿಷೇಕ್ ಶರ್ಮಾ ಈವರೆಗೆ 218 ಟಿ20 ಇನಿಂಗ್ಸ್‌ಗಳನ್ನು ಆಡಿದ್ದು, ಈ ವೇಳೆ 179.2 ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ 6,634 ರನ್ ಕಲೆಹಾಕಿದ್ದಾರೆ. (PC: IPL)

4 / 5

ಆಸ್ಟ್ರೇಲಿಯಾದ ಮಿಚೆಲ್ ಓವನ್ ಅವರು ತಮ್ಮ ಒಟ್ಟಾರೆ ಟಿ20 ಕ್ರಿಕೆಟ್ ವೃತ್ತಿಜೀವನದಲ್ಲಿ ಈವರೆಗೆ 86 ಇನಿಂಗ್ಸ್​​ಗಳನ್ನು ಆಡಿದ್ದು, ಈ ವಳೆ 1000 ಎಸೆತಗಳನ್ನು ಎದುರಿಸಿ 181.3 ರ ಸ್ಟ್ರೈಕ್ ರೇಟ್​ನಲ್ಲಿ ಒಟ್ಟು 1813 ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಕನಿಷ್ಠ 50 ಇನಿಂಗ್ಸ್ ಆಡಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ ಎನಿಸಿಕೊಂಡಿದ್ದಾರೆ. (PC: BBL)

5 / 5

ಇದಾಗ್ಯೂ ಟಿ20 ಇತಿಹಾಸದಲ್ಲೇ ಅತ್ಯಧಿಕ ಸ್ಟ್ರೈಕ್ ರೇಟ್​​ನೊಂದಿಗೆ ಮುನ್ನುಗ್ಗುತ್ತಿರುವ ವೈಭವ್ ಸೂರ್ಯವಂಶಿಗೆ ಈ ದಾಖಲೆಯನ್ನು ಮುರಿಯಲು ಅತ್ಯುತ್ತಮ ಅವಕಾಶವಿದೆ. ಅಂದರೆ ವೈಭವ್ ಈಗಾಗಲೇ 44 ಟಿ20 ಇನಿಂಗ್ಸ್ ಆಡಿದ್ದು, ಈ ವೇಳೆ 213.75 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಇದೇ ಆರ್ಭಟ ಮುಂದುವರೆಸಿದರೆ, ಕನಿಷ್ಠ 50 ಇನಿಂಗ್ಸ್​​ಗಳನ್ನು ಆಡಿದ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ ಎಂಬ ವಿಶ್ವ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಲಿದೆ. (PC: IPL)

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us