Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಏಕದಿನ- ಟಿ20 ತಂಡಕ್ಕೆ ನೂತನ ನಾಯಕನ ನೇಮಕ; ಬಾಬರ್ ಸ್ಥಾನಕ್ಕೆ ಬಂದಿದ್ಯಾರು?

Pakistan Cricket: ಬಾಬರ್ ಆಝಂ ರಾಜೀನಾಮೆಯ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೊಹಮ್ಮದ್ ರಿಜ್ವಾನ್ ಅವರನ್ನು ಏಕದಿನ ಮತ್ತು ಟಿ20 ತಂಡಗಳ ನಾಯಕನಾಗಿ ನೇಮಿಸಿದೆ. ಸಲ್ಮಾನ್ ಅಲಿ ಅಗಾ ಉಪನಾಯಕರಾಗಿದ್ದಾರೆ. ರಿಜ್ವಾನ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಮ್ಮ ನಾಯಕತ್ವವನ್ನು ಪ್ರಾರಂಭಿಸಲಿದ್ದಾರೆ. ಅವರು ಪಾಕಿಸ್ತಾನ ಕ್ರಿಕೆಟ್ ಲೀಗ್‌ನಲ್ಲಿ ಚಾಂಪಿಯನ್‌ಶಿಪ್ ಗೆದ್ದ ಅನುಭವ ಹೊಂದಿದ್ದಾರೆ.

ಪೃಥ್ವಿಶಂಕರ
|

Updated on:Oct 27, 2024 | 6:10 PM

ಪಾಕಿಸ್ತಾನ ಕ್ರಿಕೆಟ್​ನಲ್ಲಿ ಅಚ್ಚರಿಯ ಬದಲಾವಣೆಗಳು ಹೊಸದೆನಲ್ಲ. ಪ್ರತಿ ಸರಣಿಯ ನಂತರ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದ್ದರೂ ಫಲಿತಾಂಶದಲ್ಲಿ ಮಾತ್ರ ಏನು ವ್ಯತ್ಯಾಸವಾಗುತ್ತಿರಲಿಲ್ಲ. ಆದರೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡು ಯಶಸ ಕಂಡಿದ್ದ ಪಾಕ್ ಮಂಡಳಿ ಇದೀಗ ಬಾಬರ್ ಆಝಂ ಅವರಿಂದ ತೆರವಾದ ಸೀಮಿತ ಓವರ್​ಗಳ ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡಿದೆ.

1 / 6
ವಾಸ್ತವವಾಗಿ ಪಾಕಿಸ್ತಾನ ಟಿ20 ಹಾಗೂ ಏಕದಿನ ತಂಡಗಳ ನಾಯಕತ್ವಕ್ಕೆ ಇತ್ತೀಚಿಗಷ್ಟೇ ಬಾಬರ್ ಆಝಂ ಗುಡ್ ಬೈ ಹೇಳಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಈ ಸ್ಥಾನಕ್ಕೆ ಯಾರು ಆಯ್ಕೆಯಾಗಬಹುದು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅದರಲ್ಲಿ ಸಾಕಷ್ಟು ಆಟಗಾರರ ಹೆಸರುಗಳು ಸಹ ಕೇಳಿಬಂದಿದ್ದವು. ಇದೀಗ ನಿರೀಕ್ಷೆಯಂತೆ ತಂಡದ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಅವರನ್ನು ಸೀಮಿತ ಓವರ್​ಗಳ ತಂಡಕ್ಕೆ ನಾಯಕನಾಗಿ ಘೋಷಿಸಲಾಗಿದೆ.

2 / 6
ಇನ್ನು ಮುಂದೆ ಮೊಹಮ್ಮದ್ ರಿಜ್ವಾನ್ ಏಕದಿನ ಮತ್ತು ಟಿ20 ತಂಡವನ್ನು ಮುನ್ನಡೆಸಿದರೆ, ಸಲ್ಮಾನ್ ಅಲಿ ಅಗಾ ಅವರನ್ನು ತಂಡದ ನೂತನ ಉಪನಾಯಕನಾಗಿ ನೇಮಿಸಲಾಗಿದೆ. ಇದೀಗ ನೂತನ ನಾಯಕನಾಗಿ ಆಯ್ಕೆಯಾಗಿರುವ ರಿಜ್ವಾನ್, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯೊಂದಿಗೆ ತಮ್ಮ ಜವಬ್ದಾರಿಯನ್ನು ನಿರ್ವಹಿಸಲಿದ್ದಾರೆ.

3 / 6
ಲಾಹೋರ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಮೊಹಮ್ಮದ್ ರಿಜ್ವಾನ್ ಈಗ ಪಾಕಿಸ್ತಾನದ ವೈಟ್ ಬಾಲ್ ತಂಡದ ನಾಯಕರಾಗಲಿದ್ದು, ಸಲ್ಮಾನ್ ಆಗಾ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಸರಣಿಯಿಂದ ಮೊಹಮ್ಮದ್ ರಿಜ್ವಾನ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಆದರೆ, ಜಿಂಬಾಬ್ವೆ ಪ್ರವಾಸದಲ್ಲಿ ಅವರು ಟಿ20 ತಂಡದ ಭಾಗವಾಗಿರದ ಕಾರಣ ಸಲ್ಮಾನ್ ಅಗಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದರು.

4 / 6
ಮೊಹಮ್ಮದ್ ರಿಜ್ವಾನ್ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ನಾಯಕತ್ವದ ಅನುಭವ ಹೊಂದಿದ್ದು, ಪಾಕಿಸ್ತಾನ ಕ್ರಿಕೆಟ್ ಲೀಗ್‌ನಲ್ಲಿ ನಾಯಕನಾಗಿ ತಮ್ಮ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಆದಾಗ್ಯೂ, ಅವರು ಪಾಕಿಸ್ತಾನದ ವೈಟ್ ಬಾಲ್ ತಂಡದ ನಾಯಕರಾಗಿರುವುದು ಇದೇ ಮೊದಲು. ಇದಕ್ಕೂ ಮುನ್ನ ಅವರು ಟೆಸ್ಟ್ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ, ಪಾಕಿಸ್ತಾನ ತಂಡ 2020-21ರ ನ್ಯೂಜಿಲೆಂಡ್ ಪ್ರವಾಸದಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಿದೆ. ಆದರೆ ಈ ಎರಡೂ ಪಂದ್ಯಗಳಲ್ಲಿ ತಂಡ ಸೋಲನುಭವಿಸಬೇಕಾಯಿತು.

5 / 6
ಮೊಹಮ್ಮದ್ ರಿಜ್ವಾನ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅವರು ಇದುವರೆಗೆ ಪಾಕಿಸ್ತಾನ ಪರ 74 ಏಕದಿನ ಮತ್ತು 102 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 40.15 ರ ಸರಾಸರಿಯಲ್ಲಿ 2088 ರನ್ ಗಳಿಸಿರುವ ರಿಜ್ವಾನ್ ಇದರಲ್ಲಿ 13 ಅರ್ಧ ಶತಕ ಮತ್ತು 3 ಶತಕಗಳನ್ನು ಸಿಡಿಸಿದ್ದಾರೆ. ಅದೇ ಸಮಯದಲ್ಲಿ, ಟಿ20ಯಲ್ಲಿ ಅವರು 48.72 ಸರಾಸರಿಯಲ್ಲಿ 3313 ರನ್ ಗಳಿಸಿದ್ದಾರೆ. ಇದರಲ್ಲಿ 29 ಅರ್ಧ ಶತಕ ಮತ್ತು 1 ಶತಕ ಕೂಡ ಸೇರಿದೆ.

6 / 6

Published On - 6:06 pm, Sun, 27 October 24

Follow us
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!

ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?

Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು

ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು

ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ

ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ

ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ