ಟೆಸ್ಟ್ ನಾಯಕತ್ವಕ್ಕೆ ಪೈಪೋಟಿ ಶುರು; ಟೀಂ ಇಂಡಿಯಾದ ಟೆಸ್ಟ್ ಸಾರಥ್ಯಕ್ಕೆ ನಾನು ಸಿದ್ದ ಎಂದ ಮತ್ತೊಬ್ಬ ಬೌಲರ್!
Mohammed Shami: ನಾನು ಸದ್ಯಕ್ಕೆ ನಾಯಕತ್ವದ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ ಆದರೆ ನನಗೆ ನೀಡುವ ಯಾವುದೇ ಜವಾಬ್ದಾರಿಗೆ ನಾನು ಸಿದ್ಧನಿದ್ದೇನೆ.
Updated on: Jan 27, 2022 | 10:45 PM

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತಿದೊಡ್ಡ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ ಈಗ ಟೆಸ್ಟ್ ನಾಯಕರಾಗಲು ಸಿದ್ಧರಾಗಿದ್ದಾರೆ. ಅವಕಾಶ ಸಿಕ್ಕರೆ ನಾಯಕತ್ವದ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

India.com ಜೊತೆಗಿನ ಸಂವಾದದಲ್ಲಿ ಮೊಹಮ್ಮದ್ ಶಮಿ, 'ನಾನು ಸದ್ಯಕ್ಕೆ ನಾಯಕತ್ವದ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ ಆದರೆ ನನಗೆ ನೀಡುವ ಯಾವುದೇ ಜವಾಬ್ದಾರಿಗೆ ನಾನು ಸಿದ್ಧನಿದ್ದೇನೆ. ನಿಜ ಹೇಳಬೇಕೆಂದರೆ ಟೀಂ ಇಂಡಿಯಾ ನಾಯಕನಾಗಲು ಯಾರಿಗೆ ಇಷ್ಟವಿರಲ್ಲ? ಆದರೆ ಅದೊಂದೇ ಅಲ್ಲ, ನಾನು ತಂಡಕ್ಕೆ ಎಲ್ಲ ರೀತಿಯಲ್ಲೂ ಕೊಡುಗೆ ನೀಡಲು ಬಯಸುತ್ತೇನೆ.

ವೆಸ್ಟ್ ಇಂಡೀಸ್ ವಿರುದ್ಧದ ODI ಮತ್ತು T20 ಸರಣಿಗೆ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ಶಮಿ ಎಲ್ಲ ಮಾದರಿಯಲ್ಲೂ ಆಯ್ಕೆಗೆ ಲಭ್ಯರಿದ್ದಾರೆ ಎಂದಿದ್ದಾರೆ. ಎಲ್ಲ ಮಾದರಿಯಲ್ಲೂ ನಾನು ಆಯ್ಕೆಗೆ ಲಭ್ಯನಿದ್ದೇನೆ ಎಂದು ಶಮಿ ಹೇಳಿದ್ದಾರೆ. ನಾನು ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮೊಹಮ್ಮದ್ ಶಮಿಗೂ ವಿಶ್ರಾಂತಿ ನೀಡಲಾಗಿತ್ತು. ಈ ಬಲಗೈ ವೇಗದ ಬೌಲರ್ ಟೆಸ್ಟ್ ಸರಣಿಯಲ್ಲಿ 14 ವಿಕೆಟ್ ಪಡೆದರು. ಸೆಂಚುರಿಯನ್‌ನಲ್ಲಿ ಐತಿಹಾಸಿಕ ಗೆಲುವು ಪಡೆಯುವಲ್ಲಿ ಶಮಿ ಪ್ರಮುಖ ಪಾತ್ರ ವಹಿಸಿದ್ದರು, ಆದರೆ ಆ ನಂತರ ಟೀಮ್ ಇಂಡಿಯಾ ಜೋಹಾನ್ಸ್‌ಬರ್ಗ್ ಮತ್ತು ಕೇಪ್ ಟೌನ್‌ನಲ್ಲಿ ಟೆಸ್ಟ್‌ಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿತು.

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಭಾರತ ತಂಡದ ಟಾಪ್ 10ರೊಳಗೆ ಸ್ಥಾನ ಗಳಿಸಿದ್ದಾರೆ. ಬೆಂಗಳೂರು ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದ ಬುಮ್ರಾ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.




