AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PBKS vs MI: ಐಪಿಎಲ್​ನಲ್ಲಿ ಇತಿಹಾಸ ರಚಿಸಿದ ಮುಂಬೈ ಇಂಡಿಯನ್ಸ್: ಈವರೆಗೆ ಯಾವ ತಂಡ ಕೂಡ ಮಾಡಿಲ್ಲ ಈ ಸಾಧನೆ

Mumbai Indians, IPL 2023: ಐಪಿಎಲ್ 2023 ರಲ್ಲಿ ಬುಧವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ರಣ ರೋಚಕವಾಗಿತ್ತು. ಉಭಯ ತಂಡಗಳ ಮೊತ್ತ 200 ರ ಗಡಿ ದಾಟಿದ್ದವು. ಇದರಲ್ಲಿ ರೋಹಿತ್ ಶರ್ಮಾ ಪಡೆ ಟಾರ್ಗೆಟ್ ಬೆನ್ನಟ್ಟಿ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

Vinay Bhat
|

Updated on: May 04, 2023 | 8:22 AM

ಐಪಿಎಲ್​ನಲ್ಲಿ 200+ ರನ್​ಗಳ ಟಾರ್ಗೆಟ್ ನೀಡಿದರೂ ಅದು ಸೇಫ್ ಅಲ್ಲ ಎಂಬುದಕ್ಕೆ ಈ ಬಾರಿಯ ಟೂರ್ನಿ ಉತ್ತಮ ಉದಾಹರಣೆ ಆಗಿದೆ. ಅನೇಕ ತಂಡಗಳು 200 ಕ್ಕೂ ಅಧಿಕ ರನ್​ಗಳ ಗುರಿ ನೀಡಿದ್ದರೂ ಟಾರ್ಗೆಟ್ ಬೆನ್ನಟ್ಟುವ ತಂಡ ಸುಲಭವಾಗಿ ಜಯ ಸಾಧಿಸುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆ ಪಂಜಾಬ್ ಹಾಗೂ ಮುಂಬೈ ಪಂದ್ಯ.

1 / 8
ಐಪಿಎಲ್ 2023 ರಲ್ಲಿ ಬುಧವಾರ ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ ರಣ ರೋಚಕವಾಗಿತ್ತು. ಉಭಯ ತಂಡಗಳ ಮೊತ್ತ 200 ರ ಗಡಿ ದಾಟಿದ್ದವು. ಇದರಲ್ಲಿ ರೋಹಿತ್ ಶರ್ಮಾ ಪಡೆ ಟಾರ್ಗೆಟ್ ಬೆನ್ನಟ್ಟಿ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

2 / 8
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್​​ಸ್ಟೋನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 42 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್ ಸಿಡಿಸಿ ಅಜೇಯ 82 ರನ್ ಚಚ್ಚಿದರು.

3 / 8
ಜಿತೇಶ್ ಶರ್ಮಾ 27ಎಸೆತಗಳಲ್ಲಿ ಅಜೇಯ 49, ಶಿಖರ್ ಧವನ್ 30 ಹಾಗೂ ಮ್ಯಾಥ್ಯೂ ಶಾರ್ಟ್ 27 ರನ್ ಗಳಿಸಿದರು. ಪಂಜಾಬ್ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಮುಂಬೈ ಪರ ಪಿಯುಷ್ ಚಾವ್ಲಾ 2 ವಿಕೆಟ್ ಪಡೆದರು.

4 / 8
ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪರ ರೋಹಿತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರೆ ಕ್ಯಾಮ್ರೋನ್ ಗ್ರೀನ್ 23 ರನ್​ಗೆ ಔಟಾದರು. ಆದರೆ, ನಂತರ ಜೊತೆಯಾದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆದರು.

5 / 8
ಕಿಶನ್ 41 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್​ನೊಂದಿಗೆ 75 ರನ್ ಹಾಗೂ ಯಾದವ್ 31 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್ ಸಿಡಿಸಿ 66 ರನ್ ಚಚ್ಚಿ ಗೆಲುವಿನ ಆಸೆ ಚಿಗುರಿಸಿದರು.

6 / 8
ಅಂತಿಮ ಹಂತದಲ್ಲಿ ತಿಲಕ್ ವರ್ಮಾ 10 ಎಸೆತಗಳಲ್ಲಿ 26 ರನ್ ಸಿಡಿಸಿ ಹಾಗೂ ಟಿಮ್ ಡೇವಿಡ್ 10 ಎಸೆತಗಳಲ್ಲಿ 19 ರನ್ ಬಾರಿಸಿ 18.5 ಓವರ್​ಗಳಲ್ಲೇ 216 ರನ್ ಗಳಿಸಿ ಗೆಲುವು ಸಾಧಿಸುವಂತೆ ಮಾಡಿದರು.

7 / 8
ಈ ಮೂಲಕ ಮುಂಬೈ ವಿಶೇಷ ಸಾಧನೆ ಗೈದಿದೆ. ಮೊಹಾಲಿ ಕ್ರೀಡಾಂಗಣದಲ್ಲಿ 200+ ರನ್ ಟಾರ್ಗೆಟ್ ಬೆನ್ನಟ್ಟಿ ಗೆದ್ದ ಮೊದಲ ತಂಡ ಮುಂಬೈ ಇಂಡಿಯನ್ಸ್ ಆಗಿದೆ. ಅಲ್ಲದೆ ಐಪಿಎಲ್​ನಲ್ಲಿ ಸತತವಾಗಿ ಎರಡು ಬಾರಿ 200+ ಗುರಿ ಬೆನ್ನಟ್ಟಿ ಗೆದ್ದ ತಂಡ ಮುಂಬೈ ಆಗಿದೆ.

8 / 8
Follow us
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ

ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್

ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ

‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ

ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ

ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ

ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ

ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್

ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ