- Kannada News Photo gallery Cricket photos MLC 2023 final Nicholas Pooran smashes ton in MLC final for MI New York
10 ಬೌಂಡರಿ, 13 ಸಿಕ್ಸರ್, 137 ರನ್; ಫೈನಲ್ ಪಂದ್ಯದಲ್ಲಿ ಸುನಾಮಿ ಎಬ್ಬಿಸಿದ ಪೂರನ್..!
Nicholas Pooran: ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 55 ಎಸೆತಗಳನ್ನು ಎದುರಿಸಿದ ಪೂರನ್ ಅಜೇಯ 137 ರನ್ ಬಾರಿಸುವ ಮೂಲಕ ತನ್ನ ತಂಡವನ್ನು ಚಾಂಪಿಯನ್ ಮಾಡಿದರು.
Updated on: Jul 31, 2023 | 10:49 AM

ಮೇಜರ್ ಲೀಗ್ ಕ್ರಿಕೆಟ್ 2023 ರ ಫೈನಲ್ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ ತಂಡವನ್ನು ಮಣಿಸಿದ ಎಂಐ ನ್ಯೂಯಾರ್ಕ್ ತಂಡ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ಪರ ಸ್ಫೋಟಕ ಇನ್ನಿಂಗ್ಸ್ ಆಡಿದ ನಾಯಕ ನಿಕೋಲಸ್ ಪೂರನ್, ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 55 ಎಸೆತಗಳನ್ನು ಎದುರಿಸಿದ ಪೂರನ್ ಅಜೇಯ 137 ರನ್ ಬಾರಿಸುವ ಮೂಲಕ ತನ್ನ ತಂಡವನ್ನು ಚಾಂಪಿಯನ್ ಮಾಡಿದರು. ಪೂರನ್ ಅವರ ಅಬ್ಬರದ ಶತಕದ ಆಧಾರದ ಮೇಲೆ ಎಂಐ ತಂಡ 4 ಓವರ್‌ಗಳು ಬಾಕಿ ಇರುವಂತೆಯೇ 184 ರನ್‌ಗಳ ಗುರಿ ಬೆನ್ನಟ್ಟಿತು.

ತಮ್ಮ ಶತಕ ಇನ್ನಿಂಗ್ಸ್‌ನಲ್ಲಿ ಬೌಂಡರಿಗಳಿಗಿಂತ ಹೆಚ್ಚಾಗಿ ಸಿಕ್ಸರ್ಗಳನ್ನೇ ಸಿಡಿಸಿದ ಪೂರನ್ ಒಟ್ಟು 13 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಹೊಡೆದರು. ಅಂದರೆ ಪೂರನ್ ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ 118 ರನ್ ಕಲೆಹಾಕಿದರು. ಎದುರಾಳಿ ತಂಡದಲ್ಲಿ ಇಮಾದ್ ವಾಸಿಮ್, ಡ್ವೇನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಆಂಡ್ರ್ಯೂ ಟೈ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರಿದ್ದರು. ಆದರೆ ಪೂರನ್ ಯಾರನ್ನೂ ಬಿಡಲಿಲ್ಲ.

ಮೊದಲ 16 ಎಸೆತಗಳಲ್ಲಿ ಪೂರನ್ 6 ಸಿಕ್ಸರ್, 3 ಬೌಂಡರಿ ಸಹಿತ ತಮ್ಮ ಅರ್ಧಶತಕ ಪೂರೈಸಿದರು. ಹೀಗಾಗಿ ಪವರ್‌ಪ್ಲೇಯಲ್ಲಿಯೇ ಎಂಐ ನ್ಯೂಯಾರ್ಕ್ ತಂಡ 80 ರನ್ ಕಲೆಹಾಕಿತು. ಆ ಬಳಿಕ ಕೇವಲ 46 ಎಸೆತಗಳಲ್ಲಿ ಎಂಐ ತಂಡದ ಶತಕ ಪೂರ್ಣಗೊಂಡಿತು.

ವೈಯಕ್ತಿಕ ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸಿದ ಪೂರನ್ ಅವರ ಬ್ಯಾಟ್ನಿಂದ ಈ ಹಂತದಲ್ಲಿ ಒಟ್ಟು 10 ಸಿಕ್ಸರ್, 6 ಬೌಂಡರಿಗಳು ಹೊರಬಂದವು.

ಈ ಶತಕದೊಂದಿಗೆ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡ ಪೂರನ್, ಆಡಿರು 8 ಪಂದ್ಯಗಳಲ್ಲಿ 64ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು, 170ರ ಸ್ಟ್ರೈಕ್ ರೇಟ್ನಲ್ಲಿ ಅತ್ಯಧಿಕ 388 ರನ್ ಕಲೆಹಾಕಿದ್ದಾರೆ.

ಇದಲ್ಲದೆ ಪೂರನ್ ಇಡೀ ಪಂದ್ಯಾವಳಿಯಲ್ಲಿ ಬೌಂಡರಿಗಳಿಗಿಂತ ಹೆಚ್ಚಾಗಿ ಸಿಕ್ಸರ್ಗಳನ್ನೇ ಸಿಡಿಸಿದ್ದಾರೆ. ಪೂರನ್ ಒಟ್ಟು 34 ಸಿಕ್ಸರ್ ಮತ್ತು 20 ಬೌಂಡರಿಗಳನ್ನು ಬಾರಿಸಿದ್ದಾರೆ.
























