ನಾ ಕ್ರಿಕೆಟ್ ಆಡ್ತಿದ್ದೆ… ಅದಕ್ಕೆ ಫಿಟ್​ನೆಸ್ ಕಡೆ ಗಮನ ಕೊಡೋಕೆ ಆಗಿಲ್ಲ..!

Updated on: Sep 01, 2025 | 8:54 AM

Azam Khan: ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಆಝಂ ಖಾನ್ ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಮುಖ್ಯ ಕಾರಣ ಅವರು ತಮ್ಮ ಫಿಟ್​ನೆಸ್ ಬಗ್ಗೆ ನೀಡಿರುವ ಕುಂಟು ನೆಪ. ಇದೀಗ ಆಝಂ ಖಾನ್ ಅವರ ಹೇಳಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. 

1 / 6
ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಆಝಂ ಖಾನ್ (Azam Khan) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕೂಡ ಅವರು ಸುದ್ದಿಯಲ್ಲಿರುವುದು ಫಿಟ್​ನೆಸ್ ಕಾರಣದಿಂದಾಗಿ. ಅಂದರೆ ದಢೂತಿ ದೇಹದ ಆಝಂ ಖಾನ್ ಅವರ ಆಯ್ಕೆ ಬಗ್ಗೆ ಹಲವು ಬಾರಿ ಪ್ರಶ್ನೆಗಳೆದ್ದಿದ್ದವು.

ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಆಝಂ ಖಾನ್ (Azam Khan) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕೂಡ ಅವರು ಸುದ್ದಿಯಲ್ಲಿರುವುದು ಫಿಟ್​ನೆಸ್ ಕಾರಣದಿಂದಾಗಿ. ಅಂದರೆ ದಢೂತಿ ದೇಹದ ಆಝಂ ಖಾನ್ ಅವರ ಆಯ್ಕೆ ಬಗ್ಗೆ ಹಲವು ಬಾರಿ ಪ್ರಶ್ನೆಗಳೆದ್ದಿದ್ದವು.

2 / 6

ಈ ಪಶ್ನೆಗಳ ನಡುವೆಯೇ ಆಝಂ ಖಾನ್ ಹಲವು ಬಾರಿ ಪಾಕಿಸ್ತಾನ್ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರ ಪ್ರದರ್ಶನ ಅಷ್ಟಕಷ್ಟೇ ಆಗಿರುತ್ತಿತ್ತು. ಅಷ್ಟೇ ಅಲ್ಲದೆ ಫಿಟ್​ನೆಸ್ ಕಾರಣ ಕಳಪೆ ವಿಕೆಟ್ ಕೀಪಿಂಗ್ ಪ್ರದರ್ಶಿಸುತ್ತಾರೆ ಎಂಬ ಟೀಕೆಗಳು ಕೇಳಿ ಬರುತ್ತಿದ್ದವು. ಈ ಟೀಕೆಗಳ ಕಾರಣ ಕಳೆದೊಂದು ವರ್ಷದಿಂದ ಆಝಂ ಖಾನ್ ಪಾಕ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.

3 / 6

ಇದೀಗ ಸಂದರ್ಶನವೊಂದರಲ್ಲಿ ತನ್ನ ಫಿಟ್​ನೆಸ್ ಬಗ್ಗೆ ಆಝಂ ಖಾನ್ ಮಾತನಾಡಿದ್ದಾರೆ. ಅಚ್ಚರಿ ಎಂಬಂತೆ, ಅವರು ಫಿಟ್​ನೆಸ್ ಕಳಪೆಯಾಗಿರಲು ಮುಖ್ಯ ಕಾರಣ ಕ್ರಿಕೆಟ್ ಆಡುತ್ತಿರುವುದಂತೆ. ಅಂದರೆ ಕಳೆದ ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್​ ಆಡುತ್ತಿರುವ ಕಾರಣ ಫಿಟ್​ನೆಸ್ ಕಡೆ ಗಮನಹರಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

4 / 6

ನನಗೆ ಪಾಕಿಸ್ತಾನ್ ತಂಡದಲ್ಲಿ ಸ್ಥಾನ ಸಿಗದಿದ್ದಾಗ,  ಹಲವು ಲೀಗ್‌ಗಳಲ್ಲಿ ಕಣಕ್ಕಿಳಿಯುತ್ತೇನೆ. ಇದರಿಂದಾಗಿ ನನಗೆ ನನ್ನ ದೇಹದತ್ತ ಗಮನ ಕೊಡಲು ಸಾಧ್ಯವಾಗಿಲ್ಲ. ಇದೇ ಕಾರಣದಿಂದಾಗಿ ನಾನು ಫಿಟ್ ಆಗಿಲ್ಲ ಅಷ್ಟೇ ಎಂದು ಆಝಂ ಖಾನ್ ಹೇಳಿದ್ದಾರೆ.

5 / 6

ಇದೀಗ ಆಝಂ ಖಾನ್ ನೀಡಿರುವ ಹೇಳಿಕೆಯು ಭಾರೀ ವೈರಲ್ ಆಗಿದೆ.  ಸಾಮಾನ್ಯವಾಗಿ ಕ್ರಿಕೆಟಿಗರು ಫಿಟ್​ನೆಸ್​ ಸಾಧಿಸಿ ಅಂಗಳಕ್ಕಿಳಿಯುತ್ತಾರೆ. ಆದರೆ ಆಝಂ ಖಾನ್ ಕ್ರಿಕೆಟ್ ಆಡುತ್ತಿರುವ ಕಾರಣ ಫಿಟ್​ನೆಸ್​ನತ್ತ ಗಮನ ಕೊಡಲು ಸಮಯ ಸಿಗುತ್ತಿಲ್ಲ ಎಂದೇಳಿ ನಗೆಪಾಟಲಿಗೀಡಾಗಿದ್ದಾರೆ.

6 / 6

ಅಂದಹಾಗೆ ಈ ಆಝಂ ಖಾನ್ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಮೊಯೀನ್ ಖಾನ್ ಅವರ ಮಗ. ಪಾಕಿಸ್ತಾನ್ ಪರ ಈವರೆಗೆ 14 ಟಿ20 ಪಂದ್ಯಗಳಲ್ಲಿ 13 ಇನಿಂಗ್ಸ್ ಆಡಿರುವ ಆಝಂ ಕಲೆಹಾಕಿರುವುದು 88 ರನ್​ಗಳು ಮಾತ್ರ. ಅಂದರೆ ಪ್ರತಿ ಪಂದ್ಯದ ಅವರ ರನ್ ಸರಾಸರಿ 8.8, ಇದಾಗ್ಯೂ ಅವರು ಕಳೆದ ವರ್ಷದವರೆಗೆ ಪಾಕಿಸ್ತಾನ್ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದರು ಎಂಬುದೇ ಅಚ್ಚರಿ.

Loading...
Unable to load recommendations.
Follow Us