ನಿವೃತ್ತ ಆಟಗಾರರ ವಿರುದ್ಧ ಬಿಸಿಸಿಐ ಬ್ರಹ್ಮಾಸ್ತ್ರ; ಮೇಜರ್ ಲೀಗ್ ಕ್ರಿಕೆಟ್‌ನಿಂದ ಹಿಂದೆ ಸರಿದ ಅಂಬಟಿ ರಾಯುಡು!

Updated on: Jul 08, 2023 | 12:42 PM

Ambati Rayudu: ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಆಡುವುದಾಗಿ ಹೇಳಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ವೈಯಕ್ತಿಕ ಕಾರಣಗಳಿಂದ ಮೇಜರ್ ಲೀಗ್ ಕ್ರಿಕೆಟ್ ಚೊಚ್ಚಲ ಆವೃತ್ತಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

1 / 7
ಐಪಿಎಲ್​ಗೆ ವಿದಾಯ ಹೇಳಿದ ಬಳಿಕ ಅಮೇರಿಕಾದಲ್ಲಿ ಮೊದಲ ಬಾರಿಗೆ ಆಯೋಜನೆಯಾಗುತ್ತಿರುವ ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಆಡುವುದಾಗಿ ಹೇಳಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ವೈಯಕ್ತಿಕ ಕಾರಣಗಳಿಂದ ಮೇಜರ್ ಲೀಗ್ ಕ್ರಿಕೆಟ್ ಚೊಚ್ಚಲ ಆವೃತ್ತಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ಐಪಿಎಲ್​ಗೆ ವಿದಾಯ ಹೇಳಿದ ಬಳಿಕ ಅಮೇರಿಕಾದಲ್ಲಿ ಮೊದಲ ಬಾರಿಗೆ ಆಯೋಜನೆಯಾಗುತ್ತಿರುವ ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಆಡುವುದಾಗಿ ಹೇಳಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ವೈಯಕ್ತಿಕ ಕಾರಣಗಳಿಂದ ಮೇಜರ್ ಲೀಗ್ ಕ್ರಿಕೆಟ್ ಚೊಚ್ಚಲ ಆವೃತ್ತಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

2 / 7

2023ರ ಐಪಿಎಲ್​ನಲ್ಲಿ ಚೆನ್ನೈ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಯುಡು, ಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟ್​ಗೆ ಗುಡ್​ ಬೈ ಹೇಳುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆ ಬಳಿಕ ಮೇಜರ್ ಲೀಗ್ ಕ್ರಿಕೆಟ್ ಟಿ20 ಲೀಗ್​ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್‌ ತಂಡದ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದರು.

3 / 7

ಆದರೆ ಇದೀಗ ರಾಯುಡು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಈ ಬಾರಿಯ ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣವೂ ಇದ್ದು, ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ವಿದೇಶಿ ಲೀಗ್​ಗಳಲ್ಲಿ ಆಡಲು ಮುಂದಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಬಿಸಿಸಿಐ ಮುಂದಾಗಿದೆ.

4 / 7

ಟೀಂ ಇಂಡಿಯಾದ ಮಾಜಿ ಆಟಗಾರರು ವಿದೇಶಿ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡುವುದನ್ನು ತಡೆಯಲು ಹೊಸ ನೀತಿಯನ್ನು ರೂಪಿಸಲು ಬಿಸಿಸಿಐ ಪ್ರಯತ್ನಿಸುತ್ತಿದೆ. ಹೊಸ ನೀತಿಯ ಪ್ರಕಾರ, ಭಾರತ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಟೀಂ ಇಂಡಿಯಾ ಆಟಗಾರರು, ಇತರ ಪಂದ್ಯಾವಳಿಗಳಲ್ಲಿ ಆಡಲು ಬಿಸಿಸಿಐನಿಂದ ಎನ್​ಒಸಿ ಪಡೆಯಬೇಕಿದೆ.

5 / 7

ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿರುವಂತೆ, ಟೀಂ ಇಂಡಿಯಾದ ಮಾಜಿ ಆಟಗಾರರು ಸಾಗರೋತ್ತರ ಲೀಗ್‌ಗಳಲ್ಲಿ ಆಡುವುದನ್ನು ತಡೆಯಲು ಆಟಗಾರರ ಒಪ್ಪಂದಗಳಲ್ಲಿ ಕೂಲಿಂಗ್-ಆಫ್ ಅವಧಿಯನ್ನು ಪರಿಚಯಿಸಲು ಬಿಸಿಸಿಐ ಪ್ರಯತ್ನಿಸುತ್ತಿದೆ. ಅಂದರೆ, ಟೀಂ ಇಂಡಿಯಾ ಆಟಗಾರರು ಭಾರತ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಒಂದು ವರ್ಷದವರೆಗೆ ಯಾವುದೇ ಸಾಗರೋತ್ತರ ಪಂದ್ಯಾವಳಿಗಳಲ್ಲಿ ಭಾಗವಹಿಸುವಂತಿಲ್ಲ.

6 / 7

ಹೀಗಾಗಿ ಬಿಸಿಸಿಐ ತನ್ನ ಹೊಸ ನೀತಿಯನ್ನು ಘೋಷಿಸುವ ಮುನ್ನವೇ ರಾಯುಡು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ರಾಯಡು ಜನಪ್ರಿಯ ಟೂರ್ನಮೆಂಟ್‌ಗಳಾದ SA20 ಮತ್ತು ILT20 ನಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಇವೆ.

7 / 7

ಅಂತಾರಾಷ್ಟ್ರೀಯ ಕ್ರಿಕೆಟ್ ಅಥವಾ ಐಪಿಎಲ್ ನಿವೃತ್ತಿಯ ನಂತರ ಆಟಗಾರರು ತಕ್ಷಣವೇ ವಿದೇಶಿ ಲೀಗ್‌ಗಳಿಗೆ ಸೇರುವ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ ಎಂದು ವರದಿಯಾಗಿದೆ. "ಪೂರ್ವನಿರ್ಧರಿತ ನಿವೃತ್ತಿಯ (ವಿದೇಶಿ ಲೀಗ್​ಗಳಲ್ಲಿ ಆಡುವ ಸಲುವಾಗಿ ಭಾರತ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವುದು) ಪ್ರವೃತ್ತಿಯನ್ನು ತಡೆಯಲು ಬಿಸಿಸಿಐ ಈ ಹೊಸ ನೀತಿಯನ್ನು ತರಲು ಮುಂದಾಗಿದೆ ಎಂದು ವರದಿಯಾಗಿದೆ.

Loading...
Unable to load recommendations.
Follow Us