- Kannada News Photo gallery Cricket photos MS Dhoni starting a new career in golf celebration pics viral
MS Dhoni: ಕ್ರಿಕೆಟ್ ಅಲ್ಲವೇ ಅಲ್ಲ.. ಕೇಕ್ ಕತ್ತರಿಸಿ ಹೊಸ ಇನ್ನಿಂಗ್ಸ್ ಆರಂಭಿಸಿದ ಧೋನಿ; ಫೋಟೋ ನೋಡಿ
MS Dhoni: ಭಾರತಕ್ಕೆ ಎರಡೆರಡು ವಿಶ್ವಕಪ್ ಗೆದ್ದುಕೊಟ್ಟ ಟೀಂ ಇಂಡಿಯಾ ಮಾಜಿ ನಾಯಕ ಧೋನಿ, ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರು ಉಳಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
Updated on:Sep 17, 2022 | 3:15 PM

ಭಾರತಕ್ಕೆ ಎರಡೆರಡು ವಿಶ್ವಕಪ್ ಗೆದ್ದುಕೊಟ್ಟ ಟೀಂ ಇಂಡಿಯಾ ಮಾಜಿ ನಾಯಕ ಧೋನಿ, ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರು ಉಳಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಧೋನಿಗೆ, ಕ್ರಿಕೆಟ್ನಷ್ಟೇ ಬೇರೆ ಆಟಗಳ ಮೇಲೂ ಹೆಚ್ಚು ಆಸಕ್ತಿ ಇದೆ. ಅವುಗಳಲ್ಲಿ ಟೆನಿಸ್ ಮತ್ತು ಗಾಲ್ಫ್ ಎಂದರೆ ಮಹೀಗೆ ಬಹಳ ಅಚ್ಚುಮೆಚ್ಚು. ಹೀಗಾಗಿ ಮಹೇಂದ್ರ ಸಿಂಗ್ ಧೋನಿ ಈ ಆಟಗಳಿಗಾಗಿ ಅಮೆರಿಕಕ್ಕೆ ದೌಡಾಯಿಸಿದ್ದಾರೆ.

ಧೋನಿ ಅಮೆರಿಕದ ಮೆಟುಚಾನ್ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ (ಎಂಜಿಸಿಸಿ) ಸದಸ್ಯರಾಗಿದ್ದು, ಅಲ್ಲಿನ ಬೇಕರಿಯೊಂದರಲ್ಲಿ ಕೇಕ್ ಕತ್ತರಿಸಿ ಧೋನಿ ಅವರ ಹೊಸ ಇನ್ನಿಂಗ್ಸ್ ಆಚರಿಸಲಾಯಿತು. ಗಾಲ್ಭ್ ಆಟವನ್ನು ಸೂಚಿಸುವ ವಿನ್ಯಾಸದಲ್ಲಿ ಕೇಕ್ ತಯಾರಿಸಿದ್ದು ಇಲ್ಲಿ ವಿಶೇಷವಾಗಿತ್ತು.

ಮಹಿ ಗಾಲ್ಭ್ ಪಟುವಂತೆ ಸ್ಕೈ ಬ್ಲೂ ಟೀ ಶರ್ಟ್ ಧರಿಸಿದ್ದು, ಅವರು ಕೇಕ್ ಕತ್ತರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಂಎಸ್ ಧೋನಿ ಪತ್ನಿ ಕೆಲ ಸಮಯದಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಲ್ಲದೆ ಈ ದಂಪತಿಗಳು ಕೆಲವು ದಿನಗಳ ಹಿಂದೆ ನಡೆದ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯನ್ನು ಗ್ಯಾಲರಿಯಲ್ಲಿ ಕುಳಿತು ಆನಂದಿಸುತ್ತಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದವು.

ಅಲ್ಲದೆ ಯುಎಸ್ ಓಪನ್‌ನಲ್ಲಿ ಒಂದೇ ಫ್ರೇಮ್‌ನಲ್ಲಿ ಇಬ್ಬರು ವಿಶ್ವಕಪ್ ವಿಜೇತ ನಾಯಕರು ಕಾಣಿಸಿಕೊಂಡಿದ್ದರು. ಧೋನಿ ಮತ್ತು ಕಪಿಲ್ ದೇವ್ ಒಟ್ಟಿಗೆ ಗ್ರ್ಯಾಂಡ್ ಸ್ಲಾಮ್ ಆನಂದಿಸಿದ್ದರು.
Published On - 3:13 pm, Sat, 17 September 22




