- Kannada News Photo gallery Cricket photos Pakistan commentator Bazid Khan called Danny Morrison Dani Daniels Adult Actress Responds see pics
ನನ್ನನ್ನು ಪಾಕ್ ತಂಡ ಕೋಚ್ ಆಗಿ ನೇಮಿಸಿ ಎಂದ ನೀಲಿ ತಾರೆ ಡ್ಯಾನಿ ಡೇನಿಯಲ್ಸ್! ಕಾರಣ ಕೇಳಿದ್ರೆ ನೀವು ಕೂಡ ನಗ್ತೀರ
PAK vs NZ: ಕಾಮೆಂಟರಿ ಮಾಡುವ ಬರದಲ್ಲಿ ಬಾಜಿದ್ ಖಾನ್ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರನ ಡ್ಯಾನಿ ಮಾರಿಸನ್ ಹೆಸರನ್ನು ಹೇಳುವ ಬದಲು ಅಮೇರಿಕನ್ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ಸ್ ಹೆಸರನ್ನು ಉಚ್ಚರಿಸಿದ್ದಾರೆ.
Updated on:Jan 05, 2023 | 5:15 PM

ಕರಾಚಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ರೋಚಕ ಹಂತ ತಲುಪಿದೆ. ಈಗಾಗಲೇ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕಿವೀಸ್ ಪಡೆ ಪಾಕಿಸ್ತಾನಕ್ಕೆ ಬೃಹತ್ ಟಾರ್ಗೆಟ್ ನೀಡುವ ಪ್ಲಾನ್ ಹಾಕಿಕೊಂಡಂತೆ ತೋರುತ್ತಿದೆ.

ಆದರೆ ಇದೆಲ್ಲದರ ನಡುವೆ ಪಾಕಿಸ್ತಾನದ ಮಾಜಿ ಆಟಗಾರ ಹಾಗೂ ಈ ಪಂದ್ಯದಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಜಿದ್ ಖಾನ್ ಮಾಡಿದ ಒಂದೇ ಒಂದು ಎಡವಟ್ಟಿನಿಂದ ಉಭಯ ದೇಶಗಳ ನಡುವಿನ ಟೆಸ್ಟ್ ಪಂದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.

ವಾಸ್ತವವಾಗಿ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಕಾಮೆಂಟರಿ ಮಾಡುತ್ತಿದ್ದ ಪಾಕಿಸ್ತಾನದ ಬಾಜಿದ್ ಖಾನ್, ಮಾಜಿ ನ್ಯೂಜಿಲೆಂಡ್ ಆಟಗಾರನ ಹೆಸರನ್ನು ತೆಗೆದುಕೊಳ್ಳುವ ಬದಲು ಅಮೇರಿಕಾದ ಪೋರ್ನ್ ಸ್ಟಾರ್ ಹೆಸರನ್ನು ತೆಗೆದುಕೊಂಡಿದ್ದಾರೆ.

ಕಾಮೆಂಟರಿ ಮಾಡುವ ಬರದಲ್ಲಿ ಬಾಜಿದ್ ಖಾನ್ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರನ ಡ್ಯಾನಿ ಮಾರಿಸನ್ ಹೆಸರನ್ನು ಹೇಳುವ ಬದಲು ಅಮೇರಿಕನ್ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ಸ್ ಹೆಸರನ್ನು ಉಚ್ಚರಿಸಿದ್ದಾರೆ.

ಪಾಕಿಸ್ತಾನದ ಕಾಮೆಂಟೇಟರ್ ಡ್ಯಾನಿ ಡೇನಿಯಲ್ಸ್ ಹೆಸರನ್ನು ಉಚ್ಚರಿಸಿದ್ದೆ ಬಂತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋ ನೀಲಿ ತಾರೆ ಡ್ಯಾನಿ ಡೇನಿಯಲ್ಸ್ಗೂ ತಲುಪಿದೆ.

ಈ ವಿಡಿಯೋ ನೋಡಿರುವ ಡ್ಯಾನಿ ಡೇನಿಯಲ್ಸ್ 'ನನ್ನನ್ನು ತಂಡದ ಕೋಚ್ ಆಗಿ ನೇಮಿಸಿಕೊಳ್ಳಿ ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

ಬಾಜಿದ್ ಖಾನ್ ಉದ್ದೇಶಪೂರ್ವಕವಾಗಿ ಈ ಕೆಲಸವನ್ನು ಮಾಡಿದಿದ್ದರೂ, ಈ ವಿಡಿಯೋ ವೈರಲ್ ಆದ ನಂತರ ಪಾಕಿಸ್ತಾನದ ಈ ಆಟಗಾರನನ್ನು ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ.
Published On - 5:12 pm, Thu, 5 January 23




