- Kannada News Photo gallery Cricket photos RCB vs LSG Here is the photos of Royal Challengers Bangalore vs Lucknow Super Giants IPL 2023 Match Photos
RCB vs LSG, IPL 2023: ಕೊನೆಯ 1 ಬಾಲ್ನಲ್ಲಿ 1 ರನ್: ಆರ್ಸಿಬಿ-ಎಲ್ಎಸ್ಜಿ ಪಂದ್ಯ ರೋಚಕ ಫೋಟೋಗಳು ಇಲ್ಲಿದೆ ನೋಡಿ
Bangalore vs Lucknow: ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಭರ್ಜರಿ ಅರ್ಧಶತಕದ ಆಟವಾಡಿದರು. ಪರಿಣಾಮ ಬೆಂಗಳೂರು ಎರಡು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.
Updated on:Apr 11, 2023 | 9:35 AM

ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿತು. ಉಭಯ ತಂಡಗಳು ಕೂಡ ಸಂಪೂರ್ಣ 20 ಓವರ್ಗಳನ್ನು ಆಡಿದವು.

200+ ರನ್ ಟಾರ್ಗೆಟ್ ನೀಡಿದ್ದರೂ ಮಾರ್ಕಸ್ ಸ್ಟೊಯಿನಿಸ್ ಮತ್ತು ನಿಕೋಲಸ್ ಪೂರನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಕೆಎಲ್ ರಾಹುಲ್ ಪಡೆಯು ಒಂದು ವಿಕೆಟ್ನಿಂದ ರೋಚಕ ಗೆಲುವು ಸಾಧಿಸಿತು.

ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರ ಭರ್ಜರಿ ಅರ್ಧಶತಕದ ಆಟವಾಡಿದರು. ಪರಿಣಾಮ ಬೆಂಗಳೂರು ಎರಡು ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.

44 ಎಸೆತಗಳನ್ನು ಎದುರಿಸಿದ ಕೊಹ್ಲಿ 4 ಬೌಂಡರಿ ಮತ್ತು 4 ಸಿಕ್ಸ್ನಿಂದ 61 ರನ್ ಸಿಡಿಸಿದರು. ಈ ಮೂಲಕ ಐಪಿಎಲ್ ವೃತ್ತಿಜೀವನದ 46ನೇ ಅರ್ಧಶತಕ ದಾಖಲಿಸಿದರು.

ನಂತರ ಫಾಫ್ ಜೊತೆಯಾದ ಮ್ಯಾಕ್ಸ್ವೆಲ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಆಸೀಸ್ ದಾಂಡಿಗ ತಮ್ಮ ಹಳೆಯ ಬ್ಯಾಟಿಂಗ್ ವೈಖರಿಯನ್ನು ಪ್ರದರ್ಶಿಸಿದರು. 29 ಬಾಲ್ನಲ್ಲಿ 6 ಸಿಕ್ಸ್ ಮತ್ತು 3 ಬೌಂಡರಿಯಿಂದ 59 ರನ್ ಗಳಿಸಿ, ಇನ್ನಿಂಗ್ಸ್ ಮುಕ್ತಾಯಕ್ಕೆ ಒಂದು ಬಾಲ್ ಬಾಕಿ ಇದ್ದಾಗ ವಿಕೆಟ್ ಒಪ್ಪಿಸಿದರು.

ಇತ್ತ ನಾಯಕ ಫಾಫ್ ಡುಪ್ಲೆಸಿಸ್ 46 ಬಾಲ್ನಲ್ಲಿ 5 ಸಿಕ್ಸರ್ ಮತ್ತು 5 ಬೌಂಡರಿಯಿಂದ 79 ರನ್ ಗಳಿಸಿ ಅಜೇಯರಾಗುಳಿದರು. ಆರ್ಸಿಬಿ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. ಲಖನೌ ಪರ ಮಾರ್ಕ್ ವುಡ್ ಮತ್ತು ಅಮಿತ್ ಮಿಶ್ರಾ ತಲಾ ಒಂದೊಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಲಖನೌ ತಂಡಕ್ಕೆ ಆರ್ಸಿಬಿ ಬೌಲರ್ಗಳು ಆರಂಭದಲ್ಲಿ ಕಾಡಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೊಯಿನಿಸ್ (30 ಎಸೆತಗಳಲ್ಲಿ 65 ರನ್) ಮತ್ತು ನಿಕೋಲಾಸ್ ಪೂರನ್ (19 ಎಸೆತಗಳಲ್ಲಿ 62 ರನ್) ಸ್ಫೋಟಕ ಬ್ಯಾಟಿಂಗ್ ನಡೆಸಿದರು.

ಆಯುಷ್ ಬದೋನಿ (24 ಎಸೆತಗಳಲ್ಲಿ 30 ರನ್) ಕೂಡ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯ ಎಸೆತದವರೆಗೂ ಗೆಲುವು ಯಾರಿಗೆಂದು ನಿರ್ಧರಿಸಲು ಸಾಧ್ಯವಾಗಲಿಲ್ಲ. 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದ ಎಸಲ್ಎಸ್ಜಿ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿತು.
Published On - 9:33 am, Tue, 11 April 23



















