IPL 2022: ಐಪಿಎಲ್​ನಿಂದ ಸ್ಟಾರ್ ಬೌಲರ್ ಅನ್ರಿಕ್ ನೋಕಿಯಾ ಔಟ್! ಬದಲಿಯಾಗಿ ಯಾರು ಬರಬಹುದು?

IPL 2022: ಸೊಂಟದ ಗಾಯದಿಂದಾಗಿ ಅನ್ರಿಕ್ ನೋಕಿಯಾ ಈ ವರ್ಷ ಐಪಿಎಲ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವದಿರುವುದು ದೆಹಲಿ ಕ್ಯಾಪಿಟಲ್ಸ್‌ಗೆ ದೊಡ್ಡ ಹೊಡೆತವಾಗಿದೆ.

ಪೃಥ್ವಿಶಂಕರ
|

Updated on: Mar 10, 2022 | 9:30 PM

ಐಪಿಎಲ್-2022 ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಭಾರೀ ಹಿನ್ನಡೆ ಅನುಭವಿಸಿದೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಅನ್ರಿಕ್ ನೋಕಿಯಾ ಸೊಂಟದ ಗಾಯದಿಂದಾಗಿ ಮುಂಬರುವ ಲೀಗ್‌ನಿಂದ ಹೊರಗುಳಿದಿದ್ದಾರೆ. ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿ ಅವರನ್ನು 6.5 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಅನ್ರಿಕ್ ನೋಕಿಯಾ ಕಳೆದ ವರ್ಷ ಅಮೋಘ ಪ್ರದರ್ಶನ ನೀಡಿದ್ದರು ಮತ್ತು ತಂಡದ ಯಶಸ್ಸಿನಲ್ಲಿ ಪ್ರಮುಖ ಅಂಶವಾಗಿದ್ದರು. ಆದರೆ ಈ ಋತುವಿನಲ್ಲಿ ಅವರು ಆಡುವುದಿಲ್ಲ. ದೆಹಲಿ ಈಗ ತಮ್ಮ ಆಯ್ಕೆಗಳನ್ನು ಹುಡುಕುವತ್ತ ಗಮನ ಹರಿಸುತ್ತಿದೆ. ಈ ರೀತಿಯಾಗಿ, ದೆಹಲಿಯಲ್ಲಿ ಅನ್ರಿಕ್ ನೋಕಿಯಾರನ್ನು ಬದಲಾಯಿಸಬಹುದಾದ ಆಟಗಾರರ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

1 / 4
ಇಶಾಂತ್ ಶರ್ಮಾ ಐಪಿಎಲ್-2022 ಹರಾಜಿನಲ್ಲಿ ಮಾರಾಟವಾಗದ ಹೆಸರು. ಹಿಂದಿನ ಋತುಗಳಲ್ಲಿ ಅವರು ದೆಹಲಿಯ ಭಾಗವಾಗಿದ್ದರು. ಇಶಾಂತ್ ಫ್ರಾಂಚೈಸಿಯ ಸೆಟಪ್‌ನ ಭಾಗವಾಗಿದ್ದಾರೆ ಮತ್ತು ಅನುಭವವನ್ನು ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೆಹಲಿ ಮತ್ತೊಮ್ಮೆ ತನ್ನೊಂದಿಗೆ ಸೇರಿಕೊಳ್ಳಬಹುದು. ಇಶಾಂತ್ ಐಪಿಎಲ್ ನಲ್ಲಿ ಇದುವರೆಗೆ 93 ಪಂದ್ಯಗಳನ್ನು ಆಡಿದ್ದು, 73 ವಿಕೆಟ್ ಪಡೆದಿದ್ದಾರೆ.

2 / 4
IPL 2022: ಐಪಿಎಲ್​ನಿಂದ ಸ್ಟಾರ್ ಬೌಲರ್ ಅನ್ರಿಕ್ ನೋಕಿಯಾ ಔಟ್! ಬದಲಿಯಾಗಿ ಯಾರು ಬರಬಹುದು?

ಆಸ್ಟ್ರೇಲಿಯದ ವೇಗದ ಬೌಲರ್ ಆಂಡ್ರ್ಯೂ ಟೈ ಅವರನ್ನು ಹರಾಜಿನಲ್ಲಿ ಯಾರೂ ಖರೀದಿಸಲಿಲ್ಲ. ಅವರ ಮೂಲ ಬೆಲೆ ಒಂದು ಕೋಟಿ ಆದರೆ ಅವರು ಖರೀದಿದಾರರನ್ನು ಹುಡುಕಲು ಸಾಧ್ಯವಾಗಲಿಲ್ಲ. ಅವರು ಅನ್ರಿಕ್ ನೋಕಿಯಾಗೆ ಉತ್ತಮ ಪರ್ಯಾಯ ಎಂದು ಸಾಬೀತುಪಡಿಸಬಹುದು. ಅವರು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ. ಇದುವರೆಗೆ 27 ಐಪಿಎಲ್ ಪಂದ್ಯಗಳನ್ನು ಆಡಿರುವ ಅವರು 40 ವಿಕೆಟ್ ಪಡೆದಿದ್ದಾರೆ. ಐಪಿಎಲ್-2018ರಲ್ಲಿ ಪಂಜಾಬ್ ಪರ ಆಡಿದ್ದು, ಅತಿ ಹೆಚ್ಚು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

3 / 4
IPL 2022: ಐಪಿಎಲ್​ನಿಂದ ಸ್ಟಾರ್ ಬೌಲರ್ ಅನ್ರಿಕ್ ನೋಕಿಯಾ ಔಟ್! ಬದಲಿಯಾಗಿ ಯಾರು ಬರಬಹುದು?

ಆಸ್ಟ್ರೇಲಿಯದ ಕೇನ್ ರಿಚರ್ಡ್ಸನ್ ಅನ್ರಿಕ್ ನೋಕಿಯಾ ಸ್ಥಾನವನ್ನು ಅಲಂಕರಿಸಬಹುದು. ಈ ಬಲಗೈ ಬೌಲರ್ ಕೂಡ ಹರಾಜಿನಲ್ಲಿ ಮಾರಾಟವಾಗಲಿಲ್ಲ. ಮೂಲ ಬೆಲೆ 1.5 ಕೋಟಿ ಇಟ್ಟುಕೊಂಡಿದ್ದರು .ಐಪಿಎಲ್ ನಲ್ಲಿ ಈ ಆಟಗಾರ ಇದುವರೆಗೆ 15 ಪಂದ್ಯಗಳನ್ನು ಆಡಿದ್ದು 19 ವಿಕೆಟ್ ಪಡೆದಿದ್ದಾರೆ.

4 / 4
Follow us
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್