AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ ಧೋನಿ- ಗಂಭೀರ್..!

MS Dhoni: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರನ್ನು 2026ರ ಟಿ20 ವಿಶ್ವಕಪ್‌ಗೆ ಮೆಂಟರ್ ಆಗಿ ನೇಮಿಸಲು ಬಿಸಿಸಿಐ ಯೋಚಿಸುತ್ತಿದೆ ಎಂಬ ವರದಿಗಳಿವೆ. ಗೌತಮ್ ಗಂಭೀರ್ ಅವರೊಂದಿಗೆ ಧೋನಿ ಕೆಲಸ ಮಾಡುವ ಸಾಧ್ಯತೆಯಿದೆ. ಧೋನಿಯ ಅನುಭವ ಮತ್ತು ಕಾರ್ಯತಂತ್ರದ ಜ್ಞಾನವು ತಂಡಕ್ಕೆ ಬಹಳ ಮುಖ್ಯ ಎಂದು ಬಿಸಿಸಿಐ ನಂಬುತ್ತದೆ. ಆದರೆ ಧೋನಿ ಈ ಪ್ರಸ್ತಾಪವನ್ನು ಒಪ್ಪುತ್ತಾರೆಯೇ ಎಂಬುದು ಖಚಿತವಾಗಿಲ್ಲ.

ಪೃಥ್ವಿಶಂಕರ
|

Updated on: Aug 30, 2025 | 10:16 PM

Share
ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಭಾರತಕ್ಕೆ ಎರಡೆರಡು ವಿಶ್ವಕಪ್​ಗಳನ್ನು ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಇದೀಗ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅಚ್ಚರಿಯ ಸಂಗತಿಯೆಂದರೆ ಎಲ್ಲವೂ ಅಂದುಕೊಂಡಂತೆ ನಡೆದರೆ ಧೋನಿ ಎಂದರೆ ಉರಿದು ಬೀಳುವ ಗೌತಮ್ ಗಂಭೀರ್ ಅವರೊಂದಿಗೆ ಧೋನಿ ಕೆಲಸ ಮಾಡಬೇಕಾಗುತ್ತದೆ.

1 / 5
ಪ್ರಸ್ತುತ ಟಿ20 ಏಷ್ಯಾಕಪ್​ಗೆ ಟೀಂ ಇಂಡಿಯಾ ಸಿದ್ಧತೆಗಳನ್ನು ನಡೆಸುತ್ತಿದರೆ, ಇತ್ತ ಬಿಸಿಸಿಐ ಕಣ್ಣುಗಳು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಮೇಲೆ ಬಿದ್ದಿದೆ. ಹೀಗಾಗಿ ಈ ಚುಟುಕು ವಿಶ್ವಕಪ್​ಗೆ ಈಗಿನಿಂದಲೇ ತಯಾರಿ ನಡೆಸುತ್ತಿರುವ ಬಿಸಿಸಿಐ, ತಂಡದ ಮಾಜಿ ನಾಯಕ ಎಂಎಸ್ ಧೋನಿಗೆ ತಂಡದ ಮೆಂಟರ್ ಹುದ್ದೆಯನ್ನು ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

2 / 5
ಮಾಧ್ಯಮ ವರದಿಗಳ ಪ್ರಕಾರ 2026 ರ ಟಿ20 ವಿಶ್ವಕಪ್​ಗೆ ಧೋನಿಯನ್ನು ಟೀಂ ಇಂಡಿಯಾದ ಮೆಂಟರ್​ ಆಗಿ ನೇಮಿಸಲು ಚಿಂತಿಸಿದೆ. ವಾಸ್ತವವಾಗಿ ಧೋನಿ ಈ ಹುದ್ದೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅಂದರೆ 2021 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲೂ ಧೋನಿ ಮೆಂಟರ್ ಆಗಿ ಕೆಲಸ ಮಾಡಿದ್ದರು. ಆದರೆ ಆ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಗುಂಪು ಹಂತದಲ್ಲಿ ತನ್ನ ಪ್ರಯಾಣ ಮುಗಿಸಿತ್ತು.

3 / 5
ಆದಾಗ್ಯೂ ಬಿಸಿಸಿಐ ಮತ್ತೊಮ್ಮೆ ಧೋನಿ ಕಡೆಗೆ ಒಲವು ತೋರಿದ ಎಂದು ಕ್ರಿಕ್‌ಬ್ಲಾಗರ್ ವರದಿ ಮಾಡಿದೆ. ವರದಿಯ ಪ್ರಕಾರ ಧೋನಿಗೆ ಈ ಹುದ್ದೆ ನೀಡಬಹುದೆಂದು ಬಿಸಿಸಿಐ ಮೂಲವೊಂದು ದೃಢಪಡಿಸಿದೆ. ಅವರ ಕಾರ್ಯತಂತ್ರದ ಚಿಂತನೆ, ಶಾಂತ ನಾಯಕತ್ವ ಕೌಶಲ್ಯ ಮತ್ತು ಪಂದ್ಯಾವಳಿ ಗೆದ್ದ ಅನುಭವವು ತಂಡವನ್ನು ಮತ್ತೊಂದು ವಿಶ್ವ ಪ್ರಶಸ್ತಿ ಸವಾಲಿಗೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಮಂಡಳಿಯ ಅಭಿಪ್ರಾಯವಾಗಿದೆ. ಆದಾಗ್ಯೂ, ಧೋನಿ ಈ ಪ್ರಸ್ತಾಪವನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬುದು ಪ್ರಶ್ನೆ.

4 / 5
ಗೌತಮ್ ಗಂಭೀರ್ ಪ್ರಸ್ತುತ ಭಾರತ ತಂಡದ ಮುಖ್ಯ ತರಬೇತುದಾರರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಧೋನಿ ಮಾರ್ಗದರ್ಶಕರಾದರೆ, ಈ ಇಬ್ಬರು ದಂತಕಥೆಗಳು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ, ವಿಶೇಷವಾಗಿ ಗೌತಮ್ ಗಂಭೀರ್ ಅವರ ಹೇಳಿಕೆಗಳಿಂದಾಗಿ, ಈ ಇಬ್ಬರ ನಡುವಿನ ಸಂಬಂಧದಲ್ಲಿ ಹಳಸಿದ ವರದಿಗಳಿವೆ. ಆದಾಗ್ಯೂ, ಧೋನಿ ಮತ್ತು ಗಂಭೀರ್ ಯಾವಾಗಲೂ ಮೈದಾನದಲ್ಲಿ ಪರಸ್ಪರ ಗೌರವಿಸುವುದನ್ನು ಕಾಣಬಹುದು.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ